Namma Metro: ನೇರಳೆ ಮಾರ್ಗದಲ್ಲಿ ಒಂದೇ ದಿನ 3.35ಲಕ್ಷ ಜನ ಸಂಚಾರ; ಜನಸಂದಣಿಯಿಂದ ರೋಸಿಹೋದ ಟೆಕ್ಕಿ
ನಮ್ಮ ಮೆಟ್ರೋದ ಸಂಪೂರ್ಣ ನೇರಳೆ ಮಾರ್ಗ ಚಲ್ಲಘಟ್ಟ-ವೈಟ್‌ಫೀಲ್ಡ್ (43.49ಕಿಮೀ) ಪೂರ್ಣಪ್ರಮಾಣದಲ್ಲಿ ಆರಂಭವಾಗಿರುವುದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಸೋಮವಾರದಿಂದ ಮೆಟ್ರೋ ರೈಲು ಸೇವೆ ಪ್ರಾರಂಭವಾಗಿದ್ದು, ಬೆಳಗ್ಗೆ 5 ಗಂಟೆಗೆ ಮೊದಲ ರೈಲು ವೈಟ್ ಫೀಲ್ಡ್ನಿಂದ ಚಲ್ಲಘಟ್ಟಕ್ಕೆ ಪ್ರಯಾಣಿಸಿತು.
ಬೆಂಗಳೂರು ಅ.10: ನಮ್ಮ ಮೆಟ್ರೋದ ಸಂಪೂರ್ಣ ನೇರಳೆ ಮಾರ್ಗ (Purple Line) ಚಲ್ಲಘಟ್ಟ-ವೈಟ್‌ಫೀಲ್ಡ್ (43.49ಕಿಮೀ) (Challaghatta-Whitefield) ಪೂರ್ಣಪ್ರಮಾಣದಲ್ಲಿ ಆರಂಭವಾಗಿರುವುದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಸೋಮವಾರದಿಂದ ಮೆಟ್ರೋ (Namma Metro) ರೈಲು ಸೇವೆ ಪ್ರಾರಂಭವಾಗಿದ್ದು, ಬೆಳಗ್ಗೆ 5 ಗಂಟೆಗೆ ಮೊದಲ ರೈಲು ವೈಟ್ ಫೀಲ್ಡ್ನಿಂದ ಚಲ್ಲಘಟ್ಟಕ್ಕೆ ಪ್ರಯಾಣಿಸಿತು. ಮೊದಲ ದಿನ ರಾತ್ರಿ 9 ಗಂಟೆವರೆಗೆ ಹೆಚ್ಚುವರಿ 40-50 ಸಾವಿರ ಪ್ರಯಾಣಿಕರು ಸಂಚರಿಸಿದ್ದಾರೆ.
ಸಂಜೆ ಆರು ಗಂಟೆವರೆಗೆ ನೇರಳೆ ಮಾರ್ಗದಲ್ಲಿ ಸೋಮವಾರ 3.35ಲಕ್ಷ ಜನ ಸಂಚರಿಸಿದ್ದು, ಎಂದಿಗಿಂತ 25 ಸಾವಿರ ಹೆಚ್ಚಿನ ಜನರು ಪ್ರಯಾಣಿಸಿದ್ದಾರೆ. ಸೋಮವಾರ ರಾತ್ರಿ 9 ಗಂಟೆವರೆಗೆ ನೇರಳೆ ಮಾರ್ಗದಲ್ಲಿ 2,89,105 ಹಾಗೂ ಹಸಿರು ಮಾರ್ಗದಲ್ಲಿ 2,18,211 ಸೇರಿ 5,07,316 ಜನ ಪ್ರಯಾಣಿಸಿದ್ದಾರೆ. ರೀಚ್1ಇ ಅಂದರೆ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗೆ 54,428 ಪ್ರಯಾಣಿಕರು ಸಂಚರಿಸಿದ್ದಾರೆ.
ಇಲ್ಲಿ ಸಾಮಾನ್ಯ ನಿತ್ಯ 25-30 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದರು. ಸಹಜವಾಗಿ ಮೆಟ್ರೋದಲ್ಲಿ ಪ್ರತಿದಿನ 6.30ಲಕ್ಷ ಜನ ಸಂಚರಿಸುತ್ತಿದ್ದು, ಸೋಮವಾರ ಅಂದಾಜು 6.15 ಲಕ್ಷ ಜನ ಸಂಚರಿಸಿದ್ದಾರೆ ಮುಂದಿನ ವಾರದ ಹೊತ್ತಿಗೆ ಪ್ರಯಾಣಿಕರ ಸಂಖ್ಯೆ ನಿಮಿಷಕ್ಕೆ ಒಂದು ಲಕ್ಷ ಮೀರುವ ನಿರೀಕ್ಷೆಯಿದ್ದು, ವಾರಾಂತ್ಯದಲ್ಲಿ ಮತ್ತಷ್ಟು ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಲಿದ್ದಾರೆ ಎಂದು ಎಂದು ಬಿಎಂ ಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ಘಾಟನಾ ಕಾರ್ಯಕ್ರಮವಿಲ್ಲದೇ ಚಲ್ಲಘಟ್ಟ-ವೈಟ್‌ಫೀಲ್ಡ್ ನಮ್ಮ ಮೆಟ್ರೋ ಆರಂಭ: ಇಲ್ಲಿದೆ ವೇಳಾಪಟ್ಟಿ
ಭಾನುವಾರದವರೆಗೆ ಕೆಂಗೇರಿಯಿಂದ ಬೈಯಪ್ಪನಹಳ್ಳಿ ಮತ್ತು ಕೆಆರ್ಪುರದಿಂದ ವೈಟ್‌ಫೀಲ್ಡ್ ವರೆಗೆ ನೇರಳೆ ಮಾರ್ಗದಲ್ಲಿ ಮೆಟ್ರೊ ರೈಲು ಓಡಿಸಲಾಗಿತ್ತು. ಕೆಆರ್ಪುರಗೆ ಹೋಗುವ ಮತ್ತು ಮುಂದೆ ವೈಟ್ಫೀಲ್ಡ್ಗೆ ಹೋಗುವ ಪ್ರಯಾಣಿಕರು ಬೈಯಪ್ಪನಹಳ್ಳಿಯಲ್ಲಿ ಇಳಿದುಕೊಂಡು ಬಸ್, ಕ್ಯಾಬ್ ಅಥವಾ ಇನ್ನಿತರ ಸಾರಿಗೆ ವ್ಯವಸ್ತೆ ಮೂಲಕ ಹೋಗುತ್ತಿದ್ದರು. ಇದರಿಂದ ಜನರು ಹೆಣಗಾಡುತ್ತಿದ್ದರು. ನಾಲ್ಕು ಕಿಮೀ ಪ್ರಯಾಣಿಸಲು 20-30 ನಿಮಿಷ ಸಮಯ ಬೇಕಾಗಿತ್ತು.
ಈ ಬಗ್ಗೆ ಪ್ರಯಾಣಿಕ ತರುಣಿಮಾ ವರ್ಮಾ ಎಂಬುವರು ಮಾತನಾಡಿ ” ಸಂಪೂರ್ಣ ನೇರಳೆ ಮಾರ್ಗವನ್ನು ತೆರೆಯುವುದರಿಂದ ದೈನಂದಿನ ಪ್ರಯಾಣಿಕರಿಗೆ ದೊಡ್ಡ ರೀತಿಯಲ್ಲಿ ಸಹಾಯವಾಗುತ್ತದೆ. ನಾನು ಆಗಾಗ್ಗೆ ನಗರ ಹೃದಯಭಾಗಕ್ಕೆ ಪ್ರಯಾಣಿಸುತ್ತೇನೆ. ಈ ವೇಳೆ ರಸ್ತೆಯ ಮೂಲಕ ಪ್ರಯಾಣಿಸುವುದು ಹೆಚ್ಚು ಆಯಾಸ ಮತ್ತು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇದೀಗ ಈ ಸಂಪರ್ಕದಿಂದ ನಮಗೆ ಅನುಕೂಲವಾಗಿದೆ ಎಂದರು.
ಮಾನಸಾ ಎಂಬುವರು ಮಾತನಾಡಿ ” ಹಲಸೂರಿನಿಂದ ಬೆನ್ನಿಗಾನಹಳ್ಳಿಗೆ ಪ್ರಯಾಣಿಸಲು ಆಟೊದಲ್ಲಿ 240 ರೂ. ವ್ಯಯಿಸುತ್ತಿದ್ದೆ. ಕೆ.ಆರ್.ಪುರ-ಬೈಯಪ್ಪನಹಳ್ಳಿ ಮಾರ್ಗ ಆರಂಭವಾದ ನಂತರ ಬೆನ್ನಿಗಾನಹಳ್ಳಿಯಿಂದ ಹಲಸೂರಿಗೆ ದಿನಕ್ಕೆ 34 ರೂ.ಗೆ ಪ್ರಯಾಣಿಸಬಹುದು. ಉಳಿತಾಯದ ಜತೆಗೆ ಪ್ರಯಾಣ, ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ತಪ್ಪಿಸಬಹುದು ಎಂದರು.
ಕೂರಲು ಸಹಿತ ಸಾಧ್ಯವಾಗದಷ್ಟು ಜಸಂದಣಿ ಇದೆ
Who’s showing you the full reality?
Majestic today at around 10AM following the commencement of trains towards Whitefield on purple line.
There is definitely a larger question about micro-level planning that needs to be addressed here.
#PurpleLine pic.twitter.com/tgFf9gDys7
— sna (@snanapants) October 9, 2023
ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ವಿಭಾಗದಲ್ಲಿ ಜನಸಂದಣಿಯ ಸಮಯದಲ್ಲಿ ರೈಲುಗಳು ತುಂಬಿ ತುಳುಕುತ್ತಿದ್ದವು. “ನಾನು ಸಾಮಾನ್ಯವಾಗಿ ಕೆಆರ್ಪುರ ಮತ್ತು ವೈಟ್‌ಫೀಲ್ಡ್ ನಡುವೆ ಪ್ರಯಾಣಿಸುತ್ತೇನೆ. ಆವಾಗ ನನಗೆ ಕೂರಲು ಸೀಟ್ ಸಿಗುತ್ತಿತ್ತು. ಆದರೆ ಮೊದಲ ಬಾರಿಗೆ ಸೋಮವಾರ ಸಂಜೆ ನಾನು ನಿಂತುಕೊಂಡು ಪ್ರಯಾಣಿಸಿದ್ದೇನೆ. ಇದು ಮುಂಬರುವ ದಿನಗಳಲ್ಲಿ ವೈಟ್‌ಫೀಲ್ಡ್ ಲೈನ್‌ಗೆ ಹೆಚ್ಚಿನ ಪ್ರೋತ್ಸಾಹದ ಸಂಕೇತವಾಗಬಹುದು.” ಎಂದು ಟೆಕ್ಕಿ ವಿಘ್ನೇಶ್ ಎಸ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 am, Tue, 10 October 23