ಬೆಂಗಳೂರು, ಡಿ.11: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಊಟ ಪಾರ್ಸಲ್ ತೆಗೆದುಕೊಳ್ಳಲು ಹೊಟೇಲ್ಗೆ ಹೋಗಿದ್ದ ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಘಟನೆ ಸಂಬಂಧ ಎಕ್ಸ್(ಟ್ವಿಟರ್) ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರನ್ನು (BJP Worker) ಗುರಿಯಾಗಿಸಿಕೊಂಡು ಹಲ್ಲೆ ಮಾಡಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಅಧಿಕಾರಸ್ಥ ಕಾಂಗ್ರೆಸ್ಸಿಗರ ಅಕ್ರಮಗಳ ವಿರುದ್ಧ ದನಿ ಎತ್ತುವ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಲ್ಲೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಕಲಬುರ್ಗಿ, ಬೆಳಗಾವಿಯ ಪ್ರಕರಣಗಳ ಬೆನ್ನಲೇ ಭದ್ರಾವತಿಯ ನಮ್ಮ ಬಿಜೆಪಿ ಮುಖಂಡ ಗೋಕುಲ್ ಕೃಷ್ಣನ್ ಅವರ ಮೇಲೆ ನಡೆದಿರುವ ಗೂಂಡಾಗಳ ಹಲ್ಲೆ ಆತಂಕಕಾರಿ ಘಟನೆಯಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಭದ್ರಾವತಿ ಶಾಸಕರ ವಿರುದ್ಧ ಪೋಸ್ಟ್ ಹಾಕಿದ್ದಕ್ಕೆ ಹಲ್ಲೆ ಆರೋಪ
ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಸ್ಥಳೀಯ ಶಾಸಕರ ಕೈವಾಡ ಇರುವ ಬಗ್ಗೆ ಜಾಲತಾಣದಲ್ಲಿ ಗೋಕುಲ್ ಕೃಷ್ಣನ್ ಪ್ರಶ್ನಿಸಿದ್ದೇ, ಈ ದಾಳಿ ನಡೆಯಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿರುವಂತಿದೆ. ತಕ್ಷಣವೇ ಭದ್ರಾತಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಕಾರ್ಯಕರ್ತನಿಗೆ ರಕ್ಷಣೆ ನೀಡಿ, ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಒತ್ತಾಯಿಸಿದ್ದಾರೆ.
ಅಧಿಕಾರಸ್ಥ ಕಾಂಗ್ರೆಸ್ಸಿಗರ ಅಕ್ರಮಗಳ ವಿರುದ್ಧ ದನಿ ಎತ್ತುವ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಲ್ಲೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಕಲಬುರ್ಗಿ, ಬೆಳಗಾವಿಯ ಪ್ರಕರಣಗಳ ಬೆನ್ನಲೇ ಭದ್ರಾವತಿಯ ನಮ್ಮ ಬಿಜೆಪಿ ಮುಖಂಡ ಗೋಕುಲ್ ಕೃಷ್ಣನ್ ಅವರ ಮೇಲೆ ನಡೆದಿರುವ ಗೂಂಡಾಗಳ ಹಲ್ಲೆ ಆತಂಕಕಾರಿ ಘಟನೆಯಾಗಿದೆ.… pic.twitter.com/BpawFvZ7Jj
— Vijayendra Yediyurappa (@BYVijayendra) December 11, 2023
ಇನ್ನು ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಆಗ್ತಿದ್ದು ರಕ್ಷಣೆ ಕೊಡಲು ಸರ್ಕಾರ ವಿಫಲವಾಗಿದೆ ಎಂಬ ವಿಜಯೇಂದ್ರ ಹೇಳಿಕೆಗೆ ಬೆಳಗಾವಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಯಾರೇ ಕಾನೂನು ವಿರುದ್ಧ ಕೆಲಸ ಮಾಡೋರು ಯಾರೇ ಆಗಲಿ, ಯಾವುದೇ ಪಕ್ಷ, ಸಂಘಟನೆಗೆ ಸೇರಿರಲಿ ಅವರ ಮೇಲೆ ಕ್ರಮ ಜರುಗುತ್ತೆ. ಅವರ ಕಾರ್ಯಕರ್ತರಿಗೆ ಕಾನೂನು ವಿರುದ್ಧ ಕೆಲಸ ಮಾಡಬೇಡಿ ಅಂತಾ ಹೇಳಲಿ ಆಗ ಅದು ನಿಲ್ಲುತ್ತೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ