ಬೆಂಗಳೂರು: ಕಟ್ಟಡ ನಿರ್ಮಿಸದೆ (construction) 97 ಕೋಟಿ ರೂ. ಹಗರಣ (scam) ಮಾಡಿದ್ದಾರೆಂದು ಆರೋಪಿಸಿ ಮಾಜಿ ಬಿಬಿಎಂಪಿ ಸದಸ್ಯ, ಬಿಬಿಎಂಪಿ ಅಧಿಕಾರಿ ಹಾಗೂ ಕಾಂಟ್ರಾಕ್ಟ್ರ್ ಭೈರತಿ ಬಸವರಾಜ್ (Byrathi Basavaraj) ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗಿದೆ. ಕಟ್ಟಡಗಳನ್ನೇ ನಿರ್ಮಿಸದೆ ಹಣ ಮಂಜೂರು ಮಾಡಿಕೊಂಡಿರುವ ಬಗೆ ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂರಿಂದ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕೆ.ಆರ್.ಪುರಂನ ರಾಜೀವ್ಗಾಂಧಿನಗರದಲ್ಲಿರುವ ದೇವಸಂದ್ರ ವಾರ್ಡ್ನಲ್ಲಿ 8 ಸರ್ಕಾರಿ ಕಟ್ಟಡ ನಿರ್ಮಿಸಿರುವುದಾಗಿ ಬಿಲ್ ಸಿದ್ಧಪಡಿಸಲಾಗಿದೆ. ಆದರೆ ಮಹಾದೇವಪುರ ಕ್ಷೇತ್ರದ ಬಿ. ನಾರಾಯಣಪುರದಲ್ಲಿ ಇರುವ ಕಟ್ಟಡದ ಫೋಟೋ ನೀಡಿದ್ದಾರೆ. ಕೇವಲ ದಾಖಲೆಗಳಲ್ಲಿ ಮಾತ್ರ ಕಟ್ಟಡ ನಿರ್ಮಾಣ ಮಾಡಲಾಗಿದೆ. ಶೌಚಾಲಯ ನಿರ್ಮಾಣ ಮಾಡದೆ ಫೋಟೋ ನೀಡಿ ಬಿಲ್ ಪಡೆದಿದ್ದಾರೆ. ಕಟ್ಟಡ ನಿರ್ಮಿಸದೆ 8 ಫೈಲ್ ನೀಡಿ ಬಿಲ್ ಪಡೆದ ಬಗ್ಗೆ ದೂರು ಸಲ್ಲಿಕೆ ಮಾಡಲಾಗಿದ್ದು, ಹಗರಣದ ಬಗ್ಗೆ ತನಿಖೆ ನಡೆಸುವಂತೆ ಅಬ್ರಹಾಂ ಆಗ್ರಹಿಸಿದ್ದಾರೆ.
ಬೆಂಗಳೂರು: ನಗರದ ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 10 ಕೆಜಿ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ. ಚುನಾವಣೆ ಸಮೀಪವಾಗ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದು ನಗರದಾದ್ಯಂತ ಬ್ಯಾರಿಕೇಡ್ ಹಾಕಿ ವಾಹನಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೈಕ್, ಕಾರು, ಆಟೋ, ಲಾರಿ ಸೇರಿದಂತೆ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ನಗರದಿಂದ ಹೊರ ಹೋಗುವ, ಒಳ ಬರುವ ಪ್ರಮುಖ ರಸ್ತೆಗಳಲ್ಲಿ, ಜಂಕ್ಷನ್, ಸರ್ಕಲ್ ಗಳಲ್ಲಿ ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕಾಂಡೋಮ್ ವಿತರಣೆಯಲ್ಲಿ 463 ಕೋಟಿ ಹಗರಣ: ಎನ್ ಆರ್ ರಮೇಶ್ ಆರೋಪ
ಚುನಾವಣೆ ಹಿನ್ನೆಲೆ ಅಕ್ರಮವಾಗಿ ಹಣ, ಮದ್ಯ, ಗಿಫ್ಟ್ ಗಳು, ಸೇರಿದಂತೆ ಅನುಮಾನಾಸ್ಪದ ವಸ್ತುಗಳ ಬಗ್ಗೆ ನಿಗಾ ಇಡಲಾಗುತ್ತಿದೆ. ಎರಡು ಲಕ್ಷಕ್ಕೂ ಅಧಿಕ ನಗದು ಸಾಗಾಟ ಮಾಡುವಂತಿಲ್ಲ. ಎರಡು ಲೀಟರ್ ಗೂ ಹೆಚ್ಚು ಮದ್ಯ ಸಾಗಾಟ ಮಾಡುವಂತಿಲ್ಲ. ಒಂದು ವೇಳೆ ದೊಡ್ಡ ಮೊತ್ತದ ಹಣ, ವಸ್ತುಗಳು ಸಾಗಾಟ ಮಾಡಿದ್ರೆ ಸೂಕ್ತ ದಾಖಲೆ ನೀಡಬೇಕು. ಸದ್ಯ ನಗರದೆಲ್ಲೆಡೆ ಪೊಲೀಸರ ತಪಾಸಣೆ ಮುಂದುವರೆದಿದೆ.
ಕ್ರೀಡಾ ಸಚಿವ, ಕೆ.ಆರ್.ಪೇಟೆ ಬಿಜೆಪಿ ಶಾಸಕ ಕೆ.ಸಿ.ನಾರಾಯಣಗೌಡ ಫೋಟೋ ಇರುವ 450 ಶಾಲಾ ಬ್ಯಾಗ್ಗಳನ್ನು ಜಪ್ತಿ ಮಾಡಲಾಗಿದೆ. ನಗರದ ಚಾಮರಾಜಪೇಟೆಯ 3ನೇ ಕ್ರಾಸ್‌ನ ಗೋದಾಮಿನಲ್ಲಿ ಕೆ.ಆರ್.ಪೇಟೆ ಮತದಾರರಿಗೆ ಹಂಚಲು ಬ್ಯಾಗ್ ಸಂಗ್ರಹಿಸಿದ್ದ ಆರೋಪ ಕೇಳಿಬಂದಿದ್ದು, 450 ಶಾಲಾ ಬ್ಯಾಗ್ಗಳನ್ನು GST ಅಧಿಕಾರಿಗಳು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಅರ್ಕಾವತಿ ಹಗರಣ: ನಿಜವಾದ ಖಜಾನೆ ಕಾವಲುಗಾರರಾಗಿದ್ರೆ ಏಕೆ ಕ್ರಮ ಕೈಗೊಳ್ಳಲಿಲ್ಲ, ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ
ಕೆಆರ್ಎಸ್ ಪಕ್ಷದಿಂದ ಪೊಲೀಸರಿಗೆ ನೀಡಲಾದ ಮಾಹಿತಿ ಮೇರೆಗೆ ಪರಿಶೀಲನೆ ಮಾಡಲಾಗಿದೆ. ಜೊತೆಗೆ ಫೇಸ್ ಬುಕ್ನಲ್ಲೂ ಸಹ ಕೆಆರ್ಎಸ್ ಪಕ್ಷ ಈ ಬಗ್ಗೆ ಲೈವ್ ಮಾಡಿದೆ. 10 ಸಾವಿರದಷ್ಟು ಶಾಲೆಯ ಬ್ಯಾಗ್ಗಳು ಇರಿಸಲಾಗಿದೆ ಎಂಬ ಆರೋಪ ಮಾಡಲಾಗಿದೆ.
ಕೋಲಾರ: ರಂಜಾನ್ ಹಬ್ಬದ ಪ್ರಯುಕ್ತ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಪುಡ್ ಕಿಟ್ಗಳನ್ನು ನಗರ ಠಾಣಾ ಪೊಲೀಸರು ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಸುಲ್ತಾನ್ ತಿಪ್ಪಸಂದ್ರ ಬಳಿ ಇನಾಯತ್ ಎಂಬುವರಿಗೆ ಸೇರಿದ 1200 ಪುಡ್ ಕಿಟ್ಗಳನ್ನು ಜಪ್ತಿ ಮಾಡಲಾಗಿದೆ. ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದು, ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:46 pm, Mon, 27 March 23