ಬೆಂಗಳೂರು: ಅಕ್ಟೋಬರ್ 14, ಇಂದು ರಾಜ್ಯಾದ್ಯಂತ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಜನ ತಮ್ಮ ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ ಪೂಜೆ ಮಾಡುತ್ತಿದ್ದಾರೆ. ಆದ್ರೆ KSRTC, BMTC ಬಸ್‌ಗೆ ಪೂಜೆ ಮಾಡಲು ತಲಾ ಬಸ್ಗೆ ಕೇವಲ 100 ರೂ ನೀಡಲಾಗಿದೆ. ಹೀಗಾಗಿ 100 ರೂನಲ್ಲಿ ಬಸ್ ಪೂಜೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಸಿಬ್ಬಂದಿ ಇದ್ದಾರೆ.
ಇಂದು ಆಯುಧ ಪೂಜೆ ಹಿನ್ನೆಲೆ ಸಾರಿಗೆ ನಿಗಮದಿಂದ 1 ಬಸ್‌ಗೆ ಕೇವಲ ₹100 ನೀಡಲಾಗಿದೆ. ಆದ್ರೆ 100 ರೂ.ಗೆ ಬಸ್ಗಳನ್ನು ಸಿಂಗರಿಸಿ ಪೂಜೆ ಮಾಡಲು ಅಸಾಧ್ಯ ಎಂದು ಸಿಬ್ಬಂದಿ ಅಸಮಾಧಾನ ಹೊರ ಹಾಕಿದ್ದಾರೆ. 100 ರೂಗೆ ಏನು ಮಾಡುವುದಕ್ಕೆ ಆಗುತ್ತೆ. ಬಸ್ಗೆ ಹೇಗೆ ಪೂಜೆ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಸಂಸ್ಥೆಯ ಕಾರ್ ಮತ್ತು ಜೀಪ್ ಪೂಜೆ ಮಾಡೋಕೆ 40 ರೂಪಾಯಿ ಕೊಟ್ಟಿದ್ದಾರೆ. ಈ ಬಗ್ಗೆ ಕೇಳಿದ್ರೆ ಪೂಜೆ ಮಾಡಬಹುದು ಮಾಡಿ ಎಂದು ಹೇಳುತ್ತಿದ್ದಾರೆ.
100 ರೂಗೆ ಎರಡು ಬಾಳೆಕಂದು ಕೂಡಾ ಬರೋಲ್ಲ. ಸ್ವಂತ ಖರ್ಚಿನಲ್ಲಿ ಪೂಜೆ ಮಾಡೋಣ ಅಂದ್ರೂ ಆಗುತ್ತಿಲ್ಲ. ಕೊರೊನಾ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದ ಸಾರಿಗೆ ನೌಕರರಿಗೆ ಪೂರ್ಣ ಸಂಬಳ ಸಹ ಕೊಡುತ್ತಿಲ್ಲ. ಕೊಡುವ ಅರ್ಧ ಸಂಬಳ ನಮಗೆ ಸಾಕಾಗ್ತಿಲ್ಲ ಎಂದು ಸಿಬ್ಬಂದಿ ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Ayudha Puja: ರಾಜ್ಯಾದ್ಯಂತ ಆಯುಧ ಪೂಜೆ ಸಂಭ್ರಮ, ತುಂಬಿ ತುಳುಕುತ್ತಿವೆ ಮಾರುಕಟ್ಟೆಗಳು
Published On - 9:18 am, Thu, 14 October 21