Padma Awards: ಪದ್ಮ ವಿಭೂಷಣ ಪ್ರಶಸ್ತಿ ಸಿಗುವ ನಿರೀಕ್ಷೆ ಇರಲಿಲ್ಲ: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ

Padma Awards: ಪದ್ಮ ವಿಭೂಷಣ ಪ್ರಶಸ್ತಿ ಸಿಗುವ ನಿರೀಕ್ಷೆ ಇರಲಿಲ್ಲ: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ

TV9 Web
| Updated By: Digi Tech Desk

Updated on:Jan 27, 2023 | 12:21 PM

ತಮ್ಮ ಹೃದಯಕ್ಕೆ ಹತ್ತಿರವಾಗಿರುವ ಮಧ್ಯಾಹ್ನದ ಬಿಸಿಯೂಟ ಮತ್ತು ಯಶಸ್ವಿನಿ ಯೋಜನೆಗಳನ್ನು ಜಾರಿಯಲ್ಲಿಡುವುದರ ಜೊತೆಗೆ ಅವುಗಳಲ್ಲಿ ಸುಧಾರಣೆಗಳನ್ನು ತಂದಿರುವುದಕ್ಕೆ ರಾಜ್ಯ ಸರ್ಕಾರವನ್ನು ಕೃಷ್ಣ ಅಭಿನಂದಿಸಿದರು.

ಬೆಂಗಳೂರು: ಕೇವಲ ಒಂದೆರಡು ವಾರಗಳ ಹಿಂದೆ ತಾವು ರಾಜಕೀಯದಿಂದ ನಿವೃತ್ತನಾಗಿದ್ದೇನೆ ಎಂದು ಘೋಷಿಸಿದ್ದ ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ (SM Krushna) ಅವರು ಪದ್ಮ ವಿಭೂಷಣ (Padma Vibhushan) ಪ್ರಶಸ್ತಿಯಿಂದ ತಮ್ಮನ್ನು ಗೌರವಿಸಿದ್ದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಶಸ್ತಿ ಸಿಗಬಹುದೆಂದು ತಾವು ನಿರೀಕ್ಷಿಸಿರಲಿಲ್ಲ ಇದು ಬಯಸದೆ ಬಂದ ಭಾಗ್ಯ ಎಂದು ಅವರು ಹೇಳಿದರು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಚಿವ ಸಂಪುಟ ಕೆಲವು ಸದಸ್ಯರು ತಮ್ಮನ್ನು ಸತ್ಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಕೃಷ್ಣ ಅವರು, ತಮ್ಮ ಹೃದಯಕ್ಕೆ ಹತ್ತಿರವಾಗಿರುವ ಮಧ್ಯಾಹ್ನದ ಬಿಸಿಯೂಟ ಮತ್ತು ಯಶಸ್ವಿನಿ ಯೋಜನೆಗಳನ್ನು ಜಾರಿಯಲ್ಲಿಡುವುದರ ಜೊತೆಗೆ ಅವುಗಳಲ್ಲಿ ಸುಧಾರಣೆಗಳನ್ನು ತಂದಿರುವುದಕ್ಕೆ ರಾಜ್ಯ ಸರ್ಕಾರವನ್ನು ಅಭಿನಂದಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jan 27, 2023 12:12 PM