ಕನ್ನಡತಿ ಅಪರ್ಣಾ ಮರೆಯಾಗುತ್ತಿದ್ದಂತೆ ಹೊಸ ಮಾರ್ಗಗಳ ಮೆಟ್ರೋ ರೈಲಿಗೆ ಕನ್ನಡ ಧ್ವನಿಗೆ ಬಿಎಂಆರ್​ಸಿಎಲ್ ಹುಡುಕಾಟ

| Updated By: ಆಯೇಷಾ ಬಾನು

Updated on: Jul 16, 2024 | 7:19 AM

ಅದು ಕನ್ನಡಿಗರ ಪಾಲಿನ ಕಂಚಿನ ಕಂಠ. ಪ್ರತಿದಿನ ಸಿಲಿಕಾನ್ ಸಿಟಿಯ ಪ್ರಯಾಣಿಕರು ಅಪ್ಪಟ ಕನ್ನಡತಿ ಅಪರ್ಣಾ ಅವರ ವಾಯ್ಸ್ ಕೇಳ್ದೆ ತಮ್ಮ ಕೆಲಸಕ್ಕೆ ಹೋಗಲ್ಲ, ಅಷ್ಟರಮಟ್ಟಿಗೆ ಅಡಿಕ್ಟ್ ಆಗೋಗಿದ್ರು, ಆದರೆ ಅವರ ಅಕಾಲಿಕ ಮರಣದಿಂದ ಮೆಟ್ರೋ ಅಧಿಕಾರಿಗಳು ಕಂಗಲಾಗಿದ್ರೆ, ಅಪರ್ಣಾ ಅವರ ವಾಯ್ಸ್ ಸರಿದೂಗಿಸುವ ಕಂಠ ಸಿರಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಕನ್ನಡತಿ ಅಪರ್ಣಾ ಮರೆಯಾಗುತ್ತಿದ್ದಂತೆ ಹೊಸ ಮಾರ್ಗಗಳ ಮೆಟ್ರೋ ರೈಲಿಗೆ ಕನ್ನಡ ಧ್ವನಿಗೆ ಬಿಎಂಆರ್​ಸಿಎಲ್ ಹುಡುಕಾಟ
ಕನ್ನಡತಿ ಅಪರ್ಣಾ ಮರೆಯಾಗುತ್ತಿದ್ದಂತೆ ಹೊಸ ಕನ್ನಡ ಧ್ವನಿಗೆ BMRCL ಹುಡುಕಾಟ
Follow us on

ಬೆಂಗಳೂರು, ಜುಲೈ.16: ಕಳೆದ ಹದಿಮೂರು ವರ್ಷಗಳಿಂದ ಮೆಟ್ರೋದ (Namma Metro) ಹಸಿರು ಮತ್ತು ನೇರಳೆ ಮಾರ್ಗದ ಮೆಟ್ರೋ ಸ್ಟೇಷನ್, ರೈಲಿನಲ್ಲಿ ಖ್ಯಾತ ನಿರೂಪಕಿ, ನಟಿ ಅಪರ್ಣಾ (Aparna Vastarey) ವಾಯ್ಸ್ ಬರುತ್ತಿತ್ತು. ಆದರೆ ಕಳೆದ ಶುಕ್ರವಾರ ಕ್ಯಾನ್ಸರ್ ನಿಂದ ಅಪರ್ಣಾ ಅವರು ನಮ್ಮನ್ನು ಅಗಲಿದ್ದಾರೆ. ಆದರೆ ಇದೀಗ ಮೆಟ್ರೋ ಹೊಸ ಮಾರ್ಗಗಳಲ್ಲಿ ಕನ್ನಡ ವಾಯ್ಸ್ ಗಾಗಿ ಮೆಟ್ರೋ ಅಧಿಕಾರಿಗಳು ಹೊಸ ವಾಯ್ಸ್​ಗಳ ಹುಡುಕಾಟ ನಡೆಸುತ್ತಿದ್ದಾರೆ. ಕನ್ನಡ ರೇಡಿಯೋ ಜಾಕಿಗಳು, ಆ್ಯಂಕರ್ ಗಳು ಹಾಗೂ ಸಿಂಗರ್ ಗಳ ವಾಯ್ಸ್ ಗಳ ಸ್ಯಾಂಪಲ್ ಅನ್ನು ಮೆಟ್ರೋ ಅಧಿಕಾರಿಗಳು ಕೇಳಿದ್ದಾರೆ.

ಸದ್ಯ ಹಳದಿ ಮಾರ್ಗದ ಆರ್ವಿ ರೋಡ್ ಟೂ ಬೊಮ್ಮಸಂದ್ರ, ನಾಗಸಂದ್ರ ಟೂ ಮಾದಾವರ ಮಾರ್ಗ ಸಿದ್ದವಾಗಿದೆ. ಈ ಮಾರ್ಗಕ್ಕೂ ಅಪರ್ಣಾ ವಾಯ್ಸ್ ಹಾಕುವ ಬಗ್ಗೆ ಬಿಎಂಆರ್​ಸಿಎಲ್ ಸಿದ್ದತೆ ನಡೆಸಿತ್ತು. ಅಪರ್ಣಾ ಮೃತಪಟ್ಟ ಹಿನ್ನೆಲೆ ಹೊಸ ವಾಯ್ಸ್ ಗಾಗಿ ಹುಡುಕಾಟ ನಡೆದಿದೆ. ಸಾಕಷ್ಟು ಜನರು ನಾವು ವಾಯ್ಸ್ ಕೊಡ್ತಿವಿ ಎಂದು ಮನವಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನು ಮೆಟ್ರೋ ಹೊಸ ಮಾರ್ಗಗಳಿಗೆ ಯಾರ ವಾಯ್ಸ್ ಹಾಕಿದ್ರೆ ಸೂಕ್ತ ಎಂದು ಎಲ್ಲಾ ರೇಡಿಯೋ ಜಾಕಿ ಮತ್ತು ಕನ್ನಡ ಆ್ಯಂಕರ್ ಹಾಗೂ ಸಿಂಗರ್ ವಾಯ್ಸ್ ಗಳನ್ನು ಸರ್ಚ್ ಮಾಡುತ್ತಿರುವ ನಮ್ಮ ಮೆಟ್ರೋ ಅಧಿಕಾರಿಗಳು, ಸದ್ಯ ಉದ್ಘಾಟನೆ ಆಗಿರೋ ಎಲ್ಲಾ ಮಾರ್ಗದಲ್ಲಿ ಅಪರ್ಣಾ ಧ್ವನಿ ಬದಲಾಗೋದಿಲ್ಲ. ಚಲ್ಲಘಟ್ಟ-ವೈಟ್ ಫೀಲ್ಡ್, ಸಿಲ್ಕ್ ಇನ್ಸ್ಟಿಟ್ಯೂಟ್ – ನಾಗಸಂದ್ರ ಮಾರ್ಗದಲ್ಲಿ ಅಪರ್ಣಾ ಧ್ವನಿ ಮುಂದುವರಿಯಲಿದೆ.

ಇದನ್ನೂ ಓದಿ: ‘ನಮ್ಮ ಮೆಟ್ರೋ ಇರುವ ತನಕ ಅಪರ್ಣಾ ಧ್ವನಿ ಇರಬೇಕು’: ಸೃಜನ್​ ಲೋಕೇಶ್​ ಮನವಿ

ಅಪರ್ಣಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಧ್ವನಿಯನ್ನು ಸವಿಯುತ್ತಾ ಪ್ರಯಾಣಿಸಿ ಎಂದಿದೆ ನಮ್ಮ ಮೆಟ್ರೋ. ಈ ಬಗ್ಗೆ ಪ್ರಯಾಣಿಕರು ಹೊಸ ಮಾರ್ಗದಲ್ಲಿ ಅಪರ್ಣಾ ಅವರ ಧ್ವನಿಯನ್ನು ನಾವು ಮಿಸ್ ಮಾಡಿಕೊಳ್ತಿವಿ ಮತ್ತು ಹೊಸ ಮಾರ್ಗದಲ್ಲಿ ಕನ್ನಡದವ್ರಿಗೆ ವಾಯ್ಸ್ ನೀಡಲು ಅವಕಾಶ ನೀಡಬೇಕು. ಕನ್ನಡ ಟ್ರಾನ್ಸ್ಲೆಟ್ ಮಾಡುವ ವಾಯ್ಸ್ ಗಳನ್ನು ಪ್ಲೇ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಪ್ರತಿದಿನ ಮೆಟ್ರೋ ರೈಲಿನಲ್ಲಿ ಅಪರ್ಣಾ ಅವರ ಧ್ವನಿಯನ್ನು ಕೇಳಿ ಸಂತೋಷ ಪಡುತ್ತಿದ್ದ ಕನ್ನಡಿಗರಿಗೆ ಮೆಟ್ರೋದ ಮುಂದಿನ ಹೊಸ ಮಾರ್ಗದಲ್ಲಿ ಅವರ ಧ್ವನಿಯನ್ನು ಮಿಸ್ ‌ಮಾಡಿಕೊಳ್ಳೋದಂತೋ ಗ್ಯಾರಂಟಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ