
ಬೆಂಗಳೂರು: ಸವಾರರ ಸ್ಪೀಡ್ಗೆ ಬ್ರೇಕ್ ಹಾಕಲು ನಗರದಲ್ಲಿ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಹಂಪ್ಗಳನ್ನು ಅಳವಡಿಸಲಾಗಿದೆ. ಇದರಿಂದ ಅನೇಕ ಸವಾರರು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಜಯನಗರದ ಮೌಂಟ್ ಕಾರ್ಮೆಲ್ ಶಾಲೆ ಸಮೀಪ ಇರುವ ಅವೈಜ್ಞಾನಿಕ ಹಂಪ್ ಗೆ ಬಿದ್ದು ಬೈಕ್ ಸವಾರ ಇರ್ಷಾದ್ ಕೈ ಮುರಿದುಕೊಂಡ ಘಟನೆ ನಡೆದಿದೆ. ರಾತ್ರಿ ವೇಳೆ ಹಂಪ್ ಕಾಣದೆ ಬೈಕ್ ಸ್ಕಿಡ್ ಆಗಿ ಘಟನೆ ಸಂಭವಿಸಿದೆ. ಟ್ವಿಟರ್ ಹಾಗೂ ಫೇಸ್ಬುಕ್ ನಲ್ಲಿ ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸವಾರ ಇರ್ಷಾದ್ ಆಕ್ರೋಶ ಹೊರ ಹಾಕಿದ್ದಾರೆ.
ನಿತ್ಯ ಇದೇ ರಸ್ತೆಯಲ್ಲಿ ಮೂರರಿಂದ ನಾಲ್ಕು ಜನ ಬಿದ್ದು ಗಾಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಂಪ್ಸ್ ಕಾಣದೆ ಬಿದ್ದು ಹಲವು ಜನರಿಗೆ ಗಂಭೀರ ಗಾಯಗಳಾಗಿವೆ. ಬಿದ್ದಾಗ ಕೆಲವರಿಗೆ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ₹50 ಸಾವಿರದಿಂದ ಒಂದೂವರೆ ಲಕ್ಷ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಕ್ರಮಕೈಗೊಳ್ಳಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ. ರಾತ್ರಿ ಕೆಲಸ ಮುಗಿಸಿಕೊಂಡು ಜೆಪಿ ನಗರದಿಂದ ಆಡುಗೋಡಿಗೆ ತೆರಳುತ್ತಿದ್ದ ಇರ್ಷಾದ್ ಜಯನಗರದ ಬಳಿಯಿರುವ ಮೌಂಟ್ ಕಾರ್ಮೆಲ್ ಶಾಲೆಯ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಕೈ ಮುರಿದುಕೊಂಡಿದ್ದಾರೆ. ಕತ್ತಲಿದ್ದರಿಂದ ರಸ್ತೆಯಲ್ಲಿದ್ದ ಹಂಪ್ಸ್ ಕಾಣದೆ ಬೈಕ್ ಸ್ಕಿಡ್ ಆಗಿದೆ. ಬೈಕ್ನಿಂದ ಬಿದ್ದಾಗ ಸವಾರ ಇರ್ಷಾದ್ ಕೈಗೆ ಗಾಯವಾಗಿತ್ತು. ಹಂಪ್ ಮೇಲೆ ಕ್ಯಾಟ್ ಐ ಇಲ್ಲದಿರುವುದು ಘಟನೆಗೆ ಕಾರಣವಾಗಿದೆ.
ಇದನ್ನೂ ಓದಿ: ಅಪಘಾತ ತಡೆಗೆ ಬೆಂಗಳೂರಿನಲ್ಲಿ 500 ರೋಡ್ ಹಂಪ್ಸ್ ನಿರ್ಮಾಣಕ್ಕೆ ಬೇಡಿಕೆ ಇಟ್ಟ ಟ್ರಾಫಿಕ್ ಪೊಲೀಸರು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:48 am, Tue, 21 February 23