ಬೆಂಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ: ಮೆಜೆಸ್ಟಿಕ್ ಬಳಿ ಕೆಎಸ್ಆರ್​​ಟಿಸಿ ಬಸ್ ಮೇಲೆ ಬಿದ್ದ ಮರ

ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿತ್ತು. KSRTC ಬಸ್ ಮೇಲೆ ಮರ ಉರುಳಿಬಿದ್ದ ಪರಿಣಾಮ ಬಸ್‌ನ ಕಿಟಿಕಿ ಗಾಜು ಜಖಂಗೊಂಡಿದೆ. ಬಸ್‌ನಲ್ಲಿದ್ದ 15 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.

ಬೆಂಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ: ಮೆಜೆಸ್ಟಿಕ್ ಬಳಿ ಕೆಎಸ್ಆರ್​​ಟಿಸಿ ಬಸ್ ಮೇಲೆ ಬಿದ್ದ ಮರ
ರಾಜಧಾನಿಯಲ್ಲಿ ಮುಂದುವರಿದ ಮಳೆ ಕಾಟ: ಮೆಜೆಸ್ಟಿಕ್ ಬಳಿ ಕೆಎಸ್ಆರ್​​ಟಿಸಿ ಬಸ್ ಮೇಲೆ ಬಿದ್ದ ಮರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 14, 2021 | 9:50 AM

ಬೆಂಗಳೂರು: ರಾಜಧಾನಿಯಲ್ಲಿ ಮಳೆ ಕಾಟ ಮುಂದುವರಿದಿದೆ. ಅನಾಹುತಗಳು ಅಲ್ಲಲ್ಲಿ ಘಟಿಸುತ್ತಿವೆ. ಸಾವು ನೋವಿನ ಪ್ರಕರಣಗಳು ವರದಿಯಾಗಿಲ್ಲವಾದರೂ, ಆಸ್ತಿಪಾಸ್ತಿ ನಷ್ಟ, ಜನತೆಗೆ ಕಷ್ಟಗಳು ಒದಗಿಬರುತ್ತಿವೆ. ಮೆಜೆಸ್ಟಿಕ್ ಬಳಿ ಕೆಎಸ್ಆರ್​​ಟಿಸಿ ಬಸ್ ಮೇಲೆ ಮರ ಬಿದ್ದಿದೆ. ಗುರುವಾರ ರಾತ್ರಿ 10 ಗಂಟೆಯಲ್ಲಿ ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿತ್ತು. KSRTC ಬಸ್ ಮೇಲೆ ಮರ ಉರುಳಿಬಿದ್ದ ಪರಿಣಾಮ ಬಸ್‌ನ ಕಿಟಿಕಿ ಗಾಜು ಜಖಂಗೊಂಡಿದೆ. ಬಸ್‌ನಲ್ಲಿದ್ದ 15 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.

ಮಡಿವಾಳ ಮತ್ತು ಬಿಟಿಎಂ ಲೇಔಟ್ ಜಲಾವೃತ ಇನ್ನು, ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಮಡಿವಾಳ ಮತ್ತು ಬಿಟಿಎಂ ಲೇಔಟ್ ಜಲಾವೃತಗೊಂಡಿದ್ದು, ಲೇಔಟ್ ನಿವಾಸಿಗಳ ಪರದಾಟ ಹೇಳತೀರದಾಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು, ಬೈಕ್‌ಗಳು ಜಲಾವೃತಗೊಂಡಿವೆ. ಐಷಾರಾಮಿ ಕಾರುಗಳು ಮಳೆ ನೀರಿನಲ್ಲಿ ಮುಳುಗಿವೆ.

ಇದನ್ನೂ ಓದಿ: ಮಳೆ ಬಂದರೆ ಬೆಂಗಳೂರು ಜನರಿಗೆ ಸ್ವಿಮ್ಮಿಂಗ್ ಪೂಲ್ ಭಾಗ್ಯ

ಇದನ್ನೂ ಓದಿ: ಜೋರು ಮಳೆ, ಪೊಲೀಸ್ ಕಾರ್ಯಾಚರಣೆ; ಬಾವಿಗೆ ಬಿದ್ದ ಆರೋಪಿ, ಪೊಲೀಸರಿಂದಲೇ ರಕ್ಷಣೆ

Bengaluruಲ್ಲಿ ಶಾಂತವಾಗದ ವರುಣನ ಅಬ್ಬರ! ರಾತ್ರಿ ಮಳೆಗೆ Majesticನಲ್ಲಿ Bus ಮೇಲೆ ಬಿತ್ತು ಮರ

(rain havoc continues in bangalore huge tree fell on ksrtc bus near majestic)

Published On - 8:41 am, Thu, 14 October 21