ಬೆಂಗಳೂರು: ಪತಿಯ ವಿಚ್ಛೇದನ ನೋಟಿಸ್ (divorce notice) ಬಳಿಕವೂ 498ಎ ಕೇಸ್ ದಾಖಲಿಸಬಹುದು ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ಹೊರಡಿಸಲಾಗಿದೆ. ಪತಿ, ಕುಟುಂಬದವರ ಕಿರುಕುಳದಿಂದ ರಕ್ಷಿಸಲು 498ಎ ಕಾನೂನು ತರಲಾಗಿದೆ. ಅದೇ ರೀತಿಯಾಗಿ ಪತ್ನಿಯನ್ನು ರಕ್ಷಿಸಲು 498ಎ ಕಾನೂನು ತರಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. 498ಎ ಕೌಟುಂಬಿಕ ಕಿರುಕುಳದಿಂದ ಮಹಿಳೆಗೆ ರಕ್ಷಣೆ ಒದಗಿಸುತ್ತದೆ. ಆದರೆ ಪತಿ ನೀಡುವ ವಿಚ್ಛೇದನದ ನೋಟಿಸ್ ರಕ್ಷಣೆ ಒದಗಿಸುವುದಿಲ್ಲ ಎಂದು ನ್ಯಾ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠದಿಂದ ಆದೇಶಿಸಲಾಗಿದೆ.
ಪತಿಯಿಂದ ವಿವಾಹ ವಿಚ್ಛೇದನ ನೋಟಿಸ್ ಬಂದ ನಂತರ ಪತ್ನಿ, ಪತಿ ಹಾಗೂ ಅವರ ಸಂಬಂಧಿಗಳ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ದೌರ್ಜನ್ಯ ಕಾಯ್ದೆಯಡಿ ದೂರು ನೀಡಿದರೆ ಅದನ್ನು ಮಾನ್ಯ ಮಾಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.
ಭಾರತದಲ್ಲಿ ನಡೆಯುವ ಹೆಚ್ಚಿನ ವಿಚ್ಛೇದನಗಳಿಗೆ ಪ್ರೇಮ ವಿವಾಹಗಳೇ ಪ್ರಮುಖ ಕಾರಣ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಹೇಳಿದೆ. ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠದ ಬಿಆರ್ ಗವಾಯಿ ಮತ್ತು ಸಂಜಯ್ ಕರೋಲ್ ವೈವಾಹಿಕ ಸಂಬಂಧದ ಅರ್ಜಿಯೊಂದರ ವಿಚಾರಣೆ ವೇಳೆ ಈ ರೀತಿ ಹೇಳಿದೆ.
ಇದನ್ನೂ ಓದಿ: ಯಾರೇ ಮಾತನಾಡಿದರೂ ಜೈಲಿಗೆ ಹಾಕ್ತೀವಿ ಎನ್ನಲು ಇದು ತಾಲಿಬಾನ್ ಆಡಳಿತ ಅಲ್ಲ; ಎಂಬಿ ಪಾಟೀಲ್ಗೆ ಯತ್ನಾಳ್ ತಿರುಗೇಟು
ಅವರದು ಪ್ರೇಮ ವಿವಾಹ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಅದಕ್ಕೆ ನ್ಯಾಯಮೂರ್ತಿ ಗವಾಯಿ ಹೆಚ್ಚಿನ ವಿಚ್ಛೇದನಗಳಿಗೆ ಪ್ರೇಮ ವಿವಾಹಗಳೇ ಕಾರಣ ಎಂದು ಹೇಳಿರುವುದಾಗಿ ಬಾರ್ ಮತ್ತು ಬೆಂಚ್ ವರದಿ ಮಾಡಿತ್ತು. ಅಂತಿಮವಾಗಿ ಪೀಠವು ದಂಪತಿಗಳ ನಡುವೆ ಮಧ್ಯಸ್ಥಿಕೆಗೆ ಕರೆ ನೀಡಿತು. ಪರಸ್ಪರ ಒಪ್ಪಿಗೆ ಇದ್ದರೇ ವಿವಾಹ ವಿಚ್ಛೇದನ ಪಡೆಯಲು ಸಂವಿಧಾನದ ಪರಿಚ್ಛೇದ 142ರ ಅಡಿಯಲ್ಲಿ ಮುರಿದುಹೋದ ವಿವಾಹಗಳನ್ನು ವಿಸರ್ಜಿಸುವ ಅಧಿಕಾರ ಇದೆ.
ಆರ್ಟಿಕಲ್ 142ರ ಮೂಲಕ ಪರಿಸ್ಥಿತಿಗನುಗುಣವಾಗಿ ವಿಚ್ಛೇದನಕ್ಕಾಗಿ ಆರು ತಿಂಗಳ ಕಡ್ಡಾಯ ಕಾಯುವ ಅವಧಿಯನ್ನು ತೆಗೆದುಹಾಕಬಹುದು ಎಂದು ಸುಪ್ರೀಂ ಹೇಳಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:01 pm, Tue, 6 June 23