Bengaluru Crime: ಬಂಡವಾಳ ಇಲ್ಲದೆ ಹಣ್ಣಿನ ವ್ಯಾಪಾರ ಮಾಡಿ ಹಣ ಸಂಪಾದನೆ ಮಾಡಿದ ವ್ಯಕ್ತಿಯನ್ನು ಅರೆಸ್ಟ್ ಮಾಡಿದ ಪೊಲೀಸ್
ದುಡ್ಡಿಲ್ಲದೆ ಹಣ್ಣಿನ ವ್ಯಾಪಾರ ಮಾಡಬೇಕೆಂದು ವ್ಯಾಪಾರಕ್ಕೆ ಇಳಿದಿದ್ದ ಖದೀಮ ಹಣ್ಣುಗಳನ್ನು ಕದ್ದು, ಮಾರಾಟಕ್ಕೆ ಹಣ್ಣಿಡಲು ಗಾಡಿಯನ್ನೂ ಕದ್ದಿದ್ದ. ಸದ್ಯ ಕಳ್ಳನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಆಟೋ ಮತ್ತು ಹಣ್ಣುಗಳನ್ನು ಕದಿಯುತ್ತಿದ್ದ ಡಿಜೆ ಹಳ್ಳಿ ನಿವಾಸಿಯಾದ ಮೊಹಮ್ಮದ್ ಅಝರ್ನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ದುಡ್ಡಿಲ್ಲದೆ ಹಣ್ಣಿನ ವ್ಯಾಪಾರ ಮಾಡಬೇಕೆಂದು ವ್ಯಾಪಾರಕ್ಕೆ ಇಳಿದಿದ್ದ ಖದೀಮ ಹಣ್ಣುಗಳನ್ನು ಕದ್ದು, ಮಾರಾಟಕ್ಕೆ ಹಣ್ಣಿಡಲು ಗಾಡಿಯನ್ನೂ ಕದ್ದಿದ್ದ. ಸದ್ಯ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಆರೋಪಿ ಅಝರ್ ಮೊದಲಿಗೆ ರಾಮಮೂರ್ತಿನಗರದಲ್ಲಿ ಮಾನಪ್ಪ ಎಂಬುವವರ ಆಪೆ ಆಟೋ ಕದ್ದು ಬಳಿಕ ಮೊಹಮ್ಮದ್ ನೌಷಾದ್ ಎಂಬುವವರ ತಳ್ಳುವ ಗಾಡಿಯಲ್ಲಿದ್ದ 5 ಬಾಕ್ಸ್ ಸೇಬು ಮೂರು ಚೀಲ ಮೂಸಂಬಿಯನ್ನ ಕದ್ದು ಎಸ್ಕೇಪ್ ಆಗಿದ್ದ. ನಂತರ ಮಾನಪ್ಪನವರ ಕದ್ದ ಆಟೋದಲ್ಲಿಯೇ ಸೇಬುಗಳನ್ನ ಇಟ್ಟು ವ್ಯಾಪಾರ ಶುರು ಮಾಡಿ ಹಣ ಸಂಪಾದಿಸಿದ್ದ. ಇಷ್ಟೆಲ್ಲ ಆದ ಮೇಲೆ ಆಟೋವನ್ನ ಅಲ್ಲಿಯೇ ಬಿಟ್ಟು ಹಣ್ಣು ಮಾರಿದ ಹಣದಿಂದ ಎಸ್ಕೇಪ್ ಆಗಿದ್ದ. ದೂರು ದಾಖಲಾಗುತ್ತಿದ್ದಂತೆ ತನಿಖೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಆರ್ಎಲ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ವಂಚನೆ
ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಮರಾಜು ಮತ್ತು ದಿನೇಶ್ ಬಂಧಿತ ಅರೋಪಿಗಳು. ವಿಆರ್ಎಲ್ ಪ್ಯಾಕರ್ಸ್ ಅಂಡ್ ಮೂವರ್ಸ್ ಹೆಸರಿನಲ್ಲಿ ವೆಬ್ ಸೈಟ್ ತೆರೆದು ತಮ್ಮದೇ ಫೋನ್ ನಂಬರ್ ಕೊಟ್ಟು ವಂಚನೆ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: Bidar Earthquake: ಪ್ರತಿದಿನವೂ ಭೂಮಿಯೊಳಗಿಂದ ಕೇಳಿಬರುತ್ತಿದೆ ಶಬ್ದ, ಜನರಲ್ಲಿ ಮನೆಮಾಡಿದ ಆತಂಕ
ತಡರಾತ್ರಿ ವ್ಯಕ್ತಿಗೆ ಚಾಕು ಇರಿತ
ಬೆಂಗಳೂರು: ಈಜಿಪುರದ ಚಾರ್ವಿ ಚರ್ಚ್ ಬಳಿ ಯೋಗೇಶ್(30) ಎಂಬಾತನಿಗೆ ಚಾಕು ಇರಿಯಲಾಗಿದೆ. ಕುಡಿದ ಮತ್ತಿನಲ್ಲಿ ಮೃತ ಯೋಗೇಶ್ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಹಲ್ಲೆಗೊಳಗಾದ ಯೋಗೇಶ್ ನನ್ನ ಸೇಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Published On - 12:22 pm, Tue, 18 October 22