ಬೆಂಗಳೂರು: ದಂಡ ವಸೂಲಿ ಭರದಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಮಾನವೀಯತೆಯನ್ನೇ ಮರೆತಿದ್ದಾರೆ. ಜಯನಗರ ಸಂಚಾರಿ ಪೊಲೀಸರು ವೃದ್ಧರಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಬೈಕ್ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ವೃದ್ಧ ದಂಪತಿಯನ್ನು ನಿಲ್ಲಿಸಿ 5 ಸಾವಿರ ಫೈನ್ ಕಟ್ಟುವಂತೆ ಕಿರುಕುಳ ನೀಡಿದ್ದಾರಂತೆ.
ಜೆ.ಪಿ.ನಗರದ ನಿವಾಸಿಗಳಾದ ಮಂಗಳ, ಮಲ್ಲೇಶ್ ದಂಪತಿ ಬೈಕ್ ಮೂಲಕ ಆಸ್ಪತ್ರೆಗೆ ತೆರಳ್ತಿದ್ದರು. ಈ ವೇಳೆ ಜಯನಗರ ಸಂಚಾರಿ ಪೊಲೀಸರು ವಾಹನವನ್ನು ತಡೆದಿದ್ದಾರೆ. ಬಳಿಕ ವಾಹನದ ಮೇಲಿದ್ದ 5 ಸಾವಿರ ದಂಡ ಪಾವತಿಸಲು ಒತ್ತಾಯಿಸಿದ್ದಾರೆ. ಆದ್ರೆ ಬಿಪಿ & ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ 45 ವರ್ಷದ ಮಂಗಳ ಅವರಿಗೆ ಆಸ್ಪತ್ರೆಗೆ ಹೋಗುವುದು ತೀವ್ರ ಅನಿವಾರ್ಯವಾಗಿತ್ತು. ಹಾಗೂ ಅವರ ಬಳಿ ಕೇವಲ 2 ಸಾವಿರ ರೂಗಳು ಮಾತ್ರ ಇದ್ದವು. ಹೀಗಾಗಿ ದಂಪತಿ ಸದ್ಯಕ್ಕೆ 2 ಸಾವಿರ ರೂ. ಮಾತ್ರ ಕಟ್ಟುವುದಾಗಿ ಹೇಳಿದ್ರು. ಆಗ ಶಿವಸ್ವಾಮಿ ಎಂಬ ಅಧಿಕಾರಿ 5 ಸಾವಿರ ಕಟ್ಟಲೇಬೇಕೇಂದು ಸೂಚಿಸಿದ್ದಾರಂತೆ. ಅಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವೃದ್ಧ ದಂಪತಿ ಆರೋಪ ಮಾಡಿದ್ದಾರೆ.
3 ಜನ ಪೋಲಿಸರು ನಮ್ಮ ಕುಟುಂಬದವರ ಬಳಿ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಪೋಲಿಸ್ ರಂತೆ ವರ್ತಿಸಿರುವುದು ನಾಚಿಕೆಗೇಡಿನ ಸಂಗತಿ.ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ 3 ಜನ ಸಿಬ್ಬಂದಿಗಳ ಮೇಲೆ ಹಿರಿಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ನ್ಯಾಯ ಕೊಡಿಸುಬೇಕಾಗಿ ಕೇಳಿಕೋಳ್ಳುತ್ತೇನೆ. @btppubliceye @acpsouthtrf @JnanendraAraga @CPBlr https://t.co/E75aIAZtMn
— Rakesh NSUI (@NsuiRakesh) February 6, 2023
ಇನ್ನು ಘಟನೆಯಿಂದ ವಿಚಲಿತರಾದ ದಂಪತಿ 2 ಕಿಲೋಮೀಟರ್ ಮನೆಗೆ ನಡೆದುಕೊಂಡು ಹೋಗಿ ಹಣ ತಂದಿದ್ದಾರೆ. ಇದರಿಂದಾಗಿ ಖಾಯಿಲೆಯಿಂದ ಬಳಲುತ್ತಿದ್ದ ವೃದ್ದೆ ಕುಸಿದು ಬಿದ್ದಿದ್ದು ಸದ್ಯ ವೃದ್ದ ದಂಪತಿಯ ಮಗ ಸಂಚಾರಿ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನ ಬೆಂಗಳೂರಿನ ಸಂಚಾರಿ ಪೊಲೀಸ್ ಟ್ವಿಟರ್ ಪೇಜ್ಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ