AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Kambala: ರೋಮಾಂಚಕ ಕ್ರೀಡೆಗೆ ಆಸ್ಟ್ರೇಲಿಯನ್ನರೂ ಫಿದಾ, ಹಿಂದೆಂದೂ ಇಂಥದನ್ನು ನೋಡಿಲ್ಲವೆಂದ ಕಾಂಗರೂಗಳು!

Bengaluru Kambala: ರೋಮಾಂಚಕ ಕ್ರೀಡೆಗೆ ಆಸ್ಟ್ರೇಲಿಯನ್ನರೂ ಫಿದಾ, ಹಿಂದೆಂದೂ ಇಂಥದನ್ನು ನೋಡಿಲ್ಲವೆಂದ ಕಾಂಗರೂಗಳು!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 26, 2023 | 4:06 PM

ಇಲ್ಲಿರುವ ವಿದೇಶಿಯರಲ್ಲಿ ಹೆಚ್ಚಿನವರು ಆಸ್ಟ್ರೇಲಿಯನ್ನರು ಅಥವಾ ಎಲ್ಲರೂ ಕಾಂಗರೂಗಳ ನಾಡಿನಿಂದ ಬಂದವರು. ಆಯೋಜಕರು ಅವರಿಗಾಗಿ ವಿಶೇಷ ಆಸನಗಳ ವ್ಯವಸ್ಥೆ ಮಾಡಿರುವುದು ಅಭಿನಂದನೀಯ. ಅತಿಥಿ ದೇವೋಭವ ಅಂತ ಹೇಳೋದು ನಮ್ಮ ಸಂಸ್ಕೃತಿ

ಬೆಂಗಳೂರು: ಕಂಬಳ ನಮ್ಮ ಕಂಬಳ ಕೇವಲ  ನಮ್ಮ ರಾಜ್ಯದ ಜನರ ಮನಸೂರೆಗೊಂಡಿಲ್ಲ, ವಿದೇಶಿಯರು ಸಹ ಕರಾವಳಿಯ ರೋಮಾಂಚಕ ಕ್ರೀಡೆಗೆ ಮನಸೋತಿದ್ದಾರೆ. ನಗರದಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡಿರುವ ಬೆಂಗಳೂರು ಕಂಬಳದ (Bengaluru Kambala) ಅಂತಿಮ ದಿನವಾಗಿರುವ ಇಂದು ಲಕ್ಷಾಂತರ ಜನ ಅರಮನೆಗೆ ಬಂದು ಇದುವರೆಗೆ ಕೇವಲ ಕರಾವಳಿ ಪ್ರದೇಶಕ್ಕೆ (coastal region) ಸೀಮಿತವಾಗಿದ್ದ ಜನಪ್ರಿಯ ಕ್ರೀಡೆಯನ್ನು ಮನಸಾರೆ ಆನಂದಿಸುತ್ತಿದ್ದಾರೆ. ಇಲ್ಲಿರುವ ವಿದೇಶಿಯರಲ್ಲಿ ಹೆಚ್ಚಿನವರು ಆಸ್ಟ್ರೇಲಿಯನ್ನರು (Australians) ಅಥವಾ ಎಲ್ಲರೂ ಕಾಂಗರೂಗಳ ನಾಡಿನಿಂದ ಬಂದವರು. ಆಯೋಜಕರು ಅವರಿಗಾಗಿ ವಿಶೇಷ ಆಸನಗಳ ವ್ಯವಸ್ಥೆ ಮಾಡಿರುವುದು ಅಭಿನಂದನೀಯ. ಅತಿಥಿ ದೇವೋಭವ ಅಂತ ಹೇಳೋದು ನಮ್ಮ ಸಂಸ್ಕೃತಿ ಮಾರಾಯ್ರೇ. ಟಿವಿ9 ಕನ್ನಡ ವಾಹಿನಿಯ ವರದಿಗಾರ್ತಿ ಆಸ್ಸೀಗಳನ್ನು ಮಾತಾಡಿಸಿದ್ದಾರೆ. ತಾವು ಕಂಬಳ ಕ್ರೀಡೆಯನ್ನು ತುಂಬಾ ಎಂಜಾಯ್ ಮಾಡುತ್ತಿರುವುದಾಗಿ ಹೇಳುವ ಅವರು, ಇಂಥ ವಿಸ್ಮಯಕಾರಿ, ರೋಮಾಂಚಕ ಕ್ರೀಡೆಯನ್ನು ಮೊದಲ್ಯಾವತ್ತೂ ನೋಡಿಲ್ಲ ಎನ್ನುತ್ತಾರೆ. ಅವರಿಗೆಲ್ಲ, ಕರಾವಳಿ ಊಟ ತಿಂಡಿಗಳು ಸಹ ಬಹಳ ಇಷ್ಟವಾಗಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ