ಬಿಜೆಪಿ ಪಾಪದ ಪುರಾಣ-ಬಿಜೆಪಿ ಪಾಪ ಪತ್ರ; ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತೊಂದು ಅಭಿಯಾನ

| Updated By: ಆಯೇಷಾ ಬಾನು

Updated on: Jan 10, 2023 | 12:26 PM

ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್​ ತೀವ್ರ ವಾಗ್ದಾಳಿ ನಡೆಸಿದೆ. BJPಗೆ ಪಾಪದ ಪುರಾಣ ಇದೆಯೇ ಹೊರತು ಸಾಧನೆ ಪುರಾಣವಿಲ್ಲ. ಸಾವಿರಾರು ಕೋಟಿ ಖರ್ಚು ಮಾಡಿ ಶಾಸಕರನ್ನು ಖರೀದಿಸಿದ್ದಾರೆ ಎಂದಿದೆ.

ಬಿಜೆಪಿ ಪಾಪದ ಪುರಾಣ-ಬಿಜೆಪಿ ಪಾಪ ಪತ್ರ; ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತೊಂದು ಅಭಿಯಾನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಬಿಜೆಪಿ ವಿರುದ್ಧ ಮತ್ತೊಂದು ಅಭಿಯಾನಕ್ಕೆ ಕಾಂಗ್ರೆಸ್ ಸಿದ್ಧವಾಗಿದೆ. ಬಿಜೆಪಿ ಪಾಪ ಪತ್ರ ಹಾಗೂ ಬಿಜೆಪಿ ಪಾಪದ ಪುರಾಣ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದ ಮೂಲಕ ಚಾಲನೆ ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಬಿಜೆಪಿ ಪಾಪದ ಪುರಾಣ ಎಂಬ ಹ್ಯಾಷ್​ಟ್ಯಾಗ್​ನಡಿ ಅಭಿಯಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಚಾಲನೆ ನೀಡಿದ್ದಾರೆ.

ಬಿಜೆಪಿ ಪಾಪ ಪತ್ರದಲ್ಲಿರುವ ಅಂಶಗಳು

  • 40% ಸರ್ಕಾರ ಎಂಬುದು ಬಿಜೆಪಿ ಸರ್ಕಾರದ ಹೊಸ ಹೆಸರು
  • ಬಿಜೆಪಿ  ಪ್ರಣಾಳಿಕೆಯಲ್ಲಿ ನೀಡಿದ್ದ 90% ಭರವಸೆಗಳು ಈಡೇರಿಸಿಲ್ಲ
  • 70000 ಕೋಟಿ ರೈತರ ಕೃಷಿ ಸಾಲ ಮನ್ನಾ ಹಾಗೂ ನ್ಯಾಯಯುತ MSP ನಿರಾಕರಣೆ
  • ಹೆಚ್ಚಳವಾದ ಎಲ್ಪಿಜಿ ಸಿಲಿಂಡರ್
  • ಕೊವಿಡ್​​ನಿಂದ ಜೀವ ಕಳೆದುಕೊಂಡವರು, ರೈತರ ಆತ್ಮಹತ್ಯೆ
  • ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಬಿಜೆಪಿ ಸರ್ಕಾರದ ವೈಫಲ್ಯ
  • 10.13 ಲಕ್ಷ ಶಾಲಾ ಬಿಟ್ಟ ಮಕ್ಕಳು
  • 2,52 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇರುವುದು
  • 83,193 ಕನ್ನಡಿಗರು ಬಿಜೆಪಿ ಆಡಳಿತದಲ್ಲಿ ಕೆಲಸ ಕಳೆದುಕೊಂಡಿದ್ದಾರೆ.   ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಅಭಿಯಾನ ನಡೆಸಲಿದೆ.

ಇದನ್ನೂ ಓದಿ: Unaccounted money traced in Soudha: ಅದು ಯಾವುದೋ ಸಚಿವನಿಗೆ ಕಮೀಶನ್ ನೀಡಲು ತಂದ ಹಣವಾಗಿರುತ್ತದೆ: ಡಿಕೆ ಶಿವಕುಮಾರ

ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್​ ತೀವ್ರ ವಾಗ್ದಾಳಿ

ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್​ ತೀವ್ರ ವಾಗ್ದಾಳಿ ನಡೆಸಿದೆ. BJPಗೆ ಪಾಪದ ಪುರಾಣ ಇದೆಯೇ ಹೊರತು ಸಾಧನೆ ಪುರಾಣವಿಲ್ಲ. ಸಾವಿರಾರು ಕೋಟಿ ಖರ್ಚು ಮಾಡಿ ಶಾಸಕರನ್ನು ಖರೀದಿಸಿದ್ದಾರೆ. ಸರ್ಕಾರದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟ, ಅರಾಜಕತೆ, ಭ್ರಷ್ಟಾಚಾರ ನಿರಂತರವಾಗಿದೆ. ಸರ್ಕಾರವನ್ನು ತಳ್ಳಿಕೊಂಡು ಹೋಗ್ತಿದೇವೆಂದು ಸಚಿವರೇ ಹೇಳಿದ್ದಾರೆ. ಮಾಧುಸ್ವಾಮಿ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:26 pm, Tue, 10 January 23