Bengaluru Kambala: ಬೆಂಗಳೂರು ಕಂಬಳದಲ್ಲಿ ಮೆಡಲ್ ಗೆದ್ದ ಕಾಂತಾರ ಚಿತ್ರದಲ್ಲಿ ರಿಷಾಬ್ ಶೆಟ್ಟಿ ಓಡಿಸಿದ್ದ ಕೋಣಗಳು

| Updated By: Rakesh Nayak Manchi

Updated on: Nov 26, 2023 | 2:42 PM

ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿನಡೆಯುತ್ತಿರುವ ಕಂಬಳ ಕ್ರೀಡೆಯಲ್ಲಿ ಒಂದಷ್ಟು ಕೋಣಗಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ಬಂದು ತಲುಪಿವೆ. ಅದರಂತೆ, ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಓಡಿಸಿದ್ದ ಅಪ್ಪು-ಕಿಟ್ಟು ಎಂಬ ಕೋಣಗಳು ಕನೆಹಲಗೆ ವಿಭಾಗದಲ್ಲಿ ಪದಕ ಗೆದ್ದುಕೊಂಡಿದೆ.

ಬೆಂಗಳೂರು, ನ.26: ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿನಡೆಯುತ್ತಿರುವ ಬೆಂಗಳೂರು ಕಂಬಳ (Bengaluru Kambala) ಕ್ರೀಡೆಯಲ್ಲಿ ಒಂದಷ್ಟು ಕೋಣಗಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ಬಂದು ತಲುಪಿವೆ. ಅದರಂತೆ, ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ (Rishab Shetty) ಓಡಿಸಿದ್ದ ಅಪ್ಪು-ಕಿಟ್ಟು ಎಂಬ ಕೋಣಗಳು ಕನೆಹಲಗೆ ವಿಭಾಗದಲ್ಲಿ ಪದಕ ಗೆದ್ದುಕೊಂಡಿದೆ.

ಪದಕ ಗೆದ್ದ ಕೋಣಗಳ‌ ಮಾಲೀಕ ಪರಮೇಶ್ವರ ಭಟ್ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ತುಂಬ ಖುಷಿಯಾಗುತ್ತಿದೆ. ಈ ಕಿಟ್ಟು – ಅಪ್ಪು ಕೋಣಗಳಿಂದ ಜನರು ನನ್ನನ್ನ ಗುರುತಿಸುತ್ತಿದ್ದಾರೆ. ಇವತ್ತು ಬೆಂಗಳೂರಿನಲ್ಲಿ ನಾವು ಪದಕ ಗೆದ್ದಿರುವ ಬಗ್ಗೆ ಖುಷಿ ಇದೆ. ಆರೂವರೆ ಅಡಿ ನೀರು ಚಿಮ್ಮಿಸಿದೆ. ಈ ಕಾರಣಕ್ಕೆ ನಮ್ಮ ಕೋಣಗಳು ಪದಕ ಗೆದ್ದಿದ್ದೇವೆ. ಮತ್ತೊಮ್ಮೆ ಸಂಪ್ರಾದಾಯಕವಾಗಿ ಓಡಿಸಲಿದ್ದಾರೆ ಎಂದರು.

ಕ್ರಿಡಾಪಟು ರಾಘವೆಂದ್ರ ಪೂಜಾರಿ ಮಾತನಾಡಿದ, ಇಷ್ಟು ದೊಡ್ಡ ಮಟ್ಟದ ಕಂಬಳದಲ್ಲಿ ನಾವು ಭಾಗವಹಿಸಿ ಪದಕ ಗೆದ್ದಿದ್ದೇವೆ. ನಮ್ಮ ಕಿಟ್ಟು – ಅಪ್ಪು ಎದುರಾಳಿ ಕೋಣಗಳಿಗೆ ಓಡುವುದರಲ್ಲಿ ಫೈಟ್ ಕೊಡುತ್ತವೆ. ಇದರಿಂದಲೇ ನಾವು ಗೆದ್ದಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bengaluru Kambala: ಬೆಂಗಳೂರು ಕಂಬಳದಲ್ಲಿ ಇಂದು ಕರಾವಳಿ ಶೈಲಿಯ ಊಟದ ವ್ಯವಸ್ಥೆ, ಏನೆಲ್ಲ ಇದೆ ಗೊತ್ತಾ?

ಶಿವ (ರಿಷಬ್ ಶೆಟ್ಟಿ) ಅಪ್ಪು ಮತ್ತು ಕಿಟ್ಟು ಎಂಬ ಕೋಣಗಳನ್ನು ಓಡಿಸಿ ಪದಕ ಗೆಲ್ಲುತ್ತಾರೆ. ಇದನ್ನು ಕಾಂತಾರ ಸಿನಿಮಾದಲ್ಲಿ ನೀವೆಲ್ಲರೂ ನೋಡಿರುತ್ತೀರಿ. ಆದರೆ, ಇಂದು ನಡೆದ ಬೆಂಗಳೂರು ಕಂಬಳದಲ್ಲಿ ಇದೇ ಕೋಣಗಳು ನಿಜವಾಗಿಯೂ ಮೊದಲ ಸ್ಥಾನವನ್ನು ಗೆದ್ದುಕೊಂಡಿದೆ.

ಉಡುಪಿ ಜಿಲ್ಲೆಯ ಬೈಂದೂರಿನ ಪರಮೇಶ್ವರ್ ಭಟ್ ಅವರ ಅಪ್ಪು ಮತ್ತು ಕಿಟ್ಟು ಕೋಣಗಳು ಬೆಂಗಳೂರು ಕಂಬಳದಲ್ಲಿ ಭಾಗಿಯಾಗಿದ್ದವು. ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಈ ಕೋಣಗಳನ್ನು ನೋಡಿ ನಗರವಾಸಿಗಳು ಸಂತಸಪಟ್ಟರು.

ಅಪ್ಪು-ಕಿಟ್ಟು ಜೊತೆ ಸೆಲ್ಫಿ

ಅಪ್ಪು-ಕಿಟ್ಟು ಪದಕ ಗೆಲ್ಲುತ್ತಿದ್ದಂತೆ ಅವುಗಳಿಗಿದ್ದ ಡಿಮಾಂಡ್ ಕೂಡ ಹೆಚ್ಚಾಗತೊಡಗಿದೆ. ಕಾಂತಾರ ಸಿನಿಮಾ ಕೋಣಗಳ‌ ಜೊತೆ ಫೋಟೋ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಮಂಗಳೂರು ಸೇರಿದಂತೆ ಬೆಂಗಳೂರಿಗರು ಬಂದು ಪೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ, ಈ ಕೋಣಗಳು ಪದಕ ಗೆದ್ದ ಬಗ್ಗೆ ಬೊಳಾಂಪಳ್ಳಿ ಜನರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಬೊಳಾಂಪಳ್ಳಿ ಹೆಸರು ಇವತ್ತು ದೊಡ್ಡ ಮಟ್ಟದಲ್ಲಿ ಬೆಳೆದಿದೆ ಅಂತ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:26 pm, Sun, 26 November 23