ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ 13 ಸ್ಥಾನ ಗೆಲ್ಲುತ್ತೇವೆ ಅನ್ನೋದು ಯಡಿಯೂರಪ್ಪನವರ ಭ್ರಮೆ. 13 ಸ್ಥಾನ ಏಕೆ 15 ಸ್ಥಾನಗಳಲ್ಲಿಯೂ ಬಿಜೆಪಿ ಗೆಲ್ಲಲಿ ಎಂದು ಕಾಂಗ್ರೆಸ್ನ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಎಷ್ಟು ಸ್ಥಾನ ಗೆಲ್ಲುತ್ತೆ ಎಂದು ಚುನಾವಣಾ ಫಲಿತಾಂಶದ ಬಳಿಕ ತಿಳಿಯುತ್ತೆ. ಮೊದಲೇ ಬಿಜೆಪಿ 13 ಸ್ಥಾನ ಗೆಲ್ಲುತ್ತೆ ಅಂದಿದ್ದಾರೆ. ಹಾಗಾದ್ರೆ ಯಾಕೆ 2 ಸ್ಥಾನಗಳಲ್ಲಿ ಬಿಜೆಪಿಯವರು ಸೋಲ್ತಾರೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
2 ಕ್ಷೇತ್ರಗಳಲ್ಲಿ ಸೋತು ಅವರಿಗೇಕೆ ಅನ್ಯಾಯ ಮಾಡ್ತಾರೆ. ಈಗಾಗಲೇ ಇಬ್ಬರಿಗೆ ಅನ್ಯಾಯ ಮಾಡಿದ್ದಾರೆ. 2 ಕ್ಷೇತ್ರಗಳಲ್ಲಿ ಸೋತು ಮತ್ತೆ ಏಕೆ ಅನ್ಯಾಯ ಮಾಡ್ತಾರೆ. ಬಿಜೆಪಿಯವರು 15 ಕ್ಷೇತ್ರಗಳಲ್ಲಿಯೂ ಗೆಲ್ಲಲಿ ಬಿಡಿ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Published On - 12:44 pm, Sun, 8 December 19