ಬೆಂಗಳೂರು: ನಗರದ ಕೆ.ಆರ್.ಪುರಂನಲ್ಲಿ ಡ್ರಗ್ ಪೆಡ್ಲರ್ನನ್ನು ಬಂಧಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಸಿಬಿ ಅಧಿಕಾರಿಗಳು ಡ್ರಗ್ ಪೆಡ್ಲರ್ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳವಂತೆ ಚೆನ್ನೈನ ಕಾಂಪಿಟೆಂಟ್ ಅಥಾರಿಟಿ ಆದೇಶ ನೀಡಿದೆ. ಡ್ರಗ್ ಪೆಡ್ಲರ್ ಮೃತ್ಯುಂಜಯ ಅಲಿಯಾಸ್ ಎಂ.ಜೆ 2006ರಿಂದ ಡ್ರಗ್ಸ್ ಮಾರಾಟದಲ್ಲಿ ತೊಡಗಿಕೊಂಡಿದ್ದನು. ಆರೋಪಿ ವಿರುದ್ಧ ಚಿಕ್ಕಬಳ್ಳಾಪುರ, ಚಿಂತಾಮಣಿ, ಬೆಂಗಳೂರು ಸೇರಿ ಹಲವೆಡೆ ಪ್ರಕರಣ ದಾಖಲಾಗಿದ್ದವು. ಆರೋಪಿ ಮೃತ್ಯುಂಜಯ 10-11 ಡ್ರಗ್ಸ್ ಪ್ರಕರಣಗಳಲ್ಲಿ ಬೇಕಾಗಿದ್ದನು.
ಹೀಗಾಗಿ ಆರೋಪಿಯನ್ನು ಸಿಸಿಬಿ ಅಧಾಕರಿಗಳು ಜುಲೈನಲ್ಲಿ ಬಂಧಿಸಿದ್ದರು. ಆರೋಪಿಯಿಂದ 80 ಲಕ್ಷ ಮೌಲ್ಯದ ನಿಷೇಧಿತ ಮಾದಕವಸ್ತುಗಳಾದ ಹ್ಯಾಲಿಷ್ ಆಯಿಲ್ ಮತ್ತು ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿ ಡ್ರಗ್ಸ್ ಮಾರಾಟ ಮಾಡಿ ಕೋಟ್ಯಂತರ ಮೌಲ್ಯದ ಅಸ್ತಿ ಖರೀದಿ ಮಾಡಿದ್ದನು.
ಮೃತ್ಯುಂಜಯ ಅಲಿಯಾಸ್ ಎಂ.ಜೆ ಮಾಲೂರು ತಾಲೂಕಿನ 3 ಗ್ರಾಮಗಳಲ್ಲಿ 11 ಗುಂಟೆ, 5 ಗುಂಟೆ, 10 ಗುಂಟೆ ಕೃಷಿ ಭೂಮಿ, ಹೊಸಕೋಟೆಯಲ್ಲಿ 1 ಸೈಟ್ ಖರೀದಿ ಮಾಡಿದ್ದನು. ಸದ್ಯ ಅಧಿಕಾರಿಗಳು ಆರೋಪಿ ಖರೀದಿಸಿರುವ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Sat, 17 September 22