ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ ಕಾಲಿನ ಮೇಲೆ ಕಾರು ಹರಿದಿದ್ದು ಡಿಸಿಪಿ ಮೀನಾಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ನಗರದ ಗೊರಗುಂಟೆಪಾಳ್ಯ ಬಳಿ ನಡೆದಿದೆ. ಪ್ರತಿಭಟನಾ ನಿರತರನ್ನು ತಡೆಯುವ ವೇಳೆ ಘಟನೆ ನಡೆದಿದೆ. ಸದ್ಯ RMC ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಭಾರತ್ ಬಂದ್ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಹೀಗಾಗಿ ಪ್ರತಿಭಾಟನಾ ನಿರತರನ್ನ ತಡೆಯುವ ವೇಳೆ ಕಾರೊಂದು ರಸ್ತೆ ಬದಿ ನಿಂತಿದ್ದ ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾರ ಕಾಲ ಮೇಲೆ ಏರಿದೆ. ಇದರಿಂದ ತಕ್ಷಣ ಎಚ್ಚೆತ್ತ ಇತರೆ ಪೊಲೀಸ್ ಸಿಬ್ಬಂದಿ ಕಾರನ್ನು ನಿಲ್ಲಿಸಿ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾರ ಕಾಲ ಮೇಲೆ ಕಾರು ಏರಿದ ಪರಿಣಾಮ ಕೊಂಚ ನೋವಾಗಿದ್ದು ಸದ್ಯ ಯಾವುದೇ ಗಂಭೀರ ಗಾಯಗಳಾಗಿಲ್ಲ. ಸ್ಥಳದಲ್ಲಿನ ಗದ್ದಲದ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ.
ಇದನ್ನೂ ಓದಿ: ಬಂದ್ ಮಧ್ಯೆ ಸಿಎಂ ಬೊಮ್ಮಾಯಿ ಯಾವ ಕಾರ್ಯಕ್ರಮದಲ್ಲಿದ್ದಾರೆ? ಭಾರತ್ ಬಂದ್ ಬಗ್ಗೆ ಏನು ಹೇಳಿದರು?
Published On - 11:21 am, Mon, 27 September 21