ಬಂದ್ ಮಧ್ಯೆ ಸಿಎಂ ಬೊಮ್ಮಾಯಿ ಯಾವ ಕಾರ್ಯಕ್ರಮದಲ್ಲಿದ್ದಾರೆ? ಭಾರತ್ ಬಂದ್ ಬಗ್ಗೆ ಏನು ಹೇಳಿದರು?
ಹುಬ್ಬಳ್ಳಿಗೆ ಭೇಟಿ ನೀಡಿರುವ ಸಿಎಂ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಕೆಎಲ್ಇ ಟೆಕ್ ಪಾರ್ಕ್ನ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಸಿಎಂ ಬೊಮ್ಮಾಯಿಗೆ ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸಾಥ್ ನೀಡಿದ್ದಾರೆ.
ಹುಬ್ಬಳ್ಳಿ: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು (ಸೆ.27) ಭಾರತ್ ಬಂದ್ಗೆ (Bharat Bandh) ಕರೆಕೊಟ್ಟಿದ್ದಾರೆ. ಸದ್ಯ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಯುತ್ತಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಬಂದ್ಗೆ ಬೆಂಬಲ ಸಿಕ್ಕಿಲ್ಲ. ಈ ಬಗ್ಗೆ ಪ್ರತಿಕ್ರಿಯಿ ನೀಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಕೊವಿಡ್ನಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈಗಷ್ಟೇ ವ್ಯಾಪಾರ, ವ್ಯವಹಾರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಹೀಗಾಗಿ ಜನರಿಗೆ ತೊಂದರೆ ಮಾಡಬಾರದು ಅಂತ ಹೇಳಿದ್ದಾರೆ. ಕಾಂಗ್ರೆಸ್ ಗುಲಾಮಗಿರಿಯ ಪಕ್ಷ. ಹೀಗಾಗಿ ಅವರಿಗೆ ದೇಶಭಕ್ತಿಯಲ್ಲಿಯೂ ತಪ್ಪು ಕಾಣುತ್ತದೆ. ನಮ್ಮದು ದೇಶಭಕ್ತಿಯ ಪಕ್ಷ. ಸಿದ್ದರಾಮಯ್ಯ ಒಬ್ಬ ಮಾಜಿ ಮುಖ್ಯಮಂತ್ರಿ, ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ ಅಂತ ಹುಬ್ಬಳ್ಳಿಯಲ್ಲಿ ಸಿಎಂ ಅಭಿಪ್ರಾಯಪಟ್ಟರು.
ಹುಬ್ಬಳ್ಳಿಗೆ ಭೇಟಿ ನೀಡಿರುವ ಸಿಎಂ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಕೆಎಲ್ಇ ಟೆಕ್ ಪಾರ್ಕ್ನ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಸಿಎಂ ಬೊಮ್ಮಾಯಿಗೆ ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸಾಥ್ ನೀಡಿದ್ದಾರೆ. ಕೆಎಲ್ಇ ಕಾಲೇಜಿನಲ್ಲಿ ಬೊಮ್ಮಾಯಿ ಮತ್ತು ನಿರಾಣಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದರು. ತಾವು ಕಲಿತ ಕಾಲೇಜಿನ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದಾರೆ.
ಭಾರತ್ ಬಂದ್ಗೆ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ವಾಣಿಜ್ಯ ನಗರಿಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿವೆ. ನಗರ ಸಾರಿಗೆ, ಆಟೋ ಮತ್ತು ವಾಯುವ್ಯ ಸಾರಿಗೆ ಎಂದಿನಂತೆ ಸಂಚಾರ ನಡೆಸುತ್ತಿವೆ. ಹೋಟೆಲ್, ಶಾಲಾ- ಕಾಲೇಜು, ಮಾರುಕಟ್ಟೆ, ಸಗಟು ವಾಣಿಜ್ಯ ವಹಿವಾಟು ಎಲ್ಲವೂ ತೆರೆದಿವೆ. ಬಂದ್ ಪರವಾಗಿ ಸಾಂಕೇತಿಕವಾಗಿ ಕೆಲ ಸಂಘಟನೆಗಳಿಂದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಕಾಲೇಜು ದಿನಗಳನ್ನು ಸ್ಮರಿಸಿದ ಸಿಎಂ ಕೆಎಲ್‌ಇ ಅಮೃತ ಮಹೋತ್ಸವದಲ್ಲಿ ಭಾಷಣ ಮಾಡಿದ ಸಿಎಂ, ನನ್ನ ಸರಸ್ವತಿ ದೇಗುಲದಲ್ಲಿ ಮಾತಾಡಲು ಕಷ್ಟವಾಗ್ತಿದೆ. ಎದೆ ತುಂಬಿ ಬರುತ್ತಿದೆ. ಆದರೆ ಮಾತುಗಳೇ ಬರ್ತಿಲ್ಲ. ಪ್ರಯೋಗ ಮಾಡದೇ ಇರುವ ಲ್ಯಾಬ್‌ಗಳು, ಒಂದು ಪುಸ್ತಕವನ್ನೂ ತೆಗೆದುಕೊಳ್ಳದ ಗ್ರಂಥಾಲಯ, ಇವೆಲ್ಲವೂ ನನಗೆ ಬಹಳ ಕಾಡುತ್ತಿದೆ. ನನ್ನ ಹಾಜರಾತಿ ಹೆಚ್ಚಾಗಿ ಕ್ಯಾಂಟೀನ್‌ನಲ್ಲೇ ಇರುತ್ತಿತ್ತು ಅಂತ ಕಾಲೇಜು ದಿನಗಳನ್ನು ಸ್ಮರಿಸಿದರು.
ನಾನು ಸಿಎಂ ಆಗಿ ಇಲ್ಲಿಗೆ ಬರುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಹೇಳ್ತಾ ಹೋದ್ರೆ ನಾನು ಸಿಎಂ ಅನ್ನೋದೆ ಮರೆತುಬಿಡುತ್ತೇನೆ. ಕಾಯಕವೇ ಕೈಲಾಸವೆಂಬ ತತ್ವದಡಿ ಕೆಲಸ ಮಾಡುತ್ತಿದ್ದೇನೆ. ‘ಕಾಯಕವೇ ಬೇರೆ, ಕರ್ತವ್ಯವೇ ಬೇರೆ’. ಕಾಯಕ ಅಂದ್ರೆ ಜನರ ಕಲ್ಯಾಣಕ್ಕೆ ಕೆಲಸ ಮಾಡೋದು. ಕರ್ತವ್ಯ ಅಂದ್ರೆ ಕೇವಲ ಡ್ಯೂಟಿ ಮಾಡೋದು. ನಾನು ಹಲವಾರು ಕಠಿಣ ಸವಾಲು ಎದುರಿಸಿದ್ದೇನೆ. ನಿರೀಕ್ಷೆಗೆ ತಕ್ಕಂತೆ ನಾನು ಕೆಲಸ ಮಾಡುತ್ತೇನೆ ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ
Cancer: ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರು ಕ್ಯಾನ್ಸರ್ಗೆ ಬಲಿ: ದೇಶದಲ್ಲಿ ಹೇಗಿದೆ ಕ್ಯಾನ್ಸರ್ ಮಹಾಮಾರಿ ಕಾಟ
(Basavaraj Bommai Participated in function at Hubli and he says that people should not be disturbed)
Published On - 10:04 am, Mon, 27 September 21