ವಾಣಿವಿಲಾಸ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ: ಸ್ಪಷ್ಟನೆ ನೀಡಿದ ಆಡಳಿತ ಮಂಡಳಿ
ವಾಣಿವಿಲಾಸ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ವಿಚಾರವಾಗಿ ಸದ್ಯ ಆಡಳಿತ ಮಂಡಳಿಯಿಂದ ಸ್ಪಷ್ಟನೆ ನೀಡಿದ್ದು, 75 ವರ್ಷಗಳ ಹಳೆಯ ಮೋಟಾರ್ ಬದಲಾಯಿಸಲಾಗಿದೆ. ಮೋಟಾರ್ ಬದಲಾವಣೆ ವೇಳೆ ಕೆಲ ಗಂಟೆಗಳ ಕಾಲ ನೀರು ಬಂದ ಆಗಿತ್ತು. ಸದ್ಯ ಹೊಸ ಮೋಟಾರ್ ಅಳವಡಿಸಲಾಗಿದೆ ಎಂದು ಎಂ.ಎಸ್ ಸವಿತಾ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಅಕ್ಟೋಬರ್ 16: ವಾಣಿವಿಲಾಸ್ ಆಸ್ಪತ್ರೆ (Vani Vilas Hospital) ಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿತ್ತು. ಕುಡಿಯುವ ನೀರಿಲ್ಲದೆ ರೋಗಿಗಳು ಪರದಾಡಿದ್ದರು. ಸದ್ಯ ಈ ವಿಚಾರವಾಗಿ ವಾಣಿವಿಲಾಸ್ ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. 75 ವರ್ಷಗಳ ಹಳೆಯ ಮೋಟಾರ್ ಬದಲಾಯಿಸಲಾಗಿದೆ. ಮೋಟಾರ್ ಬದಲಾವಣೆ ವೇಳೆ ಕೆಲ ಗಂಟೆಗಳ ಕಾಲ ನೀರು ನಿಂತಿತ್ತು. ಸದ್ಯ ಹೊಸ ಮೋಟಾರ್ ಅಳವಡಿಸಲಾಗಿದೆ ಎಂದು ವಾಣಿ ವಿಲಾಸ್ ಆಸ್ಪತ್ರೆ ಎಂ.ಎಸ್ ಸವಿತಾ ಮಾಹಿತಿ ನೀಡಿದ್ದಾರೆ.
ಸರ್ಕಾರ ಹದಿಹರೆಯ ಗರ್ಭಧಾರಣೆ ಕುರಿತು ಜಾಗೃತಿ ಮೂಡಿಸುತ್ತಿದ್ದರೂ ನಗರದಲ್ಲಿರುವ ಸರ್ಕಾರಿ ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸುಮಾರು 30% ರಷ್ಟು ಹದಿಹರೆಯದ ಹೆಣ್ಣುಮಕ್ಕಳು ಗರ್ಭಿಣಿಯರಾಗಿರುವ ಕುರಿತು ಇತ್ತೀಚೆಗೆ ವರದಿಯಾಗಿತ್ತು. ಇವುಗಳನ್ನು ಪೋಕ್ಸೊ ಪ್ರಕರಣಗಳೆಂದು ಪರಿಗಣಿಸಲಾಗಿತ್ತು.
ಇದನ್ನೂ ಓದಿ: ಸಿಬ್ಬಂದಿಗಳ ಕೊರತೆ: ಗದಗ ಜಿಮ್ಸ್ ಆಡಳಿತದ ನಿರ್ಲಕ್ಷ್ಯಕ್ಕೆ ರೋಗಿಗಳು ವಿಲವಿಲ
70% ಪ್ರಕರಣಗಳಲ್ಲಿ ಗರ್ಭಧರಿಸಿದವರು ವಿವಾಹಿತರಾಗಿದ್ದರು. ಪೋಕ್ಸೊ ಕಾಯಿದೆಯು ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಕಠಿಣ ಶಿಕ್ಷೆಯನ್ನು ಒದಗಿಸುವ ಮೂಲಕ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಮಾಡುತ್ತದೆ. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ, ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೆ ಕನಿಷ್ಠ ಮೂರು ತಿಂಗಳ ಕಾಲ ಜೈಲಿನಲ್ಲೇ ಇರಬೇಕಾಗಿತ್ತು.
ಸಿಬ್ಬಂದಿ ಹಾಗೂ ರೋಗಿ ಸಂಬಂಧಿಕರ ನಡುವೆ ಗಲಾಟೆ
ಇದೇ ವಾಣಿವಿಲಾಸ ಆಸ್ಪತ್ರೆಯಲ್ಲಿ ಇತ್ತೀಚೆಗೆ ಸಿಬ್ಬಂದಿ ಹಾಗೂ ರೋಗಿ ಸಂಬಂಧಿಕರ ನಡುವೆ ಗಲಾಟೆ ನಡೆದಿತ್ತು. ರೋಗಿ ಮೇಲೆ ಸ್ವಚ್ಛತಾ ಸಿಬ್ಬಂದಿಯಿಂದ ಹಲ್ಲೆ ಆರೋಪ ಕೇಳಿಬಂದಿತ್ತು. ಹಾಗಾಗಿ ಸಿಬ್ಬಂದಿಯನ್ನು ಮಹಿಳೆ ಅಟ್ಟಾಡಿಸಿಕೊಂಡು ಹೊಡೆದಿದ್ದರು. ಚಪ್ಪಲಿ ಬಿಡುವ ವಿಚಾರಕ್ಕೆ ಆಸ್ಪತ್ರೆ ಆವರಣದಲ್ಲಿ ಗಲಾಟೆ ನಡೆದಿತ್ತು ಎನ್ನಲಾಗಿತ್ತು.
ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗಾಗಿ ರೋಗಿಗಳ ಪರದಾಟ
ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲ, ಶೌಚಾಲಯದಲ್ಲೂ ನೀರಿಲ್ಲದೇ ರೋಗಿಗಳು ನರಳಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ ಆಸ್ಪತ್ರೆಯ ಆವರಣದಲ್ಲಿ ನೀರಿನ ಬಾಟಲ್ಗಳನ್ನು ಹಿಡಿದು ಮಹಿಳೆಯರು ಓಡಾಡುವ ಪರಿಸ್ಥಿತಿ ಎದುರಾಗಿತ್ತು.
ಇದನ್ನೂ ಓದಿ: ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ವ್ಹೀಲ್ ಚೇರ್ ಇಲ್ಲದೇ ರೋಗಿಗಳ ನರಳಾಟ, ಅವ್ಯವಸ್ಥೆ ವಿರುದ್ಧ ಗರ್ಭಿಣಿಯರ ಆಕ್ರೋಶ
ಜಿಲ್ಲಾಸ್ಪತ್ರೆಯಲ್ಲಿ ಕುಡಿಯುವ ನೀರಿಗಾಗಿ ರೋಗಿಗಳು, ಮಹಿಳೆಯರು ಹಾಗೂ ಬಾಣಂತಿಯರು ಪರದಾಡಿದ್ದರು. ಆಸ್ಪತ್ರೆಯಲ್ಲಿ ಕುಡಿಯುವ ಮತ್ತು ಬಿಸಿ ನೀರಿಲ್ಲದೆ ಮಹಿಳೆಯರು ಆಕ್ರೋಶಗೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.