ಸಿಬ್ಬಂದಿಗಳ ಕೊರತೆ: ಗದಗ ಜಿಮ್ಸ್ ಆಡಳಿತದ ನಿರ್ಲಕ್ಷ್ಯಕ್ಕೆ ರೋಗಿಗಳು ವಿಲವಿಲ

ಗದಗ ಜಿಮ್ಸ್ ಈಗ ಸುತ್ತಲಿನ ನಾಲ್ಕೈದು ಜಿಲ್ಲೆಯ ಜನರು ಪಾಲಿಗೆ ಸಂಜೀವಿನಿಯಾಗಿದೆ. ಹೀಗಾಗಿ ನಿತ್ಯವೂ ಸಾವಿರಾರು ರೋಗಿಗಳು ಜಿಮ್ಸ್ ಆಸ್ಪತ್ರೆಗೆ ಬರುತ್ತಾರೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಗಳು ಅಷ್ಟೇ ಅಲ್ಲ ಮೆಡಿಕಲ್ ಸುಪರಿಡೆಂಟ್​ಗೂ ಭದ್ರತೆ ಇಲ್ಲದಂತಾಗಿದೆ. ಇಲ್ಲಿ ನಿತ್ಯವೂ ಜೀವ ಕೈಯಲ್ಲೇ ಹಿಡ್ಕೊಂಡು ಸೇವೆ ಮಾಡುವಂತಾಗಿದೆಯಂತೆ. ಇದಕ್ಕೆ ಕಾರಣ ಸಿಬ್ಬಂದಿ ಕೊರತೆ ಎನ್ನಲಾಗುತ್ತಿದೆ.

ಸಿಬ್ಬಂದಿಗಳ ಕೊರತೆ: ಗದಗ ಜಿಮ್ಸ್ ಆಡಳಿತದ ನಿರ್ಲಕ್ಷ್ಯಕ್ಕೆ ರೋಗಿಗಳು ವಿಲವಿಲ
ಮೆಡಿಕಲ್ ಸುಪರಿಡೆಂಟ್ ಡಾ. ರೇಖಾ ಸೊನವನೆ, ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಳ್ಳಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 14, 2023 | 5:10 PM

ಗದಗ, ಅಕ್ಟೋಬರ್​​ 14: ಗದಗ ಜಿಮ್ಸ್ ಆಸ್ಪತ್ರೆ (GIMS Hospital Gadag) ಯಲ್ಲಿ ವೈದ್ಯರು, ಸಿಬ್ಬಂದಿಗಳು ಅಷ್ಟೇ ಅಲ್ಲ ಮೆಡಿಕಲ್ ಸುಪರಿಡೆಂಟ್​ಗೂ ಭದ್ರತೆ ಇಲ್ಲದಂತಾಗಿದೆ. ಇಲ್ಲಿ ನಿತ್ಯವೂ ಜೀವ ಕೈಯಲ್ಲೇ ಹಿಡ್ಕೊಂಡು ಸೇವೆ ಮಾಡುವಂತಾಗಿದೆಯಂತೆ. ಇದಕ್ಕೆ ಕಾರಣ ಸಿಬ್ಬಂದಿ ಕೊರತೆ. ಕನಿಷ್ಠ ಪಕ್ಷ ಭದ್ರತಾ ಸಿಬ್ಬಂದಿಗಳ ನೇಮಕವೂ ಜಿಮ್ಸ್ ಆಡಳಿತ ಮಾಡಿಲ್ಲ. ಹೀಗಾಗಿ ಜಿಮ್ಸ್​ನಲ್ಲಿ ಪದೇ ಪದೇ ಅವ್ಯವಸ್ಥೆ ಅದ್ವಾನದ ಘಟನೆಗಳು ನಡೀತಾನೇ ಇವೆ. ಜನರು ವೈದ್ಯರು, ಸಿಬ್ಬಂದಿಗಳ ಮೇಲೆ ಹಲ್ಲೆಗೂ ಮುಂದಾಗಿದ್ದಾರಂತೆ. ಹೀಗಾದರೆ ಡ್ಯೂಟಿ ಮಾಡಿವುದಾದರೂ ಹೇಗೆ? ಎಷ್ಟೂ ಬಾರಿ ಮನವಿ ಮಾಡಿದರೂ ನಿರ್ದೇಶಕರು ಸಿಬ್ಬಂದಿಗಳ ನೇಮಕವೇ ಮಾಡುತ್ತಿಲ್ಲ. ಅಂತ ಎಂಎಸ್, ನಿರ್ದೇಶಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗದಗ ಜಿಮ್ಸ್ ಈಗ ಸುತ್ತಲಿನ ನಾಲ್ಕೈದು ಜಿಲ್ಲೆಯ ಜನರು ಪಾಲಿಗೆ ಸಂಜೀವಿನಿಯಾಗಿದೆ. ಹೀಗಾಗಿ ನಿತ್ಯವೂ ಸಾವಿರಾರು ರೋಗಿಗಳು ಜಿಮ್ಸ್ ಆಸ್ಪತ್ರೆಗೆ ಬರುತ್ತಾರೆ. ಹೀಗಾಗಿ ಸರ್ಕಾರವೂ ಕೂಡ ಹೈಟೆಕ್ ಆಸ್ಪತ್ರೆ ಸೌಲಭ್ಯ ಸೇರಿ ಎಲ್ಲ ರೀತಿಯ ಸೌಲಭ್ಯ ನೀಡಿದೆ. ಪ್ರತಿ ವರ್ಷ ಕೋಟಿ ಕೋಟಿ ರೂ. ಅನುದಾನ ನೀಡ್ತಾಯಿದೆ. ಆದರೆ ಸಮಸ್ಯೆಗಳು ಮಾತ್ರ ಕಡಿಮೆಯಾಗಿಲ್ಲ. ಬದಲಾಗಿ ಇನ್ನೂ ಬೆಟ್ಟದಷ್ಟು ಬೆಳೆದಿವೆ. ಇದಕ್ಕೆ ಕಾರಣ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಳ್ಳಿ ಅನ್ನೋದು ಇಲ್ಲಿನ ಅಧಿಕಾರಿಗಳ ಮಾತಿನಲ್ಲಿ ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: ಗದಗ: 500 ಕೋಟಿ ರೂ. ಹಗರಣ ಆರೋಪ: ಶುದ್ಧ ಸುಳ್ಳು ಎಂದ ಮಾಜಿ ಸಚಿವ ಸಿಸಿ ಪಾಟೀಲ್

ಈ ಮೊದಲು ಜಿಲ್ಲಾಸ್ಪತ್ರೆ 250 ಬೆಡ್ ಆಸ್ಪತ್ರೆ ಇತ್ತು. 250 ಬೆಡ್​ಗೆ ಎಷ್ಟು ಸಿಬ್ಬಂದಿ ಬೇಕೋ ಇನ್ನೂ ಅಷ್ಟೇ ಇದೆಯಂತೆ. ಈಗ 1000 ಬೆಡ್ ಆಸ್ಪತ್ರೆ ಆಗಿದೆ. ಆದರೆ ಸಿಬ್ಬಂದಿಗಳು ಇರೋದು 250 ಬೆಡ್ ನಿಭಾಯಿಸುವಷ್ಟು ಮಾತ್ರ. ಹೀಗಾಗಿ ನಿತ್ಯವೂ ಗರ್ಭಿಣಿಯರು ಸೇರಿ ರೋಗಿಗಳು ಪರದಾಡುತ್ತಿದ್ದಾರೆ. ಒಂದಿಲ್ಲೊಂದು ಯಡವಟ್ಟು, ಅವ್ಯವಸ್ಥೆ, ಅದ್ವಾನಗಳು ನಡೀತಾನೆ ಇವೆ. ಇದಕ್ಕೆ ಪ್ರಮುಖ ಕಾರಣ ಸಿಬ್ಬಂದಿಗಳ ಕೊರತೆ. ರೋಗಿಗಳ ಸಂಬಂಧಿಕರು ಅವ್ಯವಸ್ಥೆಯಿಂದ ಎಲ್ಲಿ ರೋಗಿಗಳಿಗೆ ಸಮಸ್ಯೆ ಆಗುತ್ತೆ ಅನ್ನೋ ಕಾರಣಕ್ಕೆ ಜಗಳಕ್ಕೆ ಬರ್ತಾರೆ. ಒಂದೊಂದು ಬಾರಿ ವೈದ್ಯರು, ಸಿಬ್ಬಂದಿಗಳ ಮೇಲೆ ಹಲ್ಲೆ ಯತ್ನಿಸಿದ್ದಾರಂತೆ. ಅಷ್ಟೇ ಅಲ್ಲ ಸರ್ ನನ್ನ ಮೇಲೂ ಹಲ್ಲೆಗೆ ಯತ್ನ ನಡೆದಿದೆ. ಕೆಲವರು ಜಗಳ ಮಾಡಲು ಬರ್ತಾರೆ. ಅವರು ಯಾರ ಗುಂಪಿಗೆ ಸೇರಿದ್ದಾರೆ ಗೋತ್ತಿಲ್ಲ ಅಂತ ಮೆಡಿಕಲ್ ಸುಪರಿಡೆಂಟ್ ಡಾ. ರೇಖಾ ಸೊನವನೆ ಟಿವಿ9 ಎದುರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಹೀಗಾಗಿ ವೈದ್ಯರು, ಸಿಬ್ಬಂದಿ, ನಾವು ಡ್ಯೂಟಿ ಮಾಡೋದು ಹೇಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಅಗತ್ಯ ಸಿಬ್ಬಂದಿಗಳು ಇದ್ರೆ ಇಂಥ ಅವಘಡಗಳು ನಡೆಯಲ್ಲ. ನಿತ್ಯ ಸಾವಿರಾರೂ ರೋಗಿಗಳು ಆಸ್ಪತ್ರೆ ಬರ್ತಾರೆ. ಆದ್ರೆ, ಸಿಬ್ಬಂದಿಗಳು ಇರೋದು 250-300 ಬೆಡ್ ಹಾಸಿಗೆ ಆಸ್ಪತ್ರೆಯಷ್ಟು ಮಾತ್ರ. ಹೀಗಾಗಿ ನಿತ್ಯವೂ ಆಸ್ಪತ್ರೆಯಲ್ಲಿ ಸಮಸ್ಯೆ ಆಗ್ತಾಯಿದೆ. ಸಿಬ್ಬಂದಿ ನೇಮಕ ಮಾಡುವಂತೆ ಸಾಕಷ್ಟು ಬಾರಿ ನಿರ್ದೇಶಕರಿಗೆ ಮೌಖಿಕವಾಗಿ ಹೇಳಲಾಗಿದೆ. ಅಷ್ಟೇ ಅಲ್ಲ ಪತ್ರ ಬರೆಯಲಾಗಿದೆ. ಆದ್ರೆ, ನಿರ್ದೇಶಕರು ಮಾತ್ರ ಕ್ಯಾರೇ ಎಂದಿಲ್ಲ. 450 ಬೆಡ್ ಆಸ್ಪತ್ರೆ ಇನ್ನೂ ಉದ್ಘಾಟನೆ ಆಗಿಲ್ಲ. ಪೂರ್ಣ ಸಿಬ್ಬಂದಿ ನೇಮಕ ಮಾಡಿಯೇ ಆರಂಭ ಮಾಡುವುದಾಗಿ ಹೇಳಿದ್ದೇನೆ. ಆದ್ರೆ, ಆರಂಭ ಮಾಡಿದ್ದಾರೆ ಭದ್ರತಾ ಸಿಬ್ಬಂದಿ ಇಲ್ಲ.

ಇದನ್ನೂ ಓದಿ; ಗದಗ ನಗರಸಭೆ ಕಚೇರಿಯಲ್ಲೇ ಕೈ ಕೈ ಮಿಲಾಯಿಸಿದ ಕಾಂಗ್ರೆಸ್-ಬಿಜೆಪಿ ಸದಸ್ಯರು

ಸಿಬ್ಬಂದಿಗಳಿಗೆ ಜನ್ರು ಹಲ್ಲೆ ಮಾಡಿದ್ದಾರೆ. ನನ್ನ ಮೇಲೂ ಹಲ್ಲೆ ಮಾಡಲು ಬಂದಿದ್ರು. ಭದ್ರತಾ ಸಿಬ್ಬಂದಿ ಯಾರೂ ಇರಲಿಲ್ಲ. ಪೊಲೀಸ್ರಿಗೆ ಫೋನ್ ಮಾಡಿದ್ದೇ. ಪೊಲೀಸ್ರು ಬಂದು ಸಮಸ್ಯೆ ಬಗೆಹರಿಸಿದ್ದಾರೆ. ಸಿಬ್ಬಂದಿ ನೇಮಕಕ್ಕೆ ನಿರ್ಧೇಶಕರಿಗೆ ಪತ್ರ ಬರೆದ್ರೂ ಸಿಬ್ಬಂದಿ ನೇಮಕದ ಬಗ್ಗೆ ಉತ್ತರ ಬಂದಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಳ್ಳಿ ಅವ್ರನ್ನು ಕೇಳಿದ್ರೆ, ಸಿಬ್ಬಂದಿಗಳ ಕೊರತೆ ಇರೋದು ನಿಜ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರ ಅಗತ್ಯ ಸಿಬ್ಬಂದಿ ನೇಮಕಕ್ಕೆ ಅನುಮತಿ ನೀಡಬೇಕು. ಅನುಮತಿ ನೀಡಿದ ತಕ್ಷಣ ನೇಮಕ ಮಾಡಿಕೊಳ್ಳಾಗುತ್ತೆ ಎಂದಿದ್ದಾರೆ. ಆದ್ರೆ, ಯಾವ ಸಿಬ್ಬಂದಿಗಳ ಮೇಲೂ ಹಲ್ಲೆಯಾಗಿಲ್ಲ. ಇಂಥ ಘಟನೆಗಳು ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.,

ದೇವ್ರು ವರ ಕೊಟ್ರು ಪೂಜಾರ ಕೊಡಲ್ಲ ಅಂತಾರಲ್ಲ. ಹಾಗಾಗಿದೆ ಗದಗ ಜಿಮ್ಸ್ ಆಸ್ಪತ್ರೆ ಕಥೆ. ಸರ್ಕಾರ ಎಲ್ಲ ಸೌಲಭ್ಯ ನೀಡಿದ್ರೂ ಜನ್ರಿಗೆ ಮಾತ್ರ ಸೌಲಭ್ಯ ಸರಿಯಾಗಿ ಸಿಗ್ತಾಯಿಲ್ಲ. ನಿರ್ದೇಶಕರು ಹಾಗೂ ಆಸ್ಪತ್ರೆ ಎಂಎಸ್ ನಡುವೆ ಹೊಂದಾಣಿಕೆ ಕೊರತೆಯೇ ಈ ಎಲ್ಲ ಅವ್ಯವಸ್ಥೆ, ಅದ್ವಾನಕ್ಕೆ ಕಾರಣ ಅನ್ನೋ ಗುಸುಗುಸು ಸದ್ದು ಜಿಮ್ಸ್ ಆಸ್ಪತ್ರೆಯಲ್ಲಿ ಕೇಳಿ ಬರ್ತಾಯಿದೆ. ಇಬ್ಬರ ಮುಸಕಿನ ಗುದ್ದಾಟದಲ್ಲಿ ರೋಗಿಗಳು ಹೈರಾಣಾಗೋದು ಎಷ್ಟರ ಮಟ್ಟಿಗೆ ಸರಿ. ಆಸ್ಪತ್ರೆಯಲ್ಲಿ ದುರಂತ ನಡೆಯುವ ಮುನ್ನ ವೈದ್ಯಕೀಯ ಇಲಾಖೆ ಹಾಗೂ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ರು ಎಚ್ಚೆತ್ತುಕೊಂಡು ವ್ಯವಸ್ಥೆ ಸರಿ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್