ಬೇಕು, ಬೇಡವೆಂದಾಗ ಬೈಕಿನ ನಂಬರ್​ ಪ್ಲೇಟ್​ ಮರೆಮಾಚುವ ಚಾಲಾಕಿಗಳು: ವಿಡಿಯೋ ಇಲ್ಲಿದೆ

| Updated By: ವಿವೇಕ ಬಿರಾದಾರ

Updated on: Dec 30, 2022 | 10:26 PM

ನಗರದ ಇಬ್ಬರು ಯುವಕರು ತಮ್ಮ ದ್ವಿಚಕ್ರ ವಾಹನದ ನಂಬರ್​ ಪ್ಲೇಟ್​​ನ್ನು ವಾಹನದ ಒಳಗಡೆಯೇ ಮರೆಮಾಚುವ ರೀತಿ ವಿನ್ಯಾಸಗೊಳಿಸಿದ್ದಾರೆ.

ಬೇಕು, ಬೇಡವೆಂದಾಗ ಬೈಕಿನ ನಂಬರ್​ ಪ್ಲೇಟ್​ ಮರೆಮಾಚುವ ಚಾಲಾಕಿಗಳು: ವಿಡಿಯೋ ಇಲ್ಲಿದೆ
ನಂಬರ್​ ಪ್ಲೇಟ್​ ಮರೆಮಾಚುವ ಚಾಲಾಕಿಗಳು
Follow us on

ಬೆಂಗಳೂರು: ವಾಹನಗಳಿಗೆ ನಂಬರ್​ ಪ್ಲೇಟ್​ ಬಹಳ ಮುಖ್ಯ. ಒಂದು ಸಾರಿ ವಾಹನಕ್ಕೆ ನಂಬರ್ ಪ್ಲೇಟ್​​ ಅಳವಡಿಸಿದರೆ ಅದನ್ನು ತಮಗೆ ಬೇಡವಾದಾಗ ತೆಗೆಯುವುದು, ಬೇಕಾದಾಗ ಅಳವಡಿಸಲು ಸಾಧ್ಯವಿಲ್ಲ. ಆದರೆ ಇಲ್ಲಿ ಖತರ್ನಾಕ್​ ಖದೀಮರು ದ್ವಿಚಕ್ರ ವಾಹನಗಳ (Two Wheeler) ನಂಬರ್ ಪ್ಲೇಟ್​ನ್ನು (Number Plate) ತಮಗೆ ಬೇಕಾದಾಗ ಅಳವಡಿಸುವುದು, ಬೇಡವಾದಾಗ ತೆಗೆಯುತ್ತಾರೆ. ಅದು ಹೇಗೆ ಗೊತ್ತಾ ಈ ಸ್ಟೋರಿ ಓದಿ. ಬೆಂಗಳೂರಿನ (Bengaluru) ಇಬ್ಬರು ಯುವಕರು ತಮ್ಮ ದ್ವಿಚಕ್ರ ವಾಹನದ ನಂಬರ್​ ಪ್ಲೇಟ್​​ನ್ನು ವಾಹನದ ಒಳಗಡೆಯೇ ಮಡಚಿ ಇಡುವ ರೀತಿ ವಿನ್ಯಾಸಗೊಳಿಸಿದ್ದಾರೆ.

ಇದನ್ನೂ ಓದಿ: ಮಗನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ತಾಯಿ; ಸಾವಿನಲ್ಲೂ ಒಂದಾದ ತಾಯಿ ಮಗ

ಈ ರೀತಾಯದ ವಿಡಿಯೋವೊಂದನ್ನು ಬೆಂಗಳೂರು ಪಶ್ಚಿಮ ಸಂಚಾರಿ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್, ಟ್ವೀಟ್​ ಮಾಡಿದ್ದಾರೆ ವಿಡಿಯೋದಲ್ಲಿ ಆರೋಪಿಗಳು ನಂಬರ್ ಪ್ಲೇಟ್​ನ್ನು ಮರೆಮಾಚುವುದನ್ನು ನೋಡಬಹುದಾಗಿದೆ. ಇದಕ್ಕೆ ಕಾರಣ ಟ್ರಾಫಿಕ್​​ ರೂಲ್ಸ್​ ಬ್ರೆಕ್​ ಮಾಡಿದಾಗ ಆನ್‌ಲೈನ್ ಮೂಲಕ ಆಟೊಮೆಟಿಕ್​ ಆಗಿ ದಂಡ ಬೀಳುವುದನ್ನು ತಪ್ಪಿಸಿಕೊಳ್ಳ ಬಹುದಾಗಿದೆ. ಈ ರೀತಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಆರೋಪಿಗಳು ಕೊನೆಗೂ ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ: ಮಂಡ್ಯದವರನ್ನು ಮೋಸ ಮಾಡಲು ಆಗಲ್ಲ ಅಮಿತ್ ಶಾ ಜೀ, ಅಪರೇಷನ್ ಕಮಲಕ್ಕೆ ಯಾವ ಎಟಿಎಂನಿಂದ ಬಂತು? ಹೆಚ್​​ಡಿಕೆ ವಾಗ್ದಾಳಿ

ಪೊಲೀಸರು ಚಿತ್ರೀಕರಿಸಿದ ವೀಡಿಯೊದಲ್ಲಿ, ಆರೋಪಿಗಳು ಪೊಲೀಸ್ ಕ್ಯಾಮೆರಾಗಳಿಂದ ನಂಬರ್ ಪ್ಲೇಟ್‌ಗಳನ್ನು ಮರೆಮಾಡುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ವಿವರಿಸುತ್ತಿರುವುದು ನೋಡಬಹುದು.
ಆರೋಪಿಗಳು ಈ ರೀತಿ ಮಾಡುವ ಬದಲು ಟ್ರಾಫಿಕ್‌ರೂಲ್ಸ್​ಗಳನ್ನು ಅನುಸರಿಸಬಹುದು ಮತ್ತು ಸುರಕ್ಷಿತವಾಗಿ ಪ್ರಯಾಣಿಸಬಹುದು. ಪ್ರತಿಯೊಬ್ಬರ ಸುರಕ್ಷತೆಗಾಗಿ ದಯವಿಟ್ಟು ಸಂಚಾರಿ ನಿಯಮವನ್ನು ಅನುಸರಿಸಬೇಕೆಂದು ಬೆಂಗಳೂರು ಪಶ್ಚಿಮ ಸಂಚಾರಿ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಟ್ವೀಟ್​​ರನಲ್ಲಿ ಬರೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:25 pm, Fri, 30 December 22