ಬೆಂಗಳೂರು: ಫ್ರೀ ಟಿಕೆಟ್​​​ ಹರಿದು ಎಸೆದ ಬಿಎಂಟಿಸಿ ಬಸ್​ ಕಂಡಕ್ಟರ್​ ಅಮಾನತು

| Updated By: Rakesh Nayak Manchi

Updated on: Oct 16, 2023 | 9:47 PM

ಮಹಿಳೆಯರಿಗೆ ಸಾರಿಗೆ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡುವ ಶಕ್ತಿ ಯೋಜನೆ ಜಾರಿ ಬಂದ ನಂತರ ಇಲಾಖೆಯ ಆದಾಯ ಹೆಚ್ಚಾಗುತ್ತಿದೆ. ಆದರೆ, ಉಚಿತ ಟಿಕೆಟ್​ಗಳನ್ನು ಕಂಡೆಕ್ಟರ್ ಹರಿದು ಬಿಸಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದ ಅಧಿಕಾರಿಗಳು ಕಂಡೆಕ್ಟರ್​ನನ್ನು ಅಮಾನತು ಮಾಡಿದ್ದಾರೆ.

ಬೆಂಗಳೂರು: ಫ್ರೀ ಟಿಕೆಟ್​​​ ಹರಿದು ಎಸೆದ ಬಿಎಂಟಿಸಿ ಬಸ್​ ಕಂಡಕ್ಟರ್​ ಅಮಾನತು
ಫ್ರೀ ಟಿಕೆಟ್​​​ ಹರಿದು ಬಿಸಾಡಿದ ಬಿಎಂಟಿಸಿ ಬಸ್​ ಕಂಡಕ್ಟರ್​ ಅಮಾನತು
Follow us on

ಬೆಂಗಳೂರು, ಅ.16: ಮಹಿಳೆಯರಿಗೆ ಸಾರಿಗೆ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡುವ ಶಕ್ತಿ ಯೋಜನೆ (Shakti Scheme) ಜಾರಿ ಬಂದ ನಂತರ ಇಲಾಖೆಯ ಆದಾಯ ಹೆಚ್ಚಾಗುತ್ತಿದೆ. ಆದರೆ, ಉಚಿತ ಟಿಕೆಟ್​ಗಳನ್ನು (Free Ticket) ಬಿಎಂಟಿಸಿ ಬಸ್ ಕಂಡೆಕ್ಟರ್ ಹರಿದು ಬಿಸಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದ ಅಧಿಕಾರಿಗಳು ಕಂಡೆಕ್ಟರ್​ನನ್ನು ಅಮಾನತು ಮಾಡಿದ್ದಾರೆ.

ಮೆಜೆಸ್ಟಿಕ್​​​​ನಿಂದ ತಾವರಕೆರೆ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ಅರ್ಜುನ್ ಕೊಟ್ಯಾಳ ಅಮಾನತುಗೊಂಡ ಕಂಡಕ್ಟರ್​. ಡಿಪೋ-17 ಮಾರ್ಗದ ಸಂಖ್ಯೆ-242B ಬಿಎಂಟಿಸಿ ಬಸ್​ನಲ್ಲಿ ಕಂಡೆಕ್ಟರ್ ಆಗಿದ್ದ ಅರ್ಜುನ್​ ನಿನ್ನೆ ಬಸ್​ನಲ್ಲಿ ಮಹಿಳೆಯರಿಗೆ ನೀಡಬೇಕಿದ್ದ ಉಚಿತ ಟಿಕೆಟ್ ಹರಿದು ಎಸೆಯುತ್ತಿದ್ದರು.

ಇದನ್ನೂ ಓದಿ: ಬೆಂಗಳೂರು: BMTC ಬಸ್ ಹರಿದು ಇಂಜಿನಿಯರ್ ವಿದ್ಯಾರ್ಥಿ ಸಾವು, 10 ದಿನಗಳಲ್ಲಿ ಬಿಎಂಟಿಸಿಗೆ ಮೂರನೇ ಬಲಿ

ಈ ಸಂಬಂಧ ಅಧಿಕಾರಿಗಳು ಅರ್ಜುನ್ ಅವರನ್ನು ಬಿಎಂಟಿಸಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಅರ್ಜುನ್ ಅವರನ್ನು ಅಮಾನತ್ತು ಮಾಡಿ ಆದೇಶಿಸಲಾಗಿದೆ. ಅಲ್ಲದೆ, ಈ ರೀತಿ ಕೆಲಸ ಮತ್ತೊಮ್ಮೆ ಆಗದಂತೆ ಇತರೆ ಕಂಡಕ್ಟರ್​ಗಳಿಗೂ ಎಚ್ಚರಿಕೆ ನೀಡಿದ್ದಾರೆ.

ಕಂಡಕ್ಟರ್​​ಗಳು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್​ ಸಂಖ್ಯೆಗಳನ್ನು ನಿಗಮಗಳಿಗೆ ತಪ್ಪಾಗಿ ನೀಡುತ್ತಿದ್ದಾರೆ ಎಂಬ ಆರೋಪದ ನಡುವೆ ಇನ್ನು ಹೆಚ್ಚಿನ ಇನ್ಷೆಂಟಿವ್​ ಆಸೆಗೆ ಬೇಕಾ ಬಿಟ್ಟಿಯಾಗಿ ಫ್ರೀ ಟಿಕೆಟ್​ಗಳನ್ನು ಹರಿದು ಎಸೆಯುತ್ತಿದ್ದಾಗ ಬಿಎಂಟಿಸಿ ಬಸ್ ಕಂಡಕ್ಟರ್ ಸಿಕ್ಕಿಬಿದ್ದಿದ್ದರು. ಯಾಕೆ ಟಿಕೆಟ್ ಹರಿದು ಬಿಸಾಕುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ ಮಹಿಳಾ ಪ್ರಯಾಣಿಕರೊಬ್ಬರು, ನಿಮ್ಮಂತವರಿಂದಲೇ ಶಕ್ತಿ ಯೋಜನೆಗೆ ಕೆಟ್ಟ ಹೆಸರೆಂದು ಎಂದು ತರಾಟೆಗೆ ತೆಗೆದುಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:43 pm, Mon, 16 October 23