ಅಪಘಾತ ತಡೆಗೆ ಬೆಂಗಳೂರಿನಲ್ಲಿ 500 ರೋಡ್ ಹಂಪ್ಸ್​ ನಿರ್ಮಾಣಕ್ಕೆ ಬೇಡಿಕೆ ಇಟ್ಟ ಟ್ರಾಫಿಕ್ ಪೊಲೀಸರು

ಬೆಂಗಳೂರಿನಲ್ಲಾಗುತ್ತಿರುವ ರಸ್ತೆ ಅಪಘಾತ ತಡೆಗೆ 500 ರೋಡ್ ಹಂಪ್ಸ್ ನಿರ್ಮಾಣಕ್ಕೆ ಸಂಚಾರಿ ಪೊಲೀಸರು ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಅಪಘಾತ ತಡೆಗೆ ಬೆಂಗಳೂರಿನಲ್ಲಿ 500 ರೋಡ್ ಹಂಪ್ಸ್​ ನಿರ್ಮಾಣಕ್ಕೆ ಬೇಡಿಕೆ ಇಟ್ಟ ಟ್ರಾಫಿಕ್ ಪೊಲೀಸರು
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on:Oct 18, 2022 | 12:34 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಾಗುತ್ತಿರುವ ರಸ್ತೆ ಅಪಘಾತ ತಡೆಗೆ 500 ರೋಡ್ ಹಂಪ್ಸ್ ನಿರ್ಮಾಣಕ್ಕೆ ಸಂಚಾರಿ ಪೊಲೀಸರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ವೈಟ್‌ಫೀಲ್ಡ್, ಕೆಂಗೇರಿ, ಜಯನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಂಪ್ಸ್ ನಿರ್ಮಿಸಲು ಟ್ರಾಫಿಕ್ ಪೊಲೀಸರು ಬೇಡಿಕೆ ಇಟ್ಟಿದ್ದಾರೆ. ನಗರದ ಒಟ್ಟು 39 ಸಂಚಾರಿ ಪೊಲೀಸ್ ಠಾಣೆಗಳಿಂದ ಪ್ರತ್ಯೇಕವಾಗಿ ಈ ಪ್ರಸ್ತಾವನೆಗಳು ಸಲ್ಲಿಕೆ‌ಯಾಗಿವೆ.

ರೋಡ್ ಹಂಪ್ಸ್ ವಿವರ

    • ಜಯನಗರ – 47 ಹಂಪ್​ಗೆ ಬೇಡಿಕೆ ಇಡಲಾಗಿದೆ.
    • ಕೆಂಗೇರಿ – 44
    • ಹುಳಿಮಾವು – 33
    • ಆರ್.ಟಿ.ನಗರ – 32
    • ಬಾನಸವಾಡಿ – 21
    • ಹೂಡಿ – 22
    • ಮಹದೇವರ ಹಾಗೂ ಜೆಪಿನಗರ ತಲಾ – 19
    •  ಹಲಸೂರು ಗೇಟ್, ಜಾಲಹಳ್ಳಿ – 17
    • ರಾಜಾಜಿನಗರ – 16
    • ಮಲ್ಲೇಶ್ವರ – 14
    • ವಿವಿಪುರ – 12
    • ದೇವನಹಳ್ಳಿ – 11
    • ಯಶವಂತಪುರ – 10
    • ವಾರ್ಡ್ ರಸ್ತೆಗಳಲ್ಲಿ – 9
    • ಚಿಕ್ಕಪೇಟೆ – 8
    • ಯಲಹಂಕ – 6ಹಲಸೂರು, ಮೈಕೋ ಲೇಔಟ್, ಪುಲಕೇಶಿನಗರ, ವಿಜಯ ನಗರ ಹಾಗೂ ಎಚ್‌.ಎಸ್. ಆರ್ ಲೇಔಟ್ – 4, ಪಶ್ಚಿಮ ಸಂಚಾರಿ ಪೊಲೀಸರು – 3, ಚಿಕ್ಕಜಾಲ, ಎಚ್‌ಎಎಲ್, ಹೆಬ್ಬಾಳೆ, ಉಪ್ಪಾರು ಪೇಟೆ ಹಾಗೂ ವಿಲ್ಸನ್ ಗಾರ್ಡನ್ ತಲಾ – 2, ಶಿವಾಜಿ ನಗರ, ಪೀಣ್ಯ, ಹೈಗೌಂಡ್ಸ್, ಕೆಆರ್‌ಪುರ ಹಾಗೂ ಹೂಡಿ ಪೊಲೀಸರು – 1,

ನಗರದ ಅವೈಜ್ಞಾನಿಕ ಹಂಪ್ಸ್ ನಿಂದ ಮೂರು ವರ್ಷದಲ್ಲಿ ಸಂಭವಿಸಿದ ಅಪಘಾತಗಳ ವಿವಿರ ವರ್ಷ – ಅಪಘಾತ ಸಂಖ್ಯೆ – ಸಾವು • 2019ರಲ್ಲಿ 832 ಅಪಘಾತಗಳು ಸಂಭವಿಸಿದ್ದು 819 ಜನ ಮೃತಪಟ್ಟಿದ್ದಾರೆ. • 2020ರಲ್ಲಿ 656 ಪಘಾತಗಳು ಸಂಭವಿಸಿದ್ದು 632 ಜನ ಮೃತಪಟ್ಟಿದ್ದಾರೆ. • 2021ರಲ್ಲಿ 652 ಪಘಾತಗಳು ಸಂಭವಿಸಿದ್ದು 618 ಜನ ಮೃತಪಟ್ಟಿದ್ದಾರೆ.

ರಸ್ತೆ ಗುಂಡಿ ಮುಚ್ಚಿದ ಪೊಲೀಸರು

ರಸ್ತೆ ಗುಂಡಿಗಳಿಂದ ಸಾವು ಸಂಭವಿಸುತ್ತಿರುವ ಹಿನ್ನೆಲೆ ಟ್ರಾಫಿಕ್ ಪೊಲೀಸರೆ ರಸ್ತೆ ಗುಂಡಿ ಮುಚ್ಚಲು ಮುಂದಾಗಿದ್ದಾರೆ. ಮಲ್ಲೇಶ್ವರಂ ಸಂಚಾರಿ ಪೊಲೀಸರು ಸ್ಯಾಂಡಲ್ ವುಡ್ ಸೋಪ್ ಫ್ಯಾಕ್ಟರಿ ಬಳಿ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದಾರೆ. ಯಶವಂತಪುರ ಸಂಚಾರಿ ಪೊಲೀಸರು ಕೂಡ ತಮ್ಮ ವ್ಯಾಪ್ತಿಗೆ ಬರುವ ರಸ್ತೆಗಳು ಗುಂಡಿಯನ್ನು ಮುಚ್ಚುವ ಕಾರ್ಯ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಾಣಸವಾಡಿ ಸಂಚಾರಿ ಪೊಲೀಸರು ಹೆಣ್ಣೂರು ರಿಂಗ್ ರೋಡ್ ಅಂಡರ್ ಪಾಸ್ ನಲ್ಲಿ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದಾರೆ. ಹಾಗೂ ಜಾಲಹಳ್ಳಿ ಟ್ರಾಫಿಕ್ ಪೊಲೀಸರು ಬಿಎಫ್ ಡಬ್ಲ್ಯು ಜಂಕ್ಷನ್ ನಲ್ಲಿದ್ದ ಗುಂಡಿ ಮುಚ್ಚಿದ್ದಾರೆ.

Published On - 11:02 am, Tue, 18 October 22