ಬೆಂಗಳೂರು: ಯೂಟ್ಯೂಬ್ ನೋಡಿ ನಕಲಿ ನೋಟು ತಯಾರಿ ಮಾಡುತ್ತಿದ್ದವನನ್ನ ಬಂಧಿಸಿದ ಪೊಲೀಸರು
ನಗರದ ಅನಂತಪುರದಲ್ಲಿ ಮನೆ ಪಡೆದು ಯೂಟ್ಯೂಬ್ ವಿಡಿಯೋ ನೋಡಿ ನಕಲಿ ನೋಟು ತಯಾರಿ ಮಾಡುತ್ತಿದ್ದವನನ್ನ ಖಚಿತ ಮಾಹಿತಿ ಮೇರೆಗೆ ಸುಬ್ರಮಣ್ಯಪುರ ಪೊಲೀಸರು ದಾಳಿ ನಡೆಸಿ, ಲಕ್ಷ ಲಕ್ಷ ನಕಲಿ ನೋಟುಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು: ನಗರದ ಅನಂತಪುರದಲ್ಲಿ ಮನೆ ಪಡೆದಿದ್ದ ಪುಲ್ಲಲರೇವು ರಾಜು ಎಂಬಾತ ಆರ್ಬಿಐ ನೋಟ್ಗೂ ಟಕ್ಕರ್ ಕೊಡುವಂತೆ ರೂಂನಲ್ಲಿ ಒಬ್ಬನೇ ಕುಳಿತು ನಕಲಿ ನೋಟ್ ತಯಾರಿಸುತ್ತಿದ್ದ. ಇದೀಗ ಸುಬ್ರಮಣ್ಯಪುರ ಪೊಲೀಸರ ಕಾರ್ಯಚರಣೆಯಿಂದ ಪುಲ್ಲಲರೇವು ರಾಜು ಅರೆಸ್ಟ್ ಆಗಿದ್ದಾನೆ. ಏಳನೇ ತರಗತಿ ಓದಿದ್ದ ಇತ, ಕೇವಲ ಯೂಟ್ಯೂಬ್ ವಿಡಿಯೋ ನೋಡಿ ನಕಲಿ ನೋಟು ತಯಾರಿ ಮಾಡುವುದನ್ನ ಕಲಿತಿದ್ದಾನೆ. ಇತನ ಮೈಂಡ್ಗೆ ಪೊಲೀಸರು ಒಮ್ಮೆ ದಂಗಾಗಿದ್ದಾರೆ.
ಮನೆಯಲ್ಲಿ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದ ಇತ, ಪಕ್ಕ ಬ್ಯುಸಿನೆಸ್ ಮಾದರಿಯಲ್ಲಿ ಪ್ರತ್ಯೇಕ ಮನೆ ಪಡೆದು ನೋಟ್ ಪ್ರಿಂಟ್ ಕೆಲಸ ಆರಂಭಿಸಿದ್ದಾನೆ. ಅಧಿಕ ಹಣ ಮಾಡುವ ಉದ್ದೇಶದಿಂದ ಆನ್ ಲೈನ್ ಕ್ಲಾಸ್ನಂತೆ ಯೂಟ್ಯೂಬ್ ವಿಡಿಯೋಗಳನ್ನ ಸತತವಾಗಿ ಆರು ತಿಂಗಳುಗಳ ಕಾಲ ನೋಡಿ, ನಂತರ ಈ ದಂಧೆಗೆ ಬಂದಿದ್ದಾನಂತೆ. ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ನಕಲಿ ನೋಟ್ನ್ನು ವರ್ಗಾವಣೆ ಮಾಡಿದ್ದಾನೆ. ಅತಿಯಾದ ಕ್ಯಾಶ್ ರೂಪದ ವ್ಯಹಾರಗಳೇ ಇವರ ಗಾಳ, ಪ್ರಮುಖವಾಗಿ ಬಾರ್, ಥಿಯೇಟರ್, ಪೆಟ್ರೋಲ್ ಬಂಕ್, ಪಬ್ಗಳನ್ನ ಟಾರ್ಗೇಟ್ ಮಾಡುತ್ತಿದ್ದರಂತೆ. ಅಸಲಿ ನೋಟ್ ಮೇಲಿಟ್ಟು ನಕಲಿ ನೋಟುಗಳನ್ನ ಒಳಗಡೆ ಸೇರಿಸಿ ವ್ಯವಹಾರಕ್ಕೆ ಪ್ಲ್ಯಾನ್ ಮಾಡಿದ್ದರಂತೆ.ಇದೇ ರೀತಿ ತಮಿಳುನಾಡು, ಆಂಧ್ರ, ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಒಂದು ಲಕ್ಷ ಅಸಲಿ ನೋಟಿಗೆ ನಾಲ್ಕು ಲಕ್ಷ ನಕಲಿ ನೋಟು ನೀಡುತ್ತಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಸದ್ಯ ಆರೋಪಿಗಳ ಸಂಪರ್ಕ ಹೊಂದಿದ್ದ ವ್ಯಕ್ತಿಗಳಿಗಾಗಿ ಸುಬ್ರಮಣ್ಯಪುರ ಪೊಲೀಸರು ಬಲೆ ಬಿಸಿದ್ದಾರೆ.
ಪುಲ್ಲಲರೇವು ರಾಜುಗೆ ಸಾತ್ ನೀಡಿದ್ದ ಸರ್ಕಾರಿ ಕಚೇರಿಯಲ್ಲಿ ಓಡಾಡಿಕೊಂಡಿದ್ದ ಮಹಿಳೆ
ಪುಲ್ಲಲರೇವು ರಾಜುವಿನ ಖೋಟಾ ನೋಟ್ ದಂಧೆಗೆ, ಕಡಪದ ಸಮಾಜ ಸೇವೆಯಲ್ಲಿ ಸರ್ಕಾರದ ಕಾಂಟ್ರಾಕ್ಟ್ ಆಧಾರದಲ್ಲಿ ಕೆಲಸ ಮಾಡುತಿದ್ದ ರಜನಿ ಎಂಬ ಮಹಿಳೆಯು ಸಾಥ್ ನೀಡಿದ್ದಾಳೆ. ರಾಜು ಪ್ರಿಂಟ್ ಮಾಡಿದ ಹಣವನ್ನ ರಜಿನಿ ಮತ್ತು ಚರಣ್ ಸಿಂಗ್ ಇಬ್ಬರು ಕ್ಲೈಂಟ್ಗಳಿಗೆ ನೀಡುವ ಕೆಲಸ ಮಾಡುತಿದ್ದರು. ದಂಧೆಯ ಆಳಕ್ಕೆ ಇಳಿದ ಖಾಕಿಗೆ ಮತ್ತಷ್ಟು ಹೆಸರುಗಳು ಕೇಳಿ ಬರುತ್ತಿವೆ. ಇದರ ಮಾಹಿತಿ ಆಧರಿಸಿ ಸುಬ್ರಮಣ್ಯಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ