Vijayapura: ಕಸ ವಿಲೇವಾರಿ ಘಟಕಕ್ಕೆ ದಿಢೀರ್ ಭೇಟಿ ಕೊಟ್ಟು ಸ್ವಚ್ಛತೆ ಪರಿಶೀಲನೆ ನಡೆಸಿದ ಲೋಕಾಯುಕ್ತ

Vijayapura: ಕಸ ವಿಲೇವಾರಿ ಘಟಕಕ್ಕೆ ದಿಢೀರ್ ಭೇಟಿ ಕೊಟ್ಟು ಸ್ವಚ್ಛತೆ ಪರಿಶೀಲನೆ ನಡೆಸಿದ ಲೋಕಾಯುಕ್ತ

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 27, 2023 | 11:33 AM

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಇಂದು ನಗರದ ಕಸ ವಿಲೇವಾರಿ ಕುರಿತು ವೀಕ್ಷಣೆ ಮಾಡುವ ಮೂಲಕ ನಗರ ಹಾಗೂ ಜಿಲ್ಲೆಯ ಸ್ಚಚ್ಛತೆಗೆ ಕ್ರಮ ತೆಗೆದುಕೊಂಡಿದ್ದಾರೆ. ಬಳಿಕ ನಗರದ ಹೊರ ಭಾಗದಲ್ಲಿರುವ ಕಸ ವಿಲೇವಾರಿ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ‌ಭೇಟಿ ವೀಕ್ಷಣೆ ಮಾಡಿದರು.

ವಿಜಯಪುರ: ನಗರದಲ್ಲಿ ಕಸ ವಿಲೇವಾರಿ, ಸ್ವಚ್ಛತಾ ಕಾರ್ಯವನ್ನ ಇಂದು(ಜ.27) ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಪರಿಶೀಲನೆ ನಡೆಸಿದ್ದಾರೆ. ಪುರಾತತ್ವ ಇಲಾಖೆ ವ್ಯಾಪ್ತಿಯ ಸ್ಥಳಗಳಲ್ಲಿ ಕಸ ಹಾಕಿರುವುದು ಪತ್ತೆಯಾಗಿದ್ದು, ಪಾಲಿಕೆ ಸಿಬ್ಬಂದಿಗೆ ಕಸ ತೆಗೆಯಲು ಪುರಾತತ್ವ ಇಲಾಖೆಗೆ ಅವಕಾಶ ನೀಡಿಲ್ಲ. ಈ ಸಂಬಂಧ ಡಿಸಿ, ಪಾಲಿಕೆ, ಪುರಾತತ್ವ ಇಲಾಖೆ ಜೊತೆ ಚರ್ಚಿಸುವೆ ಎಂದರು. ಜಿಲ್ಲೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಸ‌‌ ನಿರ್ವಹಣೆ ಕುರಿತು ಜನರು ಕೂಡ ಜಾಗೃತರಾಗಬೇಕು. ಕಸ ನಿರ್ವಹಣೆ, ಸಂಸ್ಕರಣೆ ವಿಚಾರದಲ್ಲಿ ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಇನ್ನು ನ್ಯಾಯಮೂರ್ತಿಯವರಿಗೆ ವಿಜಯಪುರ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಿಗತ್ತಿ, ಪಾಲಿಕೆ ಆಯುಕ್ತ ವಿಜಯಕುಮಾರ್, ವಿಜಯಪುರ ತಹಶೀಲ್ದಾರ ಸಿದ್ದರಾಯ ಭೋಸಗಿ ಹಾಗೂ ಇತರರು ಸಾಥ್​ ನೀಡಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ