‘ಅವನೊಬ್ಬ ಗಂಡ್ಸಾ ಥೂ ಅಸಹ್ಯ’: ತುಕಾಲಿ ಸಂತು ವಿರುದ್ಧ ಈಶಾನಿ ವಾಗ್ಯುದ್ಧ
Bigg Boss 10: ಬಿಗ್ಬಾಸ್ ಮನೆಯಲ್ಲಿ ನಿಜವಾದ 'ಆಟ' ಆರಂಭವಾದಂತಿದೆ. ಟಾಸ್ಕ್ ಒಂದರ ಸಂದರ್ಭದಲ್ಲಿ ಇಶಾನಿ ಹಾಗೂ ತುಕಾಲಿ ಸಂತು ನಡುವೆ ದೊಡ್ಡ ಜಗಳವೇ ನಡೆದಿದೆ. ಸಿಟ್ಟಿಗೆದ್ದ ಇಶಾನಿ, 'ಅವನೊಬ್ಬ ಗಂಡಸಾ' ಎಂದೆಲ್ಲ ವಾಗ್ದಾಳಿ ಮಾಡಿದ್ದಾರೆ.
ಬಿಗ್ಬಾಸ್ (Bigg Boss) ಕನ್ನಡ ಸೀಸನ್ 10ರ ‘ಸಿಹಿ ಸಮಯ’ ಮುಗಿದು ನಿಜವಾದ ‘ಆಟ’ ಎರಡನೇ ವಾರದ ಮೊದಲ ದಿನದಿಂದಲೇ ಆರಂಭವಾದಂತಿದೆ. ಎರಡನೇ ವಾರದ ಮೊದಲ ದಿನ ಸ್ಪರ್ಧಿಗಳು ಏಳುವ ಮೊದಲೇ ನಾಮಿನೇಶನ್ ಪ್ರಕ್ರಿಯೆಯನ್ನು ಬಿಗ್ಬಾಸ್ ಪ್ರಾರಂಭಿಸಿದರು. ಅದು ಬೆಳ್ಳಂಬೆಳಿಗ್ಗೆ ಸ್ಪರ್ಧಿಗಳ ನಡುವೆ ಸಂಘರ್ಷಕ್ಕೆ ಕಾರಣವಾಯ್ತು. ಆ ನಂತರವೂ ಬಿಗ್ಬಾಸ್ ಕೊಟ್ಟ ಟಾಸ್ಕ್ ಒಂದು ಸ್ಪರ್ಧಿಗಳ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಯ್ತು. ಅದರಲ್ಲಿಯೂ ಈಶಾನಿ ಹಾಗೂ ತುಕಾಲಿ ಸಂತೋಶ್ ನಡುವೆ ದೊಡ್ಡ ಮಟ್ಟದ ಜಗಳವೇ ನಡೆಯಿತು. ಇಬ್ಬರೂ ಸ್ಪರ್ಧಿಗಳು ಪರಸ್ಪರರ ಬಗ್ಗೆ ಏಕವಚನದಲ್ಲಿ ಬೈದಾಡಿಕೊಂಡರು. ತುಕಾಲಿ ಸಂತೋಶ್ ಅನ್ನು ಉದ್ದೇಶಿಸಿ, ಅವನೊಬ್ಬ ಗಂಡಸಾ, ಥೂ ಅಸಹ್ಯ’ ಎಂದು ವಾಗ್ಯುದ್ಧವನ್ನೇ ನಡೆಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos