Diet Tips: ಡಯಟ್ ಮಾಡೋರು ಪನೀರ್​, ತುಪ್ಪ, ಮೊಸರು ತಿನ್ನಬಾರದಾ?

Health Tips | ಆರೋಗ್ಯಕ್ಕೆ ಹಾಲಿನ ಉತ್ಪನ್ನಗಳು ಬಹಳ ಮುಖ್ಯವಾದುದು. ಇತ್ತೀಚಿನ ಅಧ್ಯಯನದ ಪ್ರಕಾರ ಹಾಲಿನ ಉತ್ಪನ್ನಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

Diet Tips: ಡಯಟ್ ಮಾಡೋರು ಪನೀರ್​, ತುಪ್ಪ, ಮೊಸರು ತಿನ್ನಬಾರದಾ?
ತುಪ್ಪ- ಪನ್ನೀರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 27, 2021 | 1:25 PM

ಆರೋಗ್ಯದ ಬಗ್ಗೆ ಯಾರಿಗೆ ತಾನೇ ಕಾಳಜಿ ಇರುವುದಿಲ್ಲ? ಅದರಲ್ಲೂ ಟೀನೇಜ್​ನವರು ಡಯೆಟ್ (Diet) ಹೆಸರಿನಲ್ಲಿ ಆರೋಗ್ಯ ಮತ್ತು ಸೌಂದರ್ಯವೆರಡನ್ನೂ ಮೇಂಟೇನ್ ಮಾಡಲು ಹೆಣಗಾಡುತ್ತಲೇ ಇರುತ್ತಾರೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ದಪ್ಪಗಾಗುವುದು ಮಾತ್ರವಲ್ಲದೆ ಆರೋಗ್ಯವೂ ಹದಗೆಡುತ್ತದೆ. ತೆಳವಾದ ಮೈಕಟ್ಟನ್ನು ಹೊಂದಬೇಕೆಂದು ಡಯೆಟ್ ಮಾಡುವವರು ಸಾಮಾನ್ಯವಾಗಿ ಜಿಡ್ಡಿನ ಪದಾರ್ಥಗಳನ್ನು ಸೇವಿಸುವುದಿಲ್ಲ. ಹಾಗಾದರೆ ಪನೀರ್, ತುಪ್ಪ, ಬೆಣ್ಣೆ, ಮೊಸರು ಮುಂತಾದ ಹಾಲಿನ ಉತ್ಪನ್ನಗಳನ್ನು (Milk Products) ಸೇವಿಸಿದರೆ ನಿಜಕ್ಕೂ ದಪ್ಪಗಾಗುತ್ತಾರಾ? ಡಯಟ್ ಮಾಡುವವರು ಹಾಲಿನ ಉತ್ಪನ್ನಗಳನ್ನು ಸೇವಿಸಬಾರದಾ? ಇಲ್ಲಿದೆ ಉತ್ತರ.

ಆರೋಗ್ಯಕ್ಕೆ ಹಾಲಿನ ಉತ್ಪನ್ನಗಳು ಬಹಳ ಮುಖ್ಯವಾದುದು. ಇತ್ತೀಚಿನ ಅಧ್ಯಯನದ ಪ್ರಕಾರ ಹಾಲಿನ ಉತ್ಪನ್ನಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಒಂದುವೇಳೆ ನಿಮ್ಮ ದೇಹಕ್ಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಿದರೆ ಅಲರ್ಜಿ ಅಥವಾ ಅಜೀರ್ಣವಾಗುತ್ತದೆ ಎಂದಿದ್ದರೆ ಮಾತ್ರ ನೀವು ಈ ಉತ್ಪನ್ನಗಳಿಂದ ದೂರ ಇರಬಹುದು. ನಿಮ್ಮ ಡಯಟ್​ನಲ್ಲಿ ಪನ್ನೀರು, ಹಾಲನ್ನು ಅಳವಡಿಸಿಕೊಳ್ಳುವುದು ಕೂಡ ಬಹಳ ಮುಖ್ಯ.

ಹಾಲಿನ ಉತ್ಪನ್ನಗಳಾದ ಪನೀರ್, ಮೊಸರು, ಖೋಯಾ, ಮಜ್ಜಿಗೆ, ತುಪ್ಪವನ್ನು ಡಯಟ್​ನಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯ ಇನ್ನಷ್ಟು ಚೆನ್ನಾಗಿರುತ್ತದೆ. ಪನ್ನೀರನ್ನು ಅಡುಗೆಯನ್ನು, ನಿಮ್ಮ ಡಯಟ್​ನಲ್ಲಿ ಹೆಚ್ಚಾಗಿ ಬಳಸಿದರೆ ದೇಹಕ್ಕೆ ಸಾಕಷ್ಟು ಪ್ರೋಟೀನ್, ಕ್ಯಾಲ್ಷಿಯಂ, ವಿಟಮಿನ್ ಬಿ ಸಿಗುತ್ತದೆ. ಇದರಿಂದ ಮೂಳೆಗಳು ಸದೃಢವಾಗುತ್ತವೆ. ಹಾಗೇ ಪನ್ನೀರಿನಲ್ಲಿ ಮ್ಯಾಗ್ನೇಷಿಯಂ ಹಾಗೂ ಪೊಟಾಷಿಯಂ ಕೂಡ ಇದೆ. ಇದು ಹಾರ್ಮೋನ್​ಗಳನ್ನು ಸರಿಯಾಗಿಡುವಂತೆ ನೋಡಿಕೊಳ್ಳುತ್ತದೆ.

ಮೊಸರು ಬಳಸಿದರೆ ದಪ್ಪಗಾಗುತ್ತೇನೆ ಎಂದು ನೀವು ಹಿಂದೇಟು ಹಾಕಬೇಕಾಗಿಲ್ಲ. ಮೊಸರಿನಿಂದ ಹೃದಯದ ಆರೋಗ್ಯ ಹಾಗೂ ಮೂಳೆಗಳು ಚೆನ್ನಾಗಿರುತ್ತದೆ. ಮೊಸರನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಹಾಗಾಗಿ, ಮೊಸರನ್ನು ದಿನನಿತ್ಯದ ಊಟದಲ್ಲಿ ಮಿಸ್ ಮಾಡಬೇಡಿ.

ಖೋಯಾವನ್ನು ಭಾರತದ ಸಿಹಿ ತಿಂಡಿಗಳಲ್ಲಿ ಬಳಸುತ್ತಾರೆ. ಹಾಲನ್ನು ಕುದಿಸಿ ಅದನ್ನು ದಪ್ಪಗಾಗಿಸಲಾಗುತ್ತದೆ. ಇದನ್ನು ಗಿಣ್ಣು, ಕೋವಾ ಎಂದು ಕೂಡ ಕರೆಯುತ್ತಾರೆ. ಇದರಲ್ಲಿ ವಿಟಮಿನ್ ಡಿ, ವಿಟಮಿನ್ ಬಿ, ವಿಟಮಿನ್ ಕೆ, ಕಾರ್ಬೋಹೈಡ್ರೇಟ್ಸ್, ಮಿನರಲ್ಸ್ ಅಂಶ ಹೇರಳವಾಗಿರುತ್ತದೆ.

ಮಜ್ಜಿಗೆಯಲ್ಲಿ ಪ್ರೋಟೀನ್, ವಿಟಮಿನ್ ಎ, ವಿಟಮಿನ್ ಡಿ, ಕ್ಯಾಲ್ಷಿಯಂ, ಪೊಟಾಸಿಯಂ ಯಥೇಚ್ಛವಾಗಿರುತ್ತದೆ. ಹಾಗಾಗಿ, ಊಟವಾದ ಬಳಿಕ ಅಥವಾ ಹಸಿವಾದಾಗ ಮಜ್ಜಿಗೆಯನ್ನು ಕುಡಿದರೆ ಬಹಳ ಒಳ್ಳೆಯದು.

ಡಯಟ್ ಮಾಡುವವರು ತುಪ್ಪ, ಬೆಣ್ಣೆಯನ್ನು ಆದಷ್ಟೂ ದೂರವೇ ಇಡುತ್ತಾರೆ. ಆದರೆ, ತುಪ್ಪ ಆರೋಗ್ಯಕ್ಕೆ ಬಹಳ ಉಪಯುಕ್ತವಾದುದು. ಮೂಳೆಗಳು ಗಟ್ಟಿಯಾಗಿರಲು ತುಪ್ಪ ಸಹಕಾರಿ. ಹಾಗೇ, ತುಪ್ಪ ಸೇವೆನಯಿಂದ ಜೀರ್ಣಕ್ರಿಯೆ ಕೂಡ ಚೆನ್ನಾಗಿರುತ್ತದೆ. ತುಪ್ಪದಲ್ಲಿ ವಿಟಮಿನ್, ಆ್ಯಂಟಿಆಕ್ಸಿಡೆಂಟ್ಸ್​, ಆರೋಗ್ಯಕರವಾದ ಕೊಬ್ಬಿನ ಅಂಶ ಇರುತ್ತದೆ.

ಇದನ್ನೂ ಓದಿ: Health Tips: ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಈ ಕೆಲವು ಅಂಶಗಳೇ ಕಾರಣ!

Coffee Health Benefits: ದಿನಕ್ಕೆ ಮೂರೇ ಮೂರು ಕಪ್ ಕಾಫಿ ಕುಡಿದರೆ ಏನೆಲ್ಲ ಉಪಯೋಗವಿದೆ ಗೊತ್ತಾ?

(Paneer To Ghee 5 Milk Products You Can Add To Your Healthy Diet Health Tips)

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್