AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: 2009ರಲ್ಲಿ ಸುಳ್ಳು ದಾಖಲಾತಿ ನೀಡಿ ಬ್ಯಾಂಕ್​ನಿಂದ 1.35 ಕೋಟಿ ರೂ. ಸಾಲ ಪಡೆದು ವಂಚನೆ; ಪ್ರಕರಣ ಬೆನ್ನತ್ತಿದ್ದ ಸಿಬಿಐ

ಬ್ಯಾಂಕ್ ನೋಟಿಸ್ ಬಂದಾಗಲೇ ಅನೇಕರಿಗೆ ತಮ್ಮ ಹೆಸರಲ್ಲಿ ಸಾಲ ಇರುವ ಬಗ್ಗೆ ಗೊತ್ತಾಗಿತ್ತು. ನಕಲಿ ದಾಖಲಾತಿ, ನಕಲಿ ಸಹಿ ಮಾಡಿ ಸಾಲ ಪಡೆದಿದ್ದ ಅಹ್ಮದ್, ಕಲಬುರಗಿ ನಗರದ ದರ್ಗಾ ಏರಿಯಾ ನಿವಾಸಿ. ಸದ್ಯ ಸಿಬಿಐ ವಶದಲ್ಲಿದ್ದಾನೆ.

ಕಲಬುರಗಿ: 2009ರಲ್ಲಿ ಸುಳ್ಳು ದಾಖಲಾತಿ ನೀಡಿ ಬ್ಯಾಂಕ್​ನಿಂದ 1.35 ಕೋಟಿ ರೂ. ಸಾಲ ಪಡೆದು ವಂಚನೆ; ಪ್ರಕರಣ ಬೆನ್ನತ್ತಿದ್ದ ಸಿಬಿಐ
ಆರೋಪಿ ಅಹ್ಮದ್
TV9 Web
| Edited By: |

Updated on:Dec 24, 2021 | 9:49 AM

Share

ಕಲಬುರಗಿ: ಬ್ಯಾಂಕ್​ಗೆ ಸುಳ್ಳು ದಾಖಲಾತಿ ನೀಡಿ 1.35 ಕೋಟಿ ರೂಪಾಯಿ ಸಾಲ ಪಡೆದು ವಂಚನೆ ಮಾಡಿದ ಘಟನೆ ಕಲಬುರಗಿ ನಗರದ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಕಲಬುರಗಿ ನಗರದ ಸಿಂಡಿಕೇಟ್ ಬ್ಯಾಂಕ್ (syndicate bank) ಶಾಖೆಯಲ್ಲಿ ದಶಕದ ಹಿಂದೆ ಅಂದರೆ 2009-10ರಲ್ಲಿ ಸುಳ್ಳು ದಾಖಲಾತಿ ನೀಡಿ ವಂಚನೆ ಮಾಡಲಾಗಿದೆ. ಸದ್ಯ ಪ್ರಕರಣದ ಬೆನ್ನತ್ತಿದ್ದ ಸಿಬಿಐ ತಂಡ, ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿದೆ. ಈಗಾಗಲೇ ಬ್ಯಾಂಕ್​ಗೆ ವಂಚಿಸಿರುವ ಆರೋಪಿ ಅಹ್ಮದ್​ನನ್ನು ವಶಕ್ಕೆ ಪಡೆದ ಸಿಬಿಐ (CBI) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಅಹ್ಮದ್ ಬೀದಿ ಬದಿ ವರ್ತಕರು ಹಾಗೂ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವವರ ಹೆಸರಲ್ಲಿ ಸುಳ್ಳು ದಾಖಲೆ ಹುಟ್ಟು ಹಾಕಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದ. ಹೀಗಾಗಿ ಸಿಬಿಐ ತಂಡ ಸಾಲದ ಹಗರಣದಲ್ಲಿ ಯಾರಿದ್ದಾರೆ? ಎಲ್ಲೆಲ್ಲಿ ದಾಖಲೆ ಹುಟ್ಟು ಹಾಕಲಾಗಿದೆ? ರಿಜಿಸ್ಟ್ರಾರ್ ಕಚೇರಿಯಲ್ಲಿನ ದಲ್ಲಾಳಿಗಳು ಸೇರಿದಂತೆ ಹಲವರ ವಿಚಾರಣೆ ನಡೆಸುತ್ತಿದ್ದಾರೆ.

2009ರಲ್ಲಿ ವರ್ತಕರು, ಕೆಲಸಗಾರರ ಹೆಸರಲ್ಲಿ ಖೊಟ್ಟ ದಾಖಲೆ ಬಳಸಿ 1.35 ಕೋಟಿ ರೂಪಾಯಿಯಷ್ಟು ಸಾಲ ಪಡೆದಿದ್ದ ಅಹ್ಮದ್, ಯಾರ ಹೆಸರಲ್ಲಿ ಸಾಲ ಪಡೆದಿದ್ದನೋ ಅವರಿಗೆ ಹಣ ನೀಡಿರಲಿಲ್ಲ. ಬ್ಯಾಂಕ್ ನೋಟಿಸ್ ಬಂದಾಗಲೇ ಅನೇಕರಿಗೆ ತಮ್ಮ ಹೆಸರಲ್ಲಿ ಸಾಲ ಇರುವ ಬಗ್ಗೆ ಗೊತ್ತಾಗಿತ್ತು. ನಕಲಿ ದಾಖಲಾತಿ, ನಕಲಿ ಸಹಿ ಮಾಡಿ ಸಾಲ ಪಡೆದಿದ್ದ ಅಹ್ಮದ್, ಕಲಬುರಗಿ ನಗರದ ದರ್ಗಾ ಏರಿಯಾ ನಿವಾಸಿ. ಸದ್ಯ ಸಿಬಿಐ ವಶದಲ್ಲಿದ್ದಾನೆ.

ಬೆಂಗಳೂರು: ಕೋಟಿಗಟ್ಟಲೆ ಹವಾಲಾ ಹಣ ವರ್ಗಾವಣೆ ಪ್ರಕರಣ; ಸ್ಟೇಟ್​ಮೆಂಟ್ ಪಡೆದು ಪೊಲೀಸರಿಂದ ಪರಿಶೀಲನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಹವಾಲ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫ್ರೀಜ್ ಆಗರಿರುವ 2886 ಖಾತೆಗಳ‌ ಸ್ಟೇಟ್​ಮೆಂಟ್ ಅನ್ನು ಪೊಲೀಸರು ಪಡೆಯುತ್ತಿದ್ದಾರೆ. ಈವರೆಗ ಸುಮಾರು 2 ಸಾವಿರಕ್ಕೂ ಹೆಚ್ಚು ಪುಟಗಳ ಸ್ಟೇಟ್​ಮೆಂಟ್ ಪಡೆದಿರುವ ಪೊಲೀಸರು, ಯಾವ ಯಾವ ಸಮಯದಲ್ಲಿ ಎಷ್ಟೆಷ್ಟು ಹಣ ವರ್ಗಾವಣೆ ಆಗಿದೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ವಿವಿಧ 25 ಬ್ಯಾಂಕ್​ಗಳಿಂದ ಸ್ಟೇಟ್​ಮೆಂಟ್ ಪಡೆಯಲಾಗಿದೆ. ಸದ್ಯ ಕೋಟಿ ಕೋಟಿ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ. ಜನವರಿ 1 2019 ರಿಂದ 18 ನೇ ನವಂಬರ್ 2021 ಅವಧಿಯ ಸ್ಟೇಟ್​ಮೆಂಟ್ ಪಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:

ಹಣ ದ್ವಿಗುಣ ಆಮಿಷವೊಡ್ಡಿ ವಂಚನೆ: ಜೆಡಿಎಸ್ ನಗರಸಭೆ ಸದಸ್ಯ ಸೇರಿ 9 ಜನ ಅರೆಸ್ಟ್, ವಂಚನೆ ಪ್ರಕರಣದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಶಾಮೀಲು

PT Usha: ಭಾರತದ ಗೋಲ್ಡನ್ ಗರ್ಲ್ ಪಿಟಿ ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ ಕೇರಳ ಪೊಲೀಸರು

Published On - 8:21 am, Fri, 24 December 21

Follow Us
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ