Cancer: ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರು ಕ್ಯಾನ್ಸರ್​​ಗೆ ಬಲಿ: ದೇಶದಲ್ಲಿ ಹೇಗಿದೆ ಕ್ಯಾನ್ಸರ್​ ಮಹಾಮಾರಿ ಕಾಟ

ಯುವಕರು, ವಯಸ್ಸಾದವರಲ್ಲಿ ಕ್ಯಾನ್ಸರ್​​ ಕಂಡುಬಂದರೆ ಅವರಿಗೆ ಅದರ ಅರಿವಾಗುತ್ತದೆ. ಕ್ಯಾನ್ಸರ್​​ನಿಂದ ದೇಹದಲ್ಲಾಗುವ ಬದಲಾವಣೆಗಳನ್ನು ಅವರು ಗಮನಿಸಬಹುದು. ತಕ್ಷಣವೇ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಬಹುತೇಕ ಪ್ರಕರಣಗಳಲ್ಲಿ ಸಾವನ್ನು ಜಯಿಸಬಹುದಾಗಿದೆ. ಆದರೆ ಮಕ್ಕಳಲ್ಲಿ ಹಾಗೆ ಹೇಳಲು ಬರುವುದಿಲ್ಲ. ಹಾಗಾದರೆ ಮಕ್ಕಳಲ್ಲಿ ವಿಶೇಷವಾಗಿ ಕ್ಯಾನ್ಸರ್ ಮಾರಿಯನ್ನು ಪತ್ತೆ ಹಚ್ಚುವುದು

Cancer: ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರು ಕ್ಯಾನ್ಸರ್​​ಗೆ ಬಲಿ: ದೇಶದಲ್ಲಿ ಹೇಗಿದೆ ಕ್ಯಾನ್ಸರ್​ ಮಹಾಮಾರಿ ಕಾಟ
Cancer: ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರು ಕ್ಯಾನ್ಸರ್​​ಗೆ ಬಲಿ: ದೇಶದಲ್ಲಿ ಹೇಗಿದೆ ಕ್ಯಾನ್ಸರ್​ ಮಹಾಮಾರಿ ಕಾಟ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 27, 2021 | 10:01 AM

ನಿನ್ನೆ ರಾಜ್ಯದಲ್ಲಿ ಯುವ ಐಪಿಎಸ್ ಅಧಿಕಾರಿಯೊಬ್ಬರು ಕ್ಯಾನ್ಸರ್​​ಗೆ ಬಲಿಯಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಸಾಧನೆಗಳಾಗಿದ್ದರೂ ಕ್ಯಾನ್ಸರ್​ ಮಹಾಮಾರಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಕ್ಯಾನ್ಸರ್​ಗೆ ಯಾವುದೇ ವಯಸ್ಸು, ಜಾತಿ, ಬಡವ ಬಲ್ಲಿದ ಎಂಬ ಬೇಧ ಭಾವ ಇಲ್ಲ. ಮಕ್ಕಳಲ್ಲಿ ಅಂದರೆ 14 ವರ್ಷದೊಳಗಿನ ಬಾಲಕ-ಬಾಲಕಿಯರನ್ನು ಕ್ಯಾನ್ಸರ್ ಹೆಚ್ಚಾಗಿ ಬಾಧಿಸದು. ಒಂದೊಮ್ಮೆ ಕಾಡಿದರೂ ಸಕಾಲದಲ್ಲಿ ಸಮಗ್ರ ಚಿಕಿತ್ಸೆ ನೀಡಿದರೆ ಮಕ್ಕಳು ಕ್ಯಾನ್ಸರ್​​ನಿಂದ ಗುಣಮುಖರಾಗುತ್ತಾರೆ. ಆದರೂ ನೂರಾಋಉ ಮಕ್ಕಳು ದೇಶದಲ್ಲಿ ಕ್ಯಾನ್ಸರ್​​ಗೆ ಬಲಿಯಾಗುತ್ತಿದ್ದಾರೆ.

ಭಾರತದಲ್ಲಿ ಬಾಲ್ಯದ ಕಾಲದಲ್ಲಿ ಮಕ್ಕಳಿಗೆ ಕ್ಯಾನ್ಸರ್​ ಯಾವ ಪ್ರಮಾಣದಲ್ಲಿ ಕಾಡುತ್ತಿದೆ. ಅದರ ಲಕ್ಷಣಗಳು ಏನು? ಯಾವ ಪ್ರಮಾಣದಲ್ಲಿ ಕಾಡುತ್ತಿದೆ ಎಂದು ನೋಡುವ ಮುನ್ನ… ಪ್ರತಿ ವರ್ಷ ವಿಶ್ಯದಾದ್ಯಂತ 3 ಲಕ್ಷಕ್ಕೂಹೆಚ್ಚು ಮಕ್ಕಳಲ್ಲಿ ಕ್ಯಾನ್ಸರ್​​ ಕಾಡುತ್ತದೆ. ಭಾರತದಲ್ಲಿಯೂ ಪ್ರತಿ ವರ್ಷ ಕನಿಷ್ಠ ಅರ್ಧ ಲಕ್ಷದಷ್ಟು ಮಕ್ಕಳಲ್ಲಿ ಕ್ಯಾನ್ಸರ್​​ ಕಂಡುಬರುತ್ತದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶೇ. 80-90 ಮಂದಿ ಕ್ಯಾನ್ಸರ್​​ನಿಂದ ಗುಣಮುಖರಾಗುತ್ತಾರೆ.

ಯುವಕರು, ವಯಸ್ಸಾದವರಲ್ಲಿ ಕ್ಯಾನ್ಸರ್​​ ಕಂಡುಬಂದರೆ ಅವರಿಗೆ ಅದರ ಅರಿವಾಗುತ್ತದೆ. ಕ್ಯಾನ್ಸರ್​​ನಿಂದ ದೇಹದಲ್ಲಾಗುವ ಬದಲಾವಣೆಗಳನ್ನು ಅವರು ಗಮನಿಸಬಹುದು. ತಕ್ಷಣವೇ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಬಹುತೇಕ ಪ್ರಕರಣಗಳಲ್ಲಿ ಸಾವನ್ನು ಜಯಿಸಬಹುದಾಗಿದೆ. ಆದರೆ ಮಕ್ಕಳಲ್ಲಿ ಹಾಗೆ ಹೇಳಲು ಬರುವುದಿಲ್ಲ. ಬನ್ನೀ ಹಾಗಾದರೆ ಮಕ್ಕಳಲ್ಲಿ ವಿಶೇಷವಾಗಿ ಕ್ಯಾನ್ಸರ್ ಮಾರಿಯನ್ನು ಪತ್ತೆ ಹಚ್ಚುವುದು (Cancer symptoms in children) ಹೇಗೆ ತಿಳಿಯೋಣ:​

1. ನಿರಂತರ, ವಿವರಿಸಲಾಗದ ದೇಹ ತೂಕ ಕಡಿಮೆಯಾಗುವುದು 2. ತಲೆ ನೋವು, ಬೆಳಗಿನ ವೇಳೆಯೇ ವಾಂತಿ ಬರುವುದು 3. ಮೂಳೆಗಳು, ಕೀಲುಗಳು, ಬೆನ್ನು ಅಥವಾ ಕಾಲುಗಳಲ್ಲಿ ಊತ, ನಿರಂತರ ನೋವು ಕಾಣಿಸುವುದು 4. ಹೊಟ್ಟೆ, ಎದೆ ಭಾಗ, ಪೃಷ್ಠ ಅಥವಾ ಕಂಕುಳಲ್ಲಿ ಗಡ್ಡೆ, ಗಂಟು ಕಾಣಿಸಿಕೊಳ್ಳುವುದು 5. ಕಣ್ಣು ಗುಡ್ಡೆಯಲ್ಲಿ ಬಿಳಿ ಬಣ್ಣ ಮೂಡುವುದು ಅಥವಾ ಕಣ್ಣಿನ ದೃಷ್ಟಿ ಕುಂದುವುದು 6. ಸೋಂಕು ಇಲ್ಲದಿದ್ದರೂ ಜ್ವರ ಮತ್ತೆ ಮತ್ತೆ ಬರುವುದು 7. ಇದ್ದಕ್ಕಿದ್ದಂತೆ ಗಾಯ ಆಗುವುದು, ರಕ್ತ ಸುರಿಯುವುದು 8. ಕಳೆಗುಂದುವುದು ಅಥವಾ ದೀರ್ಘಕಾಲದ ಬಳಲಿಕೆ ಕಂಡುಬರುವುದು

Also Read: ಕ್ಯಾನ್ಸರ್ ಚಿಕಿತ್ಸೆ ಪಡೆದು ಮತ್ತೆ ಒಂದಾದ 3 ವರ್ಷದ ಸ್ನೇಹಿತರು; ಮನಕಲಕುವ ವಿಡಿಯೊ ನೋಡಿ Also Read: ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ರೇಡಿಯೋ ಥೆರಪಿ ಚಿಕಿತ್ಸೆ ಪುನಾರಂಭ.. ತಪ್ಪಿತು ಕ್ಯಾನ್ಸರ್ ರೋಗಿಗಳ ಪರದಾಟ (Symptoms of Childhood Cancer in india)

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ