ಬಿಟ್‌ ಕಾಯಿನ್ ಪ್ರಕರಣ: ಮತ್ತೊಬ್ಬ ಇನ್ಸ್‌ಪೆಕ್ಟರ್ ಅರೆಸ್ಟ್, ಕಾರಿನಿಂದ ಗುದ್ದಿ ಡಿವೈಎಸ್‌ಪಿ ಶ್ರೀಧರ್ ಎಸ್ಕೇಪ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 28, 2024 | 3:46 PM

ಬಿಟ್ ಕಾಯಿನ್(Bitcoin) ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಇನ್ಸ್‌ಪೆಕ್ಟರ್​ನ್ನು ಸಿಐಡಿ ಎಸ್ಐಟಿ ಬಂಧಿಸಿದೆ. ಇನ್ಸ್‌ಪೆಕ್ಟರ್ ಲಕ್ಷ್ಮಿಕಾಂತಯ್ಯ ಬಂಧಿತ ಆರೋಪಿ. ಈ ಲಕ್ಷ್ಮೀಕಾಂತಯ್ಯ ಈ ಹಿಂದೆ ಬಿಟ್ ಕಾಯಿನ್ ಪ್ರಕರಣದ ತನಿಖಾಧಿಕಾರಿ ಆಗಿದ್ದರು. ಇಂದು ಬೆಳಗ್ಗೆ ಇವರನ್ನು ಬಂಧಿಸಿದ್ದಾರೆ. ಇತ್ತ ಪ್ರಕರಣದ ಪ್ರಮುಖ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರ್ ಅವರನ್ನು ಬಂಧಿಸುವುದಕ್ಕೆ ತೆರಳಿದಾಗ ಆರೋಪಿ ಪೊಲೀಸರ ಕಾರಿಗೆ ಗುದ್ದಿ ಎಸ್ಕೇಪ್ ಆದ ಘಟನೆ ನಡೆದಿದೆ.

ಬಿಟ್‌ ಕಾಯಿನ್ ಪ್ರಕರಣ: ಮತ್ತೊಬ್ಬ ಇನ್ಸ್‌ಪೆಕ್ಟರ್ ಅರೆಸ್ಟ್, ಕಾರಿನಿಂದ ಗುದ್ದಿ ಡಿವೈಎಸ್‌ಪಿ ಶ್ರೀಧರ್ ಎಸ್ಕೇಪ್
ಡಿವೈಎಸ್ಪಿ
Follow us on

ಬೆಂಗಳೂರು, ಫೆ.28: ಬಿಟ್ ಕಾಯಿನ್(Bitcoin) ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವುದಕ್ಕೆ ತೆರಳಿದಾಗ ಆರೋಪಿ ಡಿವೈಎಸ್ಪಿ ಶ್ರೀಧರ್ ಪೂಜಾರ್, ಪೊಲೀಸರ ಕಾರಿಗೆ ಗುದ್ದಿ ಎಸ್ಕೇಪ್ ಆದ ಘಟನೆ ನಿನ್ನೆ (ಫೆ.28) ಕಾಫಿ ಬೋರ್ಡ್ ಸಿಗ್ನಲ್ ಬಳಿ ನಡೆದಿದೆ. ಎಸ್ಐಟಿ ತಂಡದ ಇನ್ಸ್​ಪೆಕ್ಟರ್ ಅನಿಲ್ ಮತ್ತು ಅವರ ತಂಡ ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇನ್ನು ಶ್ರೀಧರ್ ಪೂಜಾರ್‌ ವಿರುದ್ಧ 307 ಕೊಲೆ ಯತ್ನ, 353 ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ.

ಜಾಮೀನು ಅರ್ಜಿ ಹಾಕಿದ್ದ ಶ್ರೀಧರ್ ಪೂಜಾರ್

ಇನ್ನು ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀಧರ್ ಪೂಜಾರ್, ಜಾಮೀನು ಅರ್ಜಿ ಹಾಕಿದ್ದರು. ಆದರೆ, ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಜಾಮೀನು ವಜಾ ಮಾಡಿದ ಹಿನ್ನಲೆ ಪ್ರಮುಖ ಆರೋಪಿಯ ಬಂಧನಕ್ಕೆ ಎಸ್.ಐ.ಟಿ ತಂಡ ಹೋಗಿದ್ದರು. ಈ ಸಂದರ್ಭದಲ್ಲಿ ಪೊಲೀಸರ ವಾಹನಕ್ಕೆ ಗುದ್ದಿ ಎಸ್ಕೇಪ್ ಆಗಿದ್ದಾರೆ. ಈಗಾಗಲೇಬ ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ:ಬಿಟ್​ ಕಾಯಿನ್ ಹಗರಣ ಕೇಸ್​: IPS ಅಧಿಕಾರಿ ಸಂದೀಪ್ ಪಾಟೀಲ್​ ವಿಚಾರಣೆ ಮಾಡಿದ SIT

ಬಿಟ್ ಕಾಯಿನ್ ಹಗರಣದ ಮತ್ತೊಬ್ಬ ಇನ್ಸ್‌ಪೆಕ್ಟರ್​ನ್ನು ಬಂಧಿಸಿದ ಸಿಐಡಿ ಎಸ್ಐಟಿ

ಇದೀಗ ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಇನ್ಸ್‌ಪೆಕ್ಟರ್​ನ್ನು ಸಿಐಡಿ ಎಸ್ಐಟಿ ಬಂಧಿಸಿದೆ. ಇನ್ಸ್‌ಪೆಕ್ಟರ್ ಲಕ್ಷ್ಮಿಕಾಂತಯ್ಯ ಬಂಧಿತ ಆರೋಪಿ. ಈ ಲಕ್ಷ್ಮೀಕಾಂತಯ್ಯ ಈ ಹಿಂದೆ ಬಿಟ್ ಕಾಯಿನ್ ಪ್ರಕರಣದ ತನಿಖಾಧಿಕಾರಿ ಆಗಿದ್ದರು. ಇಂದು ಬೆಳಗ್ಗೆ ಇವರನ್ನು ಬಂಧಿಸಿದ್ದಾರೆ. ಇನ್ನೂ ಕೆಲವೇ ಕ್ಷಣಗಳಲ್ಲಿ ಲಕ್ಷ್ಮೀಕಾಂತಯ್ಯ ಅವರನ್ನು ಎಸ್ಐಟಿ, ಒಂದನೇ ಎಸಿಎಂಎಂ ಕೋರ್ಟ್ ಗೆ ಹಾಜರು ಪಡಿಸಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.