ಬೆಂಗಳೂರು, ಅ.08: ನಗರದ ಪೀಣ್ಯ ಫ್ಲೈ ಓವರ್ (Peenya Flyover) 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ. ಈ ಮೇಲ್ಸೇತುವೆಯಲ್ಲಿ ಕಾಣಿಸಿಕೊಂಡ ದೋಷದಿಂದ ಅದೆಷ್ಟೋ ದಿನಗಳಿಂದ ಭಾರೀ ವಾಹನಗಳ ಸಂಚಾರ ಸ್ತಬ್ದವಾಗಿಬಿಟ್ಟಿತ್ತು. ಆಲ್ಲದೇ ಫ್ಲೇ ಓವರ್ ಸಮಸ್ಯೆಯಿಂದ ಟ್ರಾಫಿಕ್ ಕಿರಿಕಿರಿ ಕೂಡ ಜನರನ್ನ ಬಾಧಿಸಿತ್ತು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಿಂದ ಮೇಲ್ಸೇತುವೆ ಸದೃಢತೆಗೆ ಕೇಬಲ್‌ಗಳ ಅಳವಡಿಕೆಗೆ ಐಐಎಸ್ಸಿ (IISC) ತಜ್ಞರು ಸೂಚಿಸಿದ್ರು. ಆದರ ಮೇರಿಗೆ ಮಧ್ಯಪ್ರದೇಶದ ಭೂಪಾಲ್‌ನಿಂದ 25 ಟನ್ ಕೇಬಲ್ ತರಿಸಿ ಕೆಮಿಕಲ್ ಅನಾಲಿಸಿಸ್ ಮಾಡಿ ಸಧ್ಯ 120 ಕಂಬಗಳಿಗೆ ಅರ್ಧದಷ್ಡು ಕೇಬಲ್ ಅಳವಡಿಕೆ ಮಾಡಲಾಗಿದೆ.
ಹೌದು, ಪೀಣ್ಯ ಫ್ಲೈಓವರ್ ನಲ್ಲಿ ಸಧ್ಯದಲ್ಲೆ ಲಾರಿಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಸಧ್ಯ ಫ್ಲೈಓವರ್ನ ಎಲ್ಲಾ ಪಿಲ್ಲರ್ಗಳಿಗೆ ಈಗಾಗಲೇ 240 ಕೇಬಲ್ಗಳನ್ನ ಅಳವಡಿಕೆ ಮಾಡುತ್ತಿದ್ದು, ಎರಡು ವರ್ಷಗಳಿಂದ ಪರದಾಡುತ್ತಿದ್ದ ವಾಹನ ಸವಾರರಿಗೆ ಇನ್ಮುಂದೆ ಚಾಲನೆ ಸರಾಗವಾಗಲಿದೆ. ಸಧ್ಯ ಪಿಲ್ಲರ್ ಅಳವಡಿಕೆಯ ಕೆಲಸ ಅರ್ಧದಷ್ಡು ಮುಗಿದಿದ್ದು, ಐಐಎಸ್ಸಿ ತಜ್ಞರ ಮಾಹಿತಿಯ ಆಧಾರದ ಮೇರಿಗೆ ಕೇಬಲ್ ಅಳವಡಿಸುತ್ತಿದ್ದು, ಒಟ್ಟು 120 ಪಿಲ್ಲರ್ಗಳಿಗೆ ಒಟ್ಟು 1200 ಕೇಬಲ್ಗಳನ್ನ ಅಳವಡಿಕೆ ಮಾಡಲಿದೆ. ಮೊದಲ ಹಂತದಲ್ಲಿ ಒಂದೊಂದು ಪಿಲ್ಲರ್ಗೆ ಎರೆಡೆರೆಡು ಅಳವಡಿಕೆ ಮಾಡಿ ನಂತರ 8 ಕೇಬಲ್ಗಳನ್ನ ನಿಧಾನವಾಗಿ ಅಳವಡಿಕೆ ಮಾಡಲು ನಿರ್ಧರಿಸಿದ್ದು, ಮೊದಲ ಹಂತದ ಕೇಬಲ್ ಅಳವಡಿಕೆಯ ನಂತರ ಲಾರಿಗಳ ಓಡಾಟಕ್ಕೆ ಅವಕಾಶ ನೀಡಲಿದ್ದೇವೆ ಅಂತ ಐಐಎಸ್ಸಿ ತಜ್ಞರು ಹೇಳ್ತಿದ್ದಾರೆ.
ಇದನ್ನೂ ಓದಿ: ರೈಲ್ವೇ ಪ್ರಯಾಣಿಕರ ಗಮನಕ್ಕೆ, ಅ.11 ರಂದು ಬೆಂಗಳೂರಿನಿಂದ MEMU ರೈಲುಗಳ ಸಂಚಾರ ರದ್ದು
ಇನ್ನು, ಈ ಫ್ಲೈ ಓವರ್ನಲ್ಲಿ ಸದ್ಯ ಬೆಳಗ್ಗೆ 5 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಲಘುವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕೇಬಲ್ ಬದಲಾವಣೆ ಅಳವಡಿಕೆಯಾಗಿ ಎಲ್ಲಾ ಕೆಲಸಗಳು ಅಂದುಕೊಂಡ ಸಮಯದೊಳಗೆ ಮುಗಿದ್ರೆ ಇನ್ನೂ ಎರಡು ತಿಂಗಳಲ್ಲಿ ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ಸಿಗಲಿದೆ. ಸಧ್ಯ ಟ್ರಾಫಿಕ್ ಕಿರಿಕಿರಿ, ವಾಹನ ದಟ್ಟಣೆಯಿಂದ ಸುಸ್ತಾಗಿರುವ ಈ ಮಾರ್ಗದ ವಾಹನ ಸವಾರರು, ಫ್ಲೈಓವರ್ ಯಾವಾಗ ಸರಿಯಾಗುತ್ತೆ ಅಂತಾ ಕಾಯುತ್ತಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ