ಕೊಲೆ ಆರೋಪಿಯನ್ನು 68 ಬಾರಿ ಮಾರಕಾಸ್ತ್ರಗಳಿಂದ ಕೊಚ್ಚಿದ ಪುಂಡರು: ವ್ಯಕ್ತಿ ಬದುಕಿದ್ದೇ ಪವಾಡ!

ಬೆಂಗಳೂರಿನಲ್ಲಿ ಕೊಲೆ ಆರೋಪಿಯೋರ್ವನ ಮೇಲೆ ದಾಳಿ ನಡೆದಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರೋಬ್ಬರಿ 68 ಬಾರಿ ಮಾರಣಾಂತಿಕವಾಗಿ ಕೊಚ್ಚಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ವ್ಯಕ್ತಿ ಪವಾಡ ಸದೃಶ ಎಂಬಂತೆ ಬದುಕುಳಿದಿದ್ದಾನೆ. ಆರೊಪಿಗಳ ಪೈಕಿ ಓರ್ವನ ಸಹೋದರನ ಹತ್ಯೆಗೆ ಪ್ರತೀಕಾರವಾಗಿ ಅಟ್ಯಾಕ್​ ನಡೆದಿದೆ ಎನ್ನಲಾಗಿದ್ದು, ದಾಳಿ ಬಳಿಕ ಡ್ಯಾನ್ಸ್​​ ಮಾಡಿ ಪುಂಡರು ವಿಕೃತಿಯನ್ನೂ ಮೆರೆದಿದ್ದಾರೆ.

ಕೊಲೆ ಆರೋಪಿಯನ್ನು 68 ಬಾರಿ ಮಾರಕಾಸ್ತ್ರಗಳಿಂದ ಕೊಚ್ಚಿದ ಪುಂಡರು: ವ್ಯಕ್ತಿ ಬದುಕಿದ್ದೇ ಪವಾಡ!
ದುಷ್ಕರ್ಮಿಗಳಿಂದ ದಾಳಿ
Image Credit source: Tv9 Kannada
Edited By:

Updated on: Mar 11, 2026 | 1:01 PM

ಬೆಂಗಳೂರು, ಮಾರ್ಚ್​​ 11: ವ್ಯಕ್ತಿಯೋರ್ವನ ಮೇಲೆ ಹಾಡು ಹಗಲೇ ನಡು ರಸ್ತೆಯಲ್ಲಿ  ಯುವಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಆಘಾತಕಾರಿ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ. ಮಾರ್ಚ್​​ 9ರಂದೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರ ಭಯವೇ ಇಲ್ಲದಂತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಸಂತೋಷ್​​ ಎಂಬಾತನ ಮೇಲೆ ಡೆಡ್ಲಿ ಅಟ್ಯಾಕ್​​ ನಡೆದಿದ್ದು, ಒಂದೆರಡಲ್ಲ ಬರೋಬ್ಬರಿ 68 ಬಾರಿ ಮಾರಕಾಸ್ತ್ರಗಳಿಂದ ದಾಳಿ ನಡೆದಿದೆ. ದಾಳಿ ನಡೆಸಿರೋದು ಶರತ್​​ ಮತ್ತು ಗ್ಯಾಂಗ್​​ ಎಂಬುದು ಗೊತ್ತಾಗಿದ್ದು, ಅಟ್ಯಾಕ್​​ ಬಳಿಕ ಅರೋಪಿಗಳು ಡ್ಯಾನ್ಸ್​​ ಮಾಡಿ ವಿಕೃತಿ ಕೂಡ ಮೆರೆದಿದ್ದಾರೆ.

ಇನ್ನು ಹಲ್ಲೆಗೊಳಗಾದ ಸಂತೋಷ್​​​ ಮೇಲೆ ಕೊಲೆ ಆರೋಪವಿತ್ತು. ಕಾರು ಓಡಿಸುವ ವಿಚಾರಕ್ಕೆ ಸ್ನೇಹಿತ ಮೋಹನ್​​ ಎಂಬಾತನ ಜೊತೆಗೆ ಸಂತೋಷ್​​ ಬೆಂಗಳೂರಿನಲ್ಲಿ ಗಲಾಟೆ ಮಾಡಿಕೊಂಡಿದ್ದ. ಬಳಿಕ ಮಂಡ್ಯದಲ್ಲಿ ಕುಡಿದು ಕೊಳ್ಳೇಗಾಲಕ್ಕೆ ಹೋಗಿದ್ದ ವೇಳೆ ಮೋಹನ್​​ ಮೇಲೆ ದಾಳಿ ಮಾಡಿದ್ದ ಸಂತೋಷ್​​ ಆತನನ್ನು ಕೊಲೆ ಮಾಡಿದ್ದ. 2024ರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೋಹನನ್ನು ಕಾರಿನಲ್ಲಿ ಕೂರಿಸಿ ಭಯಗೊಂಡ ಸಂತೋಷ್​​ ಪರಾರಿಯಾಗಿದ್ದ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ಈ ಬಗ್ಗೆ UDR ಆಗಿತ್ತು. ನಂತರ ತನಿಖೆ ವೇಳೆ ಇದು ಕೊಲೆ ಎಂದು ಗೊತ್ತಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ದ  ಸಂತೋಷ್ 4 ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ. ಹೀಗಾಗಿ ಹಳೇ ದ್ವೇಷದ ಹಿನ್ನೆಲೆ ಈತನಿಂದ ಕೊಲೆಯಾಗಿದ್ದ ಮೋಹನ್​​ನ​​ ಸಹೋದರ ಶರತ್ ತಂಡಕಟ್ಟಿಕೊಂಡು ಬಂದು ಸಂತೋಷ್​​ ಮೇಲೆ ಅಟ್ಯಾಕ್​​ ಮಾಡಿದ್ದಾನೆ ಎನ್ನಲಾಗಿದೆ.​​

ಇದನ್ನೂ ಓದಿ: ಮೆಸೇಜ್ ಮಾಡಿ ಲಾಡ್ಜ್​ಗೆ ಕರೀತಿದ್ಲು; ಸ್ನಾನಕ್ಕೆ ಕಳಿಸಿ ಹಣ ದೋಚುತ್ತಿದ್ಲು! ಹನಿಟ್ರ್ಯಾಪ್ ಮಾಡುತ್ತಿದ್ದ ಕತರ್ನಾಕ್ ಲೇಡಿ ಅರೆಸ್ಟ್

ಸಂತೋಷ್​​ ಬದುಕುಳಿದಿದ್ದೇ ಪವಾಡ

ಹಳೇ ದ್ವೇಷದ ಹಿನ್ನಲೆ ಶರತ್ ಆ್ಯಂಡ್​​ ಗ್ಯಾಂಗ್ ಸಂತೋಷ್​​ ಮೇಲೆ ಮನಸೋ ಇಚ್ಛೆ ದಾಳಿಮಾಡಿದೆ. ಬರೋಬ್ಬರಿ 68 ಬಾರಿ ಮಚ್ಚಿನಿಂದ ಅಟ್ಯಾಕ್ ಮಾಡಿ, ಅಟ್ಟಹಾಸ ಮೆರೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ಸಂತೋಷ್​​ ಬದುಕಿರೋದು ಪವಾಡ ಎಂಬಂತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:59 pm, Wed, 11 March 26

Shivaprasad B
Follow Us