ಯಡಿಯೂರಪ್ಪ-ಬಿಡಿಎಗೆ ಮುಳುಗುನೀರು ತಂದ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ: ಬಿಡಿಎ ಸೈಟ್ ವಿರುದ್ಧ ಲೋಕಾಯುಕ್ತಕ್ಕೆ ದೂರು

50 ಕೋಟಿಗೂ ಹೆಚ್ಚು ಬೆಲೆಬಾಳುವ ಸೈಟ್​ನ್ನು ಬಿಡಿಎ ಸೇಲ್ ಡೀಡ್ ಮಾಡಲು ಹೊರಟಿದೆ. ಈ ಹಿನ್ನಲೆ ಕ್ರಮ ಸೂಕ್ತ ಕೈಗೊಳ್ಳುವಂತೆ ಲೋಕಾಯುಕ್ತಗೆ ದೂರು ನೀಡಿದ್ದೇವೆ.

ಯಡಿಯೂರಪ್ಪ-ಬಿಡಿಎಗೆ ಮುಳುಗುನೀರು ತಂದ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ: ಬಿಡಿಎ ಸೈಟ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ಕೆ‌.ಮಥಾಯಿ, ಯಡಿಯೂರಪ್ಪ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 17, 2022 | 5:31 PM

ಬೆಂಗಳೂರು: ಕೆಂಗೇರಿಯ ಸರ್.ಎಂ. ವಿಶ್ವೇಶ್ವರಯ್ಯ ಲೇಔಟ್​ನ ಸಿಎ ಸೈಟ್ ಸಂಬಂಧ ಮಾಜಿ ಸಿಎಂ ಬಿಎಸ್ ಯಡಿಯೂಪ್ಪ, ಹೊಳ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಮತ್ತು ಬಿಡಿಎ ವಿರುದ್ದ ನಿವೃತ್ತ ಕೆಎಎಸ್ ಅಧಿಕಾರಿ ಕೆ‌.ಮಥಾಯಿ ಮತ್ತು ಆಮ್ ಆದ್ಮಿ ಪಾರ್ಟಿ ಮುಖಂಡರಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ಕುರಿತು ಲೋಕಾಯುಕ್ತ ಬಳಿ ಕೆ. ಮಥಾಯಿ ಮಾತನಾಡಿದ್ದು, 2010ರಲ್ಲಿ ಸಿಎ ಸೈಟ್ 1ನ್ನು ಆಗಿನ ಮುಖ್ಯಮಂತ್ರಿ ಬಿಎಸ್ ಯುಡಿಯೂರಪ್ಪ ಪ್ರಭಾವ ಬಳಸಿ ಬಿಡಿಎ ಮೂಲಕ ಸೈಟ್ ಅಲೋಟ್ ಮಾಡಿಸಿದ್ದ ಬಿಬಿಎಂಪಿಯ ಕನ್ನಡ ಶಾಲೆಗೆ ಅಲೋಟ್ ಆಗಿದ್ದ ಸಿಎ ಸೈಟ್​ನ್ನು ಬಿಎಸ್​ ಯಡಿಯೂರಪ್ಪ ಪ್ರಭಾವ ಬಳಸಿ ಅಲೋಟ್​ ಮಾಡಿಸಿಕೊಂಡಿದ್ದಾರೆ. ಈ ಮೊದಲು ಚಂದ್ರಪ್ಪ ಕೆ.ಎಸ್.ಲೇಔಟ್ ಕೇಳಿದ್ದ ಸಿಎ ಸೈಟ್ ಭಾರತ ಸಂಸ್ಕ್ರತಿ ಪ್ರತಿಷ್ಟಾನಕ್ಕೆ ಅಲೋಟ್ ಆಗಿದೆ. ಇನಿಶಿಯಲ್ ಡೆಪಾಸಿಟ್ ಹಿಂಪಡೆಯದೆ ಆಗಿನ ಸಿಎಂ ಬಿಎಸ್ ವೈ ಒತ್ತಡ ಹಾಕಿದ್ದಾರೆ. ಪದೇ ಪದೇ ಒತ್ತಡ ತಂದು ಬಿಡಿಎಯಿಂದ ಅಲರ್ಟ್ಮೆಂಟ್ ಆಗಿದೆ. ನಂತರ ಶಾಲಾ ಕಟ್ಟಡಕ್ಕೆ ಅಂತಾ 30 ವರ್ಷಕ್ಕೆ ಲೀಸ್ ಪಡೆದಿರುವ ಶಾಸಕ ಚಂದ್ರಪ್ಪ ಕಮರ್ಷಿಯಲ್ ಆಗಿ ಬಳಕೆ ಮಾಡ್ತಿದ್ದಾರೆ ಎಂದು ಹೇಳಿದರು.

ದೇವರಾಜ ಅರಸು ಶಿಕ್ಷಣ ಸಂಸ್ಥೆ, ಚಿತ್ರದುರ್ಗದ ಹೆಸರಿನಲ್ಲಿ ಸೈಟ್ ಮಂಜೂರಾತಿಗೆ ಮನವಿ ಮಾಡಿದ್ದು, ಬದಲಿ ನಿವೇಶನ ಹಂಚಿಕೆ ಮಾಡುವಂತೆ ಬಿಎಸ್ ವೈ ಬಿಡಿಎಗೆ ಪತ್ರ ಬರೆದಿದ್ದಾರೆ. ಆದ್ರೆ ನಿವೇಶನವೇ ಹಂಚಿಕೆಯಾಗದೆ ಬಿಜೆಪಿ ಶಾಸಕ ಚಂದ್ರಪ್ಪಗೆ ಬದಲಿ ನಿವೇಶನ ನೀಡುವುದು ಹೇಗೆ ಎಂದು ಪ್ರಶ್ನಿಸಿದರು. ಶಾಲೆಗೆಂದು ಲೀಸ್ ಪಡೆದ ಸೈಟ್​ನಲ್ಲಿ ಎರಡು ವರ್ಷಗಳ ಒಳಗೆ ಶಾಲೆ ನಿರ್ಮಿಸಬೇಕು.

ಸದ್ಯ ಈಗ 3,800 ರೂಪಾಯಿಗೆ ಶಾಸಕ ಚಂದ್ರಪ್ಪಗೆ ಸೇಲ್ ಡೀಡ್ ಮಾಡಲು ಮುಂದಾಗಿದ್ದಾರೆ. 50 ಕೋಟಿಗೂ ಹೆಚ್ಚು ಬೆಲೆಬಾಳುವ ಸೈಟ್​ನ್ನು ಬಿಡಿಎ ಸೇಲ್ ಡೀಡ್ ಮಾಡಲು ಹೊರಟಿದೆ. ಈ ಹಿನ್ನೆಲೆ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಗೆ ದೂರು ನೀಡಿದ್ದೇವೆ. ಕೂಡಲೇ ಬಿಡಿಎ ಸಿಎ ಸೈಟ್ ಸೇಲ್ ಡೀಡ್ ಮಾಡದಂತೆ ತಡೆ ನೀಡುವಂತೆ ಬಿಡಿಎಗೂ ತಕರಾರು ಅರ್ಜಿ ನೀಡಿದ್ದೇವೆ ಎಂದು ಲೋಕಾಯುಕ್ತ ಬಳಿ ಕೆ.ಮಥಾಯಿ ತಿಳಿಸಿದರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada