ರಾಜ್ಯದ ಬಿಜೆಪಿ ನಾಯಕರಿಗೆ ಇಂಥ ಶೋಚನೀಯ ಸ್ಥಿತಿ ಬರಬಾರದಿತ್ತು: ಸಿಎಂ ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ

ರಾಜ್ಯದ ಬಿಜೆಪಿ ನಾಯಕರಿಗೆ ಇಂಥ ಶೋಚನೀಯ ಸ್ಥಿತಿ ಬರಬಾರದಿತ್ತು: ಸಿಎಂ ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 16, 2023 | 5:53 PM

ಇವತ್ತಿನ ಸಭೆಯಲ್ಲಿ ಒಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ, ಕುಮಾರಸ್ವಾಮಿ ತಮ್ಮನ್ನು ಹೇಳದೆ ಕೇಳದೆ ಮೈತ್ರಿ ಬೆಳೆಸಿ ತಪ್ಪಿ ಮಾಡಿದ್ದಾರೆ, ಅವರ ನಿರ್ಧಾರವನ್ನು ಪಕ್ಷ ಒಪ್ಪಲ್ಲ, ಅವರು ತಪ್ಪನ್ನು ಮನವರಿಕೆ ಮಾಡಿಕೊಂಡು ಮೈತ್ರಿ ರದ್ದುಗೊಳಿಸಿದರೆ ಸರಿ, ಇಲ್ಲದಿದ್ದರೆ ಕೋರ್ ಕಮಿಟಿ ಸಭೆ ನಡೆಸಿ ನಿರ್ಣಯವನ್ನು ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ನಡೆಸಿ ಪ್ರಕಟಿಸುತ್ತೇವೆ ಎಂದು ಇಬ್ರಾಹಿಂ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಮಾತಾಡಿದ ಜೆಡಿಎಸ್ ಪಕ್ಷದ ಅಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim), ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ಗೊಡ್ಡು ಎಮ್ಮೆಗೆ (barren buffalo) ಹೋಲಿಸಿದರು. ಅವರನ್ನು ರಾಜ್ಯದ ಬಿಜೆಪಿ ನಾಯಕರೇ ಗಣನೆಗೆ ತೆಗೆದುಕೊಳ್ಳುತ್ತಿಲ್ಲವಾದರೂ ತಾನೇ ಎಲ್ಲ ಅಂತ ಓಡಾಡುತ್ತಿದ್ದಾರೆ. ಅವರು ಬಿಡಿ, ಕುಮಾರಸ್ವಾಮಿ ಜೊತೆ ಹೊಂದಾಣಿಕೆ ಮಾತುಕತೆ ನಡೆಸುವಾಗ ಬಿಜೆಪಿ ವರಿಷ್ಠರು; ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲಾದವರನ್ನು ಸಹ ಸಂಪರ್ಕಿಸಿಲ್ಲ. ರಾಜ್ಯದ ಬಿಜೆಪಿ ನಾಯಕರಿಗೆ ಇಂಥ ಸ್ಥಿತಿ ಬರಬಾರದಿತ್ತು ಎಂದು ಇಬ್ರಾಹಿಂ ಹೇಳಿದರು. ಇವತ್ತಿನ ಸಭೆಯಲ್ಲಿ ಒಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ, ಕುಮಾರಸ್ವಾಮಿ ತಮ್ಮನ್ನು ಹೇಳದೆ ಕೇಳದೆ ಮೈತ್ರಿ ಬೆಳೆಸಿ ತಪ್ಪಿ ಮಾಡಿದ್ದಾರೆ, ಅವರ ನಿರ್ಧಾರವನ್ನು ಪಕ್ಷ ಒಪ್ಪಲ್ಲ, ಅವರು ತಪ್ಪನ್ನು ಮನವರಿಕೆ ಮಾಡಿಕೊಂಡು ಮೈತ್ರಿ ರದ್ದುಗೊಳಿಸಿದರೆ ಸರಿ, ಇಲ್ಲದಿದ್ದರೆ ಕೋರ್ ಕಮಿಟಿ ಸಭೆ ನಡೆಸಿ ನಿರ್ಣಯವನ್ನು ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ನಡೆಸಿ ಪ್ರಕಟಿಸುತ್ತೇವೆ ಎಂದು ಇಬ್ರಾಹಿಂ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ