ಹಾಸನ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಉಸ್ತುವಾರಿ ಸಚಿವನ ಪಕ್ಕ ಕೂತು ಕಿತ್ತಾಡಿಕೊಂಡರು!
ಜಗಳ ನಡೆಯುತ್ತಿದ್ದಾಗ ಪೋಡಿಯಂ ಬಳಿ ನಿಂತು ಯಾರೋ ಮೈಕಲ್ಲಿ ಮಾತಾಡುತ್ತಿದ್ದರಿಂದ ಸುರೇಶ್ ಮತ್ತು ಶಿವಲಿಂಗೇಗೌಡರ ಜಟಾಪಟಿ ಅಸ್ಪಷ್ಟವಾಗಿ ಕೇಳಿಸುತ್ತದೆ. ಅದಲ್ಲದೆ ಬುದ್ಧಿವಂತರೊಬ್ಬರು ಶಾಸಕರ ಮುಂದಿದ್ದ ಮೈಕನ್ನು ತೆಗೆದುಕೊಂಡು ಹೋಗುತ್ತಾರೆ, ಅವರ ಮಾತುಗಳು ಜನರಿಗೆ ಕೇಳಿಸದಿರಲಿ ಅಂತ!
ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ (KN Rajanna) ಇಂದು ನಗರದಲ್ಲಿ ಜನತಾ ಕಾರ್ಯಕ್ರಮ ನಡೆಸುತ್ತಿದ್ದಾಗ ಸಚಿವರ ಬಳಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಬಂದಿದ್ದ ಜನರಿಗೆ ವೇದಿಕೆ ಇಬ್ಬರು ಶಾಸಕರು ಕಿತ್ತಾಡಿದ ಪ್ರಸಂಗದ ದರ್ಶನವಾಯಿತು! ರಾಜಣ್ಣನ ಬಲಭಾಗದಲ್ಲಿ ಕುಳಿತಿದ್ದ ಅರಸೀಕೆರೆ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಹಾಗೂ ಬೇಲೂರು ಬಿಜೆಪಿ ಹೆಚ್ ಕೆ ಸುರೇಶ್ (HK Suresh) ಸಾರ್ವಜನಿಕವಾಗಿ ಕಿತ್ತಾಡಿಕೊಂಡ ಮಹಾನುಭಾವರು. ಮದ್ಯದಂಗಡಿ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರ ನಡುವೆ ವಾಗ್ವಾದ ಶುರುವಾಯಿತು ಅಂತ ಟಿವಿ9 ಕನ್ನಡ ವಾಹಿನಿಯ ಹಾಸನ ವರದಿಗಾರ ಮಾಹಿತಿ ನೀಡಿದ್ದಾರೆ. ಜಗಳ ನಡೆಯುತ್ತಿದ್ದಾಗ ಪೋಡಿಯಂ ಬಳಿ ನಿಂತು ಯಾರೋ ಮೈಕಲ್ಲಿ ಮಾತಾಡುತ್ತಿದ್ದರಿಂದ ಸುರೇಶ್ ಮತ್ತು ಶಿವಲಿಂಗೇಗೌಡರ ಜಟಾಪಟಿ ಅಸ್ಪಷ್ಟವಾಗಿ ಕೇಳಿಸುತ್ತದೆ. ಅದಲ್ಲದೆ ಬುದ್ಧಿವಂತರೊಬ್ಬರು ಶಾಸಕರ ಮುಂದಿದ್ದ ಮೈಕನ್ನು ತೆಗೆದುಕೊಂಡು ಹೋಗುತ್ತಾರೆ, ಅವರ ಮಾತುಗಳು ಜನರಿಗೆ ಕೇಳಿಸದಿರಲಿ ಅಂತ! ಸಚಿವ ಮಧ್ಯಸ್ಥಿಕೆ ವಹಿಸಿ ನ್ಯಾಯ ಪಂಚಾಯಿತಿ ಮಾಡುವ ಪ್ರಯತ್ನ ಮಾಡುತ್ತಾರೆ, ಆದರೂ ಮಾತಿನ ಡಿಶುಂ ಡಿಶುಂ ನಿಲ್ಲಲ್ಲ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
