IND vs AUS ಎರಡನೇ ಟಿ20 ಪಂದ್ಯ ನಡೆಯುತ್ತಾ?: ಕೆರೆಯಂತಾಗಿದ್ದ ಗ್ರೀನ್ ಫೀಲ್ಡ್ ಸ್ಟೇಡಿಯಂ ಈಗ ಹೇಗಿದೆ ನೋಡಿ
Thiruvananthapuram Weather: ಭಾರತ-ಆಸ್ಟ್ರೇಲಿಯಾ ಎರಡನೇ ಟಿ20 ಪಂದ್ಯ ಪಂದ್ಯಕ್ಕೆ ಹವಾಮಾನ ಅಡ್ಡಿಯಾಗುವ ಸಾಧ್ಯತೆ ಇದೆ. ಪಂದ್ಯಕ್ಕೆ ಒಂದು ದಿನ ಮೊದಲು ಶನಿವಾರ ಭಾರೀ ಮಳೆಯಾಗಿತ್ತು. ಮೈದಾನದಲ್ಲಿ ನೀರು ತುಂಬಿ ಕೆರೆಯಂತಾಗಿತ್ತು.
ವಿಶಾಖಪಟ್ಟಣದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ (India vs Australia) ನಡುವಿನ ಮೊದಲ ಟಿ20 ಪಂದ್ಯದಲ್ಲಿ ರನ್‌ಗಳ ಮಳೆ ಸುರಿಯಿತು. ಆದರೆ, ಇದೀಗ ಎರಡನೇ ಟಿ20 ಪಂದ್ಯದಲ್ಲಿ ಮಳೆಯದ್ದೇ ಆಟ ನಡೆಯುವ ಸಾಧ್ಯತೆ ಇದೆ. ಇಂದು ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ದ್ವಿತೀಯ ಪಂದ್ಯ ಆಯೋಜಿಸಲಾಗಿದೆ. ಈ ಪಂದ್ಯಕ್ಕೆ ಹವಾಮಾನ ಅಡ್ಡಿಯಾಗುವ ಸಾಧ್ಯತೆ ಇದೆ. ಪಂದ್ಯಕ್ಕೆ ಒಂದು ದಿನ ಮೊದಲು ಶನಿವಾರ ಭಾರೀ ಮಳೆಯಾಗಿತ್ತು. ಮೈದಾನದಲ್ಲಿ ನೀರು ತುಂಬಿ ಕೆರೆಯಂತಾಗಿತ್ತು. ಆಸ್ಟ್ರೇಲಿಯ ತಂಡದ ಅಭ್ಯಾಸ ಸೆಷನ್ ಮಧ್ಯದಲ್ಲಿಯೇ ನಿಲ್ಲಿಸಬೇಕಾಯಿತು. ಇಂದು ಕೂಡ ಶೇ. 25 ರಷ್ಟು ಮಳೆ ಆಗಲಿದೆ. ಆದರೆ, ವೆಬ್‌ಸೈಟ್ ಅಕ್ಯುವೆದರ್ ಪ್ರಕಾರ, ಭಾನುವಾರ ಮಳೆಯು ದಿನದ ಸುಮಾರು 2 ಗಂಟೆ ಬರಬಹುದು. ಇದು ಮೈದಾನದ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಮತ್ತು ಸಂಜೆ 7 ಗಂಟೆಗೆ ಪ್ರಾರಂಭವಾಗುವ ಪಂದ್ಯಕ್ಕೆ ಮೊದಲು ಸಂಪೂರ್ಣವಾಗಿ ಸಿದ್ಧವಾಗಲಿದೆಯೇ ಎಂಬುದು ನೋಡಬೇಕು. ಸ್ಟೇಡಿಯಂನ ಸದ್ಯದ ವಿಡಿಯೋ ಇಲ್ಲಿದೆ ನೋಡಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ