ಏರ್ಪೋರ್ಟ್ಗೆ ಬಂದ ಪ್ಲೈಟ್ನಲ್ಲಿ ಪತ್ತೆಯಾಯ್ತು ಕೋಟಿ ಮೌಲ್ಯದ ಚಿನ್ನ; 2.8 ಕೆಜಿ ಚಿನ್ನದ ಬಿಸ್ಕೆಟ್ ವಶ
ತನಿಖೆಗೆ ಭಯಪಟ್ಟು ಸೀಟ್ ಕೆಳಗಡೆ ಚಿನ್ನ ಅಡಗಿಸಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸೀಟ್ನಲ್ಲಿ ಕುಳಿತಿದ್ದ ಪ್ರಯಾಣಿಕ ಲಿಸ್ಟ್ ಪಡೆದು ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 2.8 ಕೆಜಿ ಚಿನ್ನವನ್ನು ವಶಪಡಿಸಿಕೊಂಡ ಘಟನೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda international Airport) ನಡೆದಿದೆ. ಏರ್ಪೋಟ್ಗೆ ಬಂದ ವಿಮಾನದಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಚಿನ್ನ (Gold) ಪತ್ತೆಯಾಗಿದೆ. ವಿಮಾನದ ಸೀಟ್ ಕೆಳಗಡೆ ಚಿನ್ನವನ್ನು ಅಡಗಿಸಿಟ್ಟು ಕಳ್ಳ ಸಾಗಣಿಕೆ ಮಾಡುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ದುಬೈನಿಂದ ಬಂದ ಇಂಡಿಗೋ ವಿಮಾನದ ಸೀಟ್ ಕೆಳಗಡೆ ಬಿಸ್ಕೆಟ್ ರೂಪದಲ್ಲಿ ಚಿನ್ನವನ್ನು ಅಡಗಿಸಿಟ್ಟು ತರಲಾಗಿತ್ತು.
ಸ್ಮಗ್ಲರ್ಸ್ 24 ಬಿಸ್ಕೆಟ್ಗಳಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದರು. ಪ್ಲೈಟ್ ಚೆಕಿಂಗ್ ವೇಳೆ ಚಿನ್ನ ಪತ್ತೆಯಾಗಿದೆ. ಚಿನ್ನವನ್ನು ವಶಕ್ಕೆ ಪಡೆದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆಗೆ ಭಯಪಟ್ಟು ಸೀಟ್ ಕೆಳಗಡೆ ಚಿನ್ನ ಅಡಗಿಸಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸೀಟ್ನಲ್ಲಿ ಕುಳಿತಿದ್ದ ಪ್ರಯಾಣಿಕ ಲಿಸ್ಟ್ ಪಡೆದು ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ಬೆಂಗಳೂರು: ಶಾಲೆಯ ಕ್ವಾಟ್ರಸ್ಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿ ರಾತ್ರಿ ವೇಳೆ ಶಾಲೆಯ ಕ್ವಾಟ್ರಸ್ಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬೆಂಗಳೂರಿನ ದೊಮ್ಮಲೂರು ಬಳಿಯ ಟಿಐಬಿಎಸ್ ಶಾಲೆಯಲ್ಲಿ ನಡೆದಿದೆ. ಕಳ್ಳರು ಚಿನ್ನಾಭರಣ ದೋಚುವ ಜೊತೆಗೆ ಅಶ್ಲೀಲ ಚಿತ್ರಗಳನ್ನು ಬರೆದು ವಿಕೃತಿ ಮೆರೆದಿದ್ದಾರೆ. ಜನವರಿ 2ನೇ ತಾರಿಕು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೇರಳ ಮೂಲದ ಶಿಕ್ಷಕಿ ವಾಸವಿದ್ದ ಫ್ಲಾಟ್ನಲ್ಲಿ ಕಳ್ಳತನ ಮಾಡಲಾಗಿದೆ. ಕಳ್ಳರು 120 ಗ್ರಾಂ ಚಿನ್ನ, ಮೊಬೈಲ್ ಮತ್ತು ನಗದು ಹೊತ್ತೋಯ್ದಿದ್ದಾರೆ.
ಕಳ್ಳತನ ಮಾಡಿದ್ದು, ಈ ವೇಳೆ ಮನೆಯಲ್ಲಿದ್ದ ಗೊಂಬೆ ಮೇಲು ವಿಕೃತಿ ಮೆರೆದು ಬರಹ ಬರೆದಿದ್ದಾರೆ. ಪ್ರತಿಷ್ಟಿತ ಶಾಲೆಯಲ್ಲಿ ನಡೆದ ವಿಕೃತ ಕಳ್ಳತನದಿಂದ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಹೊಸ ವರ್ಷಕ್ಕೆ ಶಿಕ್ಷಕಿ ತವರಿಗೆ ಹೋಗಿ ಬಂದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಸರ್ಜಾಪುರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: 28 ಮನೆ, 5 ಕಾರು, ಚಿನ್ನ, ಬೆಳ್ಳಿ; ಎಸಿಬಿ ದಾಳಿ ವೇಳೆ ವಾಸುದೇವ್ ಮನೆಯಲ್ಲಿ ಪತ್ತೆಯಾದ ಆಸ್ತಿ ವಿವರ ಇದು
ಒಂದು ವರ್ಷದಲ್ಲಿ 56 ಚಿನ್ನ ಕದ್ದ ಪ್ರಕರಣಗಳನ್ನು ಪತ್ತೆ ಹಚ್ಚಿದ ರಾಮನಗರ ಪೊಲೀಸ್, 86 ಮಂದಿ ಅರೆಸ್ಟ್
Published On - 12:17 pm, Wed, 5 January 22