ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸಮೀಪದ ಬಸ್​ ನಿಲ್ದಾಣವನ್ನೇ ಕದ್ದೊಯ್ದ ಖದೀಮರು

ಕಳ್ಳರು ಹಣ, ಬೈಕ್ ಸೇರಿದಂತೆ ಕೈಗೆ ಸಿಗುವ ವಸ್ತುಗಳನ್ನು ಕಳ್ಳತನ ಮಾಡುವುದನ್ನು ಕೇಳಿದ್ದೇವೆ. ಇಲ್ಲ, ಮನೆ-ಬ್ಯಾಂಕ್​ಗೆ ನುಗ್ಗಿ ಕೈಗೆ ಸಿಗುವ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುವುದನ್ನು ಕೇಳಿದ್ದೇವೆ. ಆದ್ರೆ, ಬೆಂಗಳೂರಿನಲ್ಲಿ ಪ್ರಯಾಣಿಕರಿಗಾಗಿ ನಿರ್ಮಾನಿಸಲಾಗಿದ್ದು ಬಸ್​ ನಿಲ್ದಾಣವನ್ನೇ ಕದ್ದೊಯ್ದಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸಮೀಪದ ಬಸ್​ ನಿಲ್ದಾಣವನ್ನೇ ಕದ್ದೊಯ್ದ ಖದೀಮರು
ಬಸ್​ ನಿಲ್ದಾಣ ನಿರ್ಮಿಸಲಾಗಿದ್ದ ಸ್ಥಳ
Edited By:

Updated on: Oct 05, 2023 | 10:52 AM

ಬೆಂಗಳೂರು, (ಅಕ್ಟೋಬರ್ 05): ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಕೊಂಚ ದೂರದಲ್ಲೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಹೌದು.. ಪೊಲೀಸ್ ಕಮಿಷನರ್ ಕಚೇರಿಯ ಹಿಂಭಾಗ,  ವಿಧಾನಸೌಧದಿಂದ 1 ಕಿ.ಮೀಗಿಂತ ಕಡಿಮೆ ದೂರದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ  ನಿರ್ಮಿಸಲಾಗಿದ್ದ ಪ್ರಯಾಣಿಕರ ತಂಗುದಾಣವನ್ನು (BMTC bus shelter )ಕದ್ದೊಯ್ದಿದ್ದಾರೆ. ನಿರ್ಮಿಸಿದ್ದ ಒಂದು ವಾರದೊಳಗೆ ಮಾಯವಾಗಿದ್ದು ಅಚ್ಚರಿಗೆ ಕಾರಣವಾಗಿದೆ.

ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಖಾಸಗಿ ಕಂಪನಿಯೊಂದು ಸ್ಟೀಲ್​ನಿಂದ ಬಿಎಂಟಿಸಿ ಬಸ್ ನಿಲ್ದಾಣವನ್ನು ನಿರ್ಮಿಸಿತ್ತು. ಆದ್ರೆ, ಒಂದು ತಿಂಗಳಲ್ಲಿ ಸ್ಥಳದಿಂದ ಬಸ್​ ನಿಲ್ದಾಣ ನಾಪತ್ತೆಯಾಗಿದೆ. ಕಂಪನಿಯ ಸಹಾಯಕ ಉಪಾಧ್ಯಕ್ಷ ಎನ್ ರವಿ ರೆಡ್ಡಿ ಅವರು ನಿರ್ಮಿಸಲಾಗಿದ್ದ ಬಸ್​ ನಿಲ್ದಾವನ್ನು ನೋಡಲು ಸ್ಥಳಕ್ಕೆ ಬಂದಿದ್ದಾರೆ. ಆದ್ರೆ, ಅಲ್ಲಿ ಬಸ್​ ನಿಲ್ದಾಣ ಇಲ್ಲದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿನಿಮಾ ಕಥೆಯಂತೆ ನಡೆದ ರಿಯಲ್ ಸ್ಟೋರಿ: ಚಾಕು ಹಿಡಿದು ಬೆದರಿಸಲು ಹೋದವ ಕೊಲೆಯಾದ

ಇದರಿಂದ ಅವಕ್ಕಾದ ಎನ್ ರವಿ ರೆಡ್ಡಿ, ಈ ಬಗ್ಗೆ ಬಿಬಿಎಂಪಿ ಬಳಿ ವಿಚಾರಿಸಿದ್ದಾರೆ. ತಂಗುದಾಣವನ್ನು ತಾವು ತೆರುವು ಮಾಡಿಲ್ಲ ಎಂದು ಬಿಬಿಎಂಪಿ ಸಹ ಹೇಳಿದೆ. ಬಳಿಕ ಕಂಪನಿ ಸೆಪ್ಟೆಂಬರ್ 30ರಂದು ಈ  ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಪೊಲಿಸರು, ಕದ್ದುಕೊಂಡು ಹೋಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ಬಸ್​ ನಿಲ್ದಾಣದ ಅಕ್ಕ-ಪಕ್ಕದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us