ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್​ ಕಾರ್ಡ್​ ಜಾಲ ಭೇದಿಸಿದ ಸಿಸಿಬಿ ಪೊಲೀಸರು; ಓರ್ವ ಆರೋಪಿ ಅರೆಸ್ಟ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 27, 2023 | 1:12 PM

ನಗರದಲ್ಲಿ ನಕಲಿ ಮಾರ್ಕ್ಸ್ ಕಾರ್ಡ್​ ದಂಧೆ ಜೋರಾಗಿದ್ದು, ಇದೀಗ ಸಿಸಿಬಿ ಪೊಲೀಸರು 5 ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 15 ವಿವಿಗಳು ಹಾಗೂ ಬೋರ್ಡ್​ಗಳ ನಕಲಿ ಅಂಕಪಟ್ಟಿಗಳ ಬರೋಬ್ಬರಿ 6,800 ನಕಲಿ ಮಾರ್ಕ್ಸ್ ಕಾರ್ಡ್​ಗಳು ಪತ್ತೆಯಾಗಿವೆ.

ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್​ ಕಾರ್ಡ್​ ಜಾಲ ಭೇದಿಸಿದ ಸಿಸಿಬಿ ಪೊಲೀಸರು; ಓರ್ವ ಆರೋಪಿ ಅರೆಸ್ಟ್​
ಸಾಂದರ್ಭೀಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಮುಂದುವರೆದ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ, ಇಂದು(.27) ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಐದು ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ನಕಲಿ ಅಂಕಪಟ್ಟಿ ದಂಧೆ ಮಾಡುತ್ತಿರುವುದು ಪತ್ತೆಯಾಗಿದ್ದು, 15 ವಿವಿಗಳು ಹಾಗೂ ಬೋರ್ಡ್​ಗಳ ನಕಲಿ ಅಂಕಪಟ್ಟಿಗಳ ಬರೋಬ್ಬರಿ 6,800 ನಕಲಿ ಮಾರ್ಕ್ಸ್ ಕಾರ್ಡ್​ಗಳನ್ನ ಸೇರಿ ಕೃತ್ಯಕ್ಕೆ ಬಳಸಿದ್ದ ಟೆಕ್ನಿಕಲ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಆರೋಪಿ ವಿಕಾಸ್​ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯ, ಕುವೆಂಪು ಯೂನಿವರ್ಸಿಟಿ, ಜೈನ್ ವಿಹಾರ್ ಯೂನಿವರ್ಸಿಟಿ ಸೇರಿದಂತೆ 15 ಕ್ಕೂ ಹೆಚ್ಚು ಯೂನಿವರ್ಸಿಟಿಗಳ ನಕಲಿ ಮಾರ್ಕ್ಸ್ ಕಾರ್ಡ್ ತಯಾರಿ ಮಾಡಿಕೊಡುತ್ತಿದ್ದ ವ್ಯಕ್ತಿಯನ್ನ ಇದೀಗ ಬಂಧಿಸಿದ್ದಾರೆ. ಈ ಹಿಂದೆ ಕೂಡ ಇಂತಹ ಅನೇಕ ನಕಲಿ ಮಾರ್ಕ್ಸ್ ಜಾಲವನ್ನ ಸಿಸಿಬಿ ಪೊಲೀಸರು ಭೇಧಿಸಿದ್ದರು. ಆದರೂ ಈವರೆಗೆ ಇಂತಹ ಕೃತ್ಯಗಳು ಹೊರಬರುತ್ತಲೇ ಇದೆ.

545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಆರ್​.ಡಿ.ಪಾಟೀಲ್ ಬೆಂಬಲಿಗರಿಂದ ಮತ್ತೊಂದು ಆಡಿಯೋ ರಿಲೀಸ್​

ಕಲಬುರಗಿ: 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧಿಸಿದಂತೆ ಅಕ್ರಮದ ಕಿಂಗ್ ಪಿನ್ ಆರ್​.ಡಿ.ಪಾಟೀಲ್ ಇಂದ ಮತ್ತೊಂದು ಆಡಿಯೋ ರಿಲೀಸ್​ ಆಗಿದೆ. ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಮೂರು ಜನ ಸಿಐಡಿ ಡಿ ವೈ ಎಸ್ ಪಿ ಗಳು ಪ್ರಕಾಶ್ ರಾಠೋಡ್ , ವಿರೇಂದ್ರ , ಶಂಕರಗೌಡ ಈ ಮೂರು ಜನ ಅಧಿಕಾರಿಗಳ ಹಣದ ಪಾಲಿನ ಬಗ್ಗೆ ಮಾತಾಡಿರುವ ಆಡಿಯೋ ಇದೀಗ ವೈರಲ್​ ಆಗಿದೆ.

ಇದನ್ನೂ ಓದಿ:ಬೆಂಗಳೂರು: ಯೂಟ್ಯೂಬ್​ ನೋಡಿ ನಕಲಿ ನೋಟು ತಯಾರಿ ಮಾಡುತ್ತಿದ್ದವನನ್ನ ಬಂಧಿಸಿದ ಪೊಲೀಸರು

ಆಡಿಯೋದಲ್ಲಿ ಎನಿದೆ?

ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕ ಕಾಶಿನಾಥ್‌ ಹಾಗೂ ಸಿಐಡಿ DySP ಶಂಕರಗೌಡ ಮಾತಾಡಿದ್ದಾರೆನ್ನುವ ಈ ಆಡಿಯೋದಲ್ಲಿ ಇಬ್ಬರ ಸಂಭಾಷಣೆಯ ವೇಳೆ ಮತ್ತಿಬ್ಬರು ತನಿಖಾಧಿಕಾರಿಗಳಾದ ಪ್ರಕಾಶ್ ರಾಠೋಡ್ ಮತ್ತು ವೀರೇಂದ್ರ ಹೆಸರು ಉಲ್ಲೇಖವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಮೂವರು ಸಿಐಡಿ ಡಿವೈಎಸ್​​ಪಿಗಳು ಇವರಾಗಿದ್ದು ಹಣದ ಪಾಲಿನ ಬಗ್ಗೆ ಈ ಆಡಿಯೋದಲ್ಲಿ ಮಾತನಾಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Fri, 27 January 23