ಕುಟುಂಬ ಸಮೇತ ದೇಶ ತೊರೆಯಲು ಮುಂದಾಗಿದ್ದ ಆರೋಪಿ ಆರೀಫ್: ಎನ್ಐಎ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಶಂಕಿತ ಉಗ್ರ ಮೊಹಮ್ಮದ್ ಆರೀಫ್ ಬಂಧನ ಕೇಸ್ಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಎನ್ಐಎ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಕುಟುಂಬ ಸಮೇತ ದೇಶ ತೊರೆಯಲು ಆರೋಪಿ ಆರೀಫ್ ಮುಂದಾಗಿದ್ದ ಎಂಬ ಸ್ಫೋಟಕ ಮಾಹಿತಿ ಎನ್ಐಎ ಅಧಿಕಾರಿಗಳ ತನಿಖೆ ವೇಳೆ ಬಹಿರಂಗವಾಗಿದೆ.
ಬೆಂಗಳೂರು, ಅಕ್ಟೋಬರ್ 16: ಶಂಕಿತ ಉಗ್ರ ಮೊಹಮ್ಮದ್ ಆರೀಫ್ ಬಂಧನ ಕೇಸ್ಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಎನ್ಐಎ ಅಧಿಕಾರಿಗಳು ಚಾರ್ಜ್ಶೀಟ್ (Suspected Terrorists) ಸಲ್ಲಿಸಿದ್ದಾರೆ. ಕುಟುಂಬ ಸಮೇತ ದೇಶ ತೊರೆಯಲು ಆರೋಪಿ ಆರೀಫ್ ಮುಂದಾಗಿದ್ದ ಎಂಬ ಸ್ಫೋಟಕ ಮಾಹಿತಿ ಎನ್ಐಎ ಅಧಿಕಾರಿಗಳ ತನಿಖೆ ವೇಳೆ ಬಹಿರಂಗವಾಗಿದೆ. ಇರಾನ್ ಗಡಿ ಮೂಲಕ ಅಕ್ರಮವಾಗಿ ಅಫ್ಘಾನಿಸ್ತಾನಕ್ಕೆ ಎಂಟ್ರಿಯಾಗಲು ಆರೀಫ್ ಸಂಚು ರೂಪಿಸಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ತಮ್ಮ ಇಡೀ ಕುಟುಂಬಕ್ಕೆ ಇರಾನ್ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದ.
ಇರಾನ್ಗೆ ತೆರಳಲು 4 ವಿಮಾನ ಟಿಕೆಟ್ ಬುಕ್ ಮಾಡಿದ್ದ ಆರೋಪಿ, ಅಲ್ಲದೇ ಮರಳಿ ಭಾರತಕ್ಕೆ ಬರುವಂತೆ ತೋರಿಸಲು ಮೆಗಾ ಪ್ಲ್ಯಾನ್ ಕೂಡ ಸಿದ್ದಪಡಿಸಿದ್ದ. ಭಾರತಕ್ಕೆ ಬರುವ 4 ಡಮ್ಮಿ ರಿಟರ್ನ್ ಫ್ಲೈಟ್ ಬುಕ್ ಮಾಡಿದ್ದ. ಇರಾನ್ನ ಮಶಾದ್ನಲ್ಲಿನ ಹೋಟೆಲ್ನಲ್ಲಿ ವಾಸ್ತವ್ಯಕ್ಕೆ ತಯಾರಿ ಮಾಡಲಾಗಿತ್ತು. ಇದೇ ವೇಳೆ ಮತ್ತೊಬ್ಬ ಉಗ್ರ ಹಮ್ರಾಜ್ ಶೇಕ್ ಕೃತ್ಯ ಬಯಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣ: ಐವರನ್ನು ಶೀಘ್ರದಲ್ಲೇ ವಶಕ್ಕೆ ಪಡೆಯಲಿರುವ ಎನ್ಐಎ ಅಧಿಕಾರಿಗಳು
ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸಲು ಉದ್ದೇಶಿಸಿದ್ದರು. ಟಿಟಿಪಿ ಸಿದ್ಧಾಂತವನ್ನು ಪ್ರಚಾರ ಮಾಡಿ ಯುವಕರ ನೇಮಕಾತಿ ಮಾಡಲಾಗುತ್ತಿತ್ತು. ಟಿಟಿಪಿ ಸಂಚು ಮುಂದುವರೆಸಲು ಪಾಕಿಸ್ತಾನಕ್ಕೆ ಹಣ ವರ್ಗಾವಣೆ ಮಾಡಿದ್ದ. ಆ ಮೂಲಕ ವಿಧ್ವಂಸಕ ಕೃತ್ಯಗಳನ್ನ ಎಸಗಿ ಜಿಹಾದ್ ಸ್ಥಾಪಿಸಲು ಮುಂದಾಗಿದ್ದರು ಎಂಬ ಸ್ಫೋಟಕ ಮಾಹಿತಿ ಎನ್ಐಎ ಟೀಂ ತನಿಖೆ ವೇಳೆ ಇಬ್ಬರು ಉಗ್ರರ ಸಂಚು ಬಯಲಾಗಿದೆ.
2023ರ ಫೆಬ್ರವರಿಯಲ್ಲಿ ಬೆಂಗಳೂರಿನ ಥಣಿಸಂದ್ರದಲ್ಲಿ ಎನ್ಐಎ ಹಾಗೂ ಐಎಸ್ಡಿ ಆರೀಫ್ನನ್ನು ಬಂಧಿಸಿತ್ತು. ಆರೀಫ್ ಜೊತೆಗೆ ಥಾಣೆಯಲ್ಲಿ ಮತ್ತೊಬ್ಬ ಉಗ್ರ ಹಮ್ರಾಜ್ ವರ್ಷಿದ್ ಶೇಖ್ ಎಂಬಾತನನ್ನು ಎನ್ಐಎ ತಂಡ ಬಂಧಿಸಿತ್ತು.
ಇದನ್ನೂ ಓದಿ: ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣ: ನಜಿರ್ಗೆ ಹಣ ತಲುಪಿಸುತ್ತಿದ್ದವ ಜನರಲ್ ಸ್ಟೋರ್ ಮಾಲೀಕ !
ನಿಷೇಧಿತ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆ ಜೊತೆ ಆರೋಪಿಗಳ ನಂಟು ಹೊಂದಿದ್ದರು. ನಿಷೇಧಿತ ಟಿಟಿಪಿ ಸಂಘಟನೆ ಚಟುವಟಿಕೆ ಮುಂದುವರಿಸಲು ಇಬ್ಬರು ಉಗ್ರರು ಯೋಜನೆ ರೂಪಿಸಿದ್ದರು. ಸಂಘಟನೆಗೆ ಹಣ ಸಂಗ್ರಹಿಸಲು ಹಾಗೂ ಯುವಕರನ್ನ ಸೆಳೆಯಲು ಯತ್ನಿಸಿದ್ದು, ಆ ಮೂಲಕ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದರು.
ನಗರದಲ್ಲಿ ಫ್ರೆಂಚ್ ಟ್ರಾನ್ಸ್ ಲೇಟರ್ ಆಗಿದ್ದ ಮೊಹಮ್ಮದ್ ಆರೀಫ್, ಉತ್ತರ ಪ್ರದೇಶದ ಅಲಿಘರ್ ಮೂಲದ ನಿವಾಸಿ. ಎನ್ ಕ್ರಿಫ್ಟೇಡ್ ಸೋಷಿಯಲ್ ಮೀಡಿಯಾ ಮೂಲಕ ಆರೋಪಿಗಳು ಸಂವಹನ ನಡೆಸಿದ್ದ. ಸಿರಿಯಾ ಮೂಲದ ಹ್ಯಾಂಡ್ಲರ್ಸ್ ಜೊತೆ ಆನ್‌ಲೈನ್ ಮೂಲಕ ಸಂಪರ್ಕ ಹೊಂದಿದ್ದು, ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ ಹಾಗೂ ಯುಎಪಿಎ ಸೆಕ್ಷನ್ ಅಡಿಯಲ್ಲಿ ತನಿಖೆ ನಡೆಸಿ ಸದ್ಯ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.