ಸಂವಿಧಾನ ಸಮರ್ಥನಾ ಕಾರ್ಯಕ್ರಮದಲ್ಲಿ ವಿಜಯೇಂದ್ರ ಪಕ್ಕ ಕೂತಿದ್ದ ಸಿಟಿ ರವಿ ಸಹಜವಾಗಿದ್ದರೇ?
ವೇದಿಕೆಯ ಮೇಲೆ ಅವರೊಂದಿಗೆ ರವಿ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಗೋವಿಂದ ಕಾರಜೋಳ, ಚಲವಾದಿ ನಾರಾಯಣಸ್ವಾಮಿ ಮೊದಲಾದವರನ್ನು ನೋಡಬಹುದು. ವಿಜಯೇಂದ್ರ ಮತ್ತು ಅವರ ಎಡಪಕ್ಕ ಕೂತಿರುವ ರವಿಯವರ ಮುಖಭಾವಗಳನ್ನು ಗಮನಿಸಿ. ಅವು ಸಹಜ ಅನಿಸುವುದಿಲ್ಲ, ಇಬ್ಬರ ಮುಖದಲ್ಲೂ ಬಿಗುಮಾನವನ್ನು ಗಮನಿಸಬಹುದು.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿವೈ ವಿಜಯೇಂದ್ರರನ್ನು (BY Vijayendra) ಪಕ್ಷದ ವರಿಷ್ಠರು ಆಯ್ಕೆ ಮಾಡಿದಾಗ ಎಲ್ಲರಿಗಿಂತ ಮೊದಲು ಅಸಮಾಧಾನ ಹೊರಹಾಕಿದವರು ಪ್ರಾಯಶಃ ಮಾಜಿ ಸಚಿವ ಸಿಟಿ ರವಿ (CT Ravi) ಆಗಿರಬಹುದು. ಆಗ ಅವರು ಮ್ಲಾನವದನರಾಗಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನು ಕನ್ನಡಿಗರು ನೋಡಿದ್ದಾರೆ ಮತ್ತು ಕೇಳಿಸಿಕೊಂಡಿದ್ದಾರೆ. ಆಫ್ ಕೋರ್ಸ್, ಅದಾದ ಮೇಲೆ ಅವರು ವಿಜಯೇಂದ್ರ ಮನೆಗೆ ತೆರಳಿ ಅಭಿನಂದಿಸಿದ್ದು ಬೇರೆ ವಿಷಯ. ಓಕೆ ವಿಷಯಕ್ಕೆ ಬರೋಣ, ಇವತ್ತು ನಗರದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ಸಂವಿಧಾನ ಸಮರ್ಥನಾ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಮುಖ್ಯ ಅತಿಥಿಗಳಾಗಿ ವಿಜಯೇಂದ್ರ ಆಗಮಿಸಿದ್ದರು. ವೇದಿಕೆಯ ಮೇಲೆ ಅವರೊಂದಿಗೆ ರವಿ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಗೋವಿಂದ ಕಾರಜೋಳ (Govind Karjola), ಚಲವಾದಿ ನಾರಾಯಣಸ್ವಾಮಿ ಮೊದಲಾದವರನ್ನು ನೋಡಬಹುದು. ವಿಜಯೇಂದ್ರ ಮತ್ತು ಅವರ ಎಡಪಕ್ಕ ಕೂತಿರುವ ರವಿಯವರ ಮುಖಭಾವಗಳನ್ನು ಗಮನಿಸಿ. ಅವು ಸಹಜ ಅನಿಸುವುದಿಲ್ಲ, ಇಬ್ಬರ ಮುಖದಲ್ಲೂ ಬಿಗುಮಾನವನ್ನು ಗಮನಿಸಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ