ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡಿಸೆಂಬರ್ ಕಂಟಕ ಎದುರಾಗಿದ್ದು ಮತ್ತೆ ಕೊರೊನಾ ಸೋಂಕು ಆಟ ಕಾಟ ಶುರುವಾಗಿದೆ. ಮೊದಲ ಬಾರಿಗೆ ಡಿಸೆಂಬರ್ 2019ರಲ್ಲಿ ಕೋವಿಡ್ ಯುಹಾನ್ D61G ತಳಿ ಎಂಟ್ರಿ ಕೊಟ್ಟಿತ್ತು. ಅದಾದ ಮೇಲೆ ಡಿಸೆಂಬರ್ 2020 ರಲ್ಲಿ ಡೆಲ್ಟಾ ತಳಿ ಕಾಲಿಟ್ಟಿತ್ತು. ಕಳೆದ ವರ್ಷ, ಡಿಸೆಂಬರ್ 2021ರಲ್ಲಿ ಒಮಿಕ್ರಾನ್ ಮಿಶ್ರ ತಳಿ ಪತ್ತೆಯಾಗಿತ್ತು. ಅದರಿಂದ ಸಾವು ನೋವು, ನಷ್ಟಗಳು ಅಪಾರ ಪ್ರಮಾಣದಲ್ಲಿ ಘಟಿಸಿವೆ. ಕೊರೊನಾ ಕಾಟಕ್ಕೆ ಅಂತ್ಯವೇ ಇಲ್ಲ ಎಂಬಂತಾಗಿದೆ. ಈ ಮಧ್ಯೆ, ಒಮಿಕ್ರಾನ್ ಶರವೇಗದಲ್ಲಿ ಹಬ್ಬುತ್ತಿದ್ದು ಸರ್ಕಾರ ಅನೇಕ ಕಟ್ಟುನಿಟ್ಟಿನ ಕ್ರಮಗಳ್ನು ಕೈಗೊಂಡು ಮಹಾಮಾರಿಯನ್ನು ಕಟ್ಟಿಹಾಕಲು ಶ್ರಮಿಸುತ್ತಿದೆ. ಈ ವಾರದಿಂದಲೇ ಜಾರಿಗೆ ಬರುವಂತೆ ವೀಕೆಂಡ್ ಕರ್ಫ್ಯೂ ಘೋಷಿಸಿದೆ. ಆದರೆ ಲಾಕ್ಡೌನ್ ಕ್ರಮಗಳಿಂದ ಭಾರೀ ನಷ್ಟ ಅನುಭವಿಸಿರುವ ನಮ್ಮ ಮೆಟ್ರೋ ಈ ಬಾರಿ ವೀಕೆಂಡ್ ಕರ್ಫ್ಯೂ ವೇಳೆ ತನ್ನ ರೈಲು ಸಂಚಾರ ಸ್ಥಗಿತಗೊಳಿಸದಿರಲು ನಿರ್ಧರಿಸಿದೆ.
ನಮ್ಮ ಮೆಟ್ರೋದಲ್ಲಿ ಶೇಕಡಾ 50ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ:
ವೀಕೆಂಡ್ ಕರ್ಫ್ಯೂ ವೇಳೆ ನಮ್ಮ ಮೆಟ್ರೋ ಸಂಚಾರಕ್ಕೆ ಅಡ್ಡಿಯಿಲ್ಲ. ಶನಿವಾರ ಮತ್ತು ಭಾನುವಾರ ಎಂದಿನಂತೆ ನಮ್ಮ ಮೆಟ್ರೋ ರೈಲು ಸಂಚರಿಸಲಿದೆ. ನಮ್ಮ ಮೆಟ್ರೋ ಹಸಿರು, ನೇರಳೆ ಮಾರ್ಗದಲ್ಲಿ ಯಾವುದೇ ಬದಲಾವಣೆಯಿಲ್ಲ. ನಮ್ಮ ಮೆಟ್ರೋದಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಅವಕಾಶ ಇರಲಿದೆ. ಮೆಟ್ರೋ ರೈಲಿನಲ್ಲಿ ಸದ್ಯ 1800-1900 ಜನ ಪ್ರಯಾಣಿಸುತ್ತಿದ್ದಾರೆ. ಕೊವಿಡ್ ಹೆಚ್ಚಳ ಹಿನ್ನೆಲೆ 800-900 ಜನ ಪ್ರಯಾಣಕ್ಕೆ ಅವಕಾಶ ನೀಡಲಿದ್ದೇವೆ. ಕೊರೊನಾ ನಿಯಮ ಪಾಲಿಸಿ ಮೆಟ್ರೋ ರೈಲು ಓಡಿಸಲು ನಿರ್ಧಾರ ಮಾಡಿದ್ದೇವೆ. ನಮ್ಮ ಮೆಟ್ರೋ ಸಂಚಾರದ ಅವಧಿ ಕಡಿತಗೊಳಿಸಿ ಮೆಟ್ರೋ ಕಾರ್ಯಾಚರಣೆ ನಡೆಸಲಿದೆ. ಪ್ರಸ್ತುತ 15 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸುತ್ತಿದೆ. ವೀಕೆಂಡ್ ಕರ್ಫ್ಯೂ ವೇಳೆ 30 ನಿಮಿಷಕ್ಕೊಂದು ಮೆಟ್ರೋ ಸಂಚಾರ ಮಾಡಲಿದೆ. ಎಂದು ಟಿವಿ9ಗೆ ಬಿಎಂಆರ್ಸಿಎಲ್ ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಮೆಟ್ರೊದಲ್ಲಿ ಸ್ಟ್ಯಾಂಡಿಂಗ್ ಇಲ್ಲ: ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರ ಸಂಚಾರಕ್ಕೆ ಸರ್ಕಾರ ಸೂಚನೆ
ಇದನ್ನೂ ಓದಿ:
ಬೆಂಗಳೂರನ್ನ ಕಾಡುತ್ತಿದೆ ಕೊರೊನಾ; 2 ದಿನದಲ್ಲಿ 152ಕ್ಕೆ ಏರಿಕೆಯಾದ ಕಂಟೇನ್‌ಮೆಂಟ್ ಜೋನ್ಗಳ ಸಂಖ್ಯೆ
Published On - 12:35 pm, Wed, 5 January 22