Assembly Polls: ಶ್ರೀರಾಮುಲು ಎಲ್ಲಿಂದ ಸ್ಪರ್ಧಿಸುತ್ತಾರೆ ನನಗೆ ಮುಖ್ಯವಲ್ಲ, ಕೆಆರ್ ಪಿಪಿಯನ್ನು ಅಧಿಕಾರಕ್ಕೆ ತರೋದು ಮಾತ್ರ ನನ್ನ ಗುರಿ: ಗಾಲಿ ಜನಾರ್ಧನ ರೆಡ್ಡಿ
ಕೆ ಆರ್ ಪಿ ಪಿಯನ್ನು ಬಲಪಡಿಸುವುದು ಮತ್ತು ಅಧಿಕಾರಕ್ಕೆ ತರುವುದೊಂದೇ ತಮ್ಮ ಗುರಿಯಾಗಿದೆ, ಬೇರೆ ಪಕ್ಷಗಳು ಮತ್ತು ಅವುಗಳ ನಾಯಕರ ಬಗ್ಗೆ ಮಾತಾಡುವುದಿಲ್ಲ ಎಂದು ಜನಾರ್ಧನ ರೆಡ್ಡಿ ಹೇಳಿದರು.
ರಾಯಚೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಸಂಸ್ಥಾಪಕ-ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ (G Janardhan Reddy) ಅವರು ಪಕ್ಷದ ಪ್ರಚಾರ ಕಾರ್ಯದಲ್ಲಿ ವಿಶ್ರಮಿಸದೆ ತೊಡಗಿದ್ದಾರೆ. ರಾಯಚೂರು ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತಾಡಿದ ರೆಡ್ಡಿ ಅವರು, ಹಿಂದೊಮ್ಮೆ ತಮ್ಮ ಪರಮಮಿತ್ರನಾಗಿದ್ದ ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಅವರಿಗೆ ಕ್ಷೇತ್ರ ಹುಡುಕಾಡುವಂಥ ಸ್ಥಿತಿ ಎದುರಾಗಿರುವ ಬಗ್ಗೆ ಕಾಮೆಂಟ್ ಮಾಡಲಿಲ್ಲ. ಕೆ ಆರ್ ಪಿ ಪಿಯನ್ನು ಬಲಪಡಿಸುವುದು ಮತ್ತು ಅಧಿಕಾರಕ್ಕೆ ತರುವುದೊಂದೇ ತಮ್ಮ ಗುರಿಯಾಗಿದೆ, ಬೇರೆ ಪಕ್ಷಗಳು ಮತ್ತು ಅವುಗಳ ನಾಯಕರ ಬಗ್ಗೆ ಮಾತಾಡುವುದಿಲ್ಲ ಎಂದು ಜನಾರ್ಧನ ರೆಡ್ಡಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos