ಬೆಂಗಳೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI- National Highway Authority of India) ಬೆಂಗಳೂರಿನ ಅಧಿಕಾರಿ ಹಾಗೂ ನಾಲ್ವರು ಇತರೆ ವ್ಯಕ್ತಿಗಳನ್ನು ಸಿಬಿಐ (CBI) ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಖಾಸಗಿ ಕಂಪೆನಿಯ ಜನರಲ್ ಮ್ಯಾನೇಜರ್, ಇಡಿ (ED- Executive Director) ಸಹಿತ ನಾಲ್ವರನ್ನು 20 ಲಕ್ಷ ಲಂಚ ಬೇಡಿಕೆ ಆರೋಪದಲ್ಲಿ ಸಿಬಿಐ ಬಂಧಿಸಿದೆ ಎಂದು ತಿಳಿದುಬಂದಿದೆ. ಈ ಸಂಬಂಧ, ನವದೆಹಲಿ, ಬೆಂಗಳೂರು, ಕೊಚ್ಚಿ, ಗುರ್ಗಾಂವ್, ಭೋಪಾಲ್ ಮುಂತಾದ ಕಡೆಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಮೂಲಕ ಸುಮಾರು 4 ಕೋಟಿಯಷ್ಟು ಸಂಪತ್ತನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಆರೋಪಿಗಳನ್ನು ಕೂಡ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಕೂಡ ತಿಳಿಸಲಾಗಿದೆ.
ಇದನ್ನೂ ಓದಿ: ಮೈಸೂರು: ನಕಲಿ ನಂದಿನಿ ತುಪ್ಪ ಮಾರಾಟ ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯಿಸಿ ಪ್ರತಿಭಟನೆಗೆ ಕರೆ
ಇದನ್ನೂ ಓದಿ: ಕಲಬುರಗಿ: 2009ರಲ್ಲಿ ಸುಳ್ಳು ದಾಖಲಾತಿ ನೀಡಿ ಬ್ಯಾಂಕ್ನಿಂದ 1.35 ಕೋಟಿ ರೂ. ಸಾಲ ಪಡೆದು ವಂಚನೆ; ಪ್ರಕರಣ ಬೆನ್ನತ್ತಿದ್ದ ಸಿಬಿಐ
Published On - 4:05 pm, Fri, 31 December 21