ದೇವಸ್ಥಾನದಲ್ಲಿ ಅರ್ಚನೆ ಮಾಡಿಸುವಾಗ ಹೆಚ್ ಡಿಡಿ ಕುಟುಂಬದ ಸದಸ್ಯರ ಹೆಸರು ಹೇಳಿದ ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ ಹೆಸರು ಮರೆತರು!
ದೇವಸ್ಥಾನದ ಉದ್ಘಾಟನೆಗೆ ಬಂದಿದ್ದ ಭವಾನಿಯವರು, ಹೆಚ್ ಡಿ ದೇವೇಗೌಡರ ಕುಟುಂಬದ ಸದಸ್ಯರ ಹೆಸರಲ್ಲಿ ಅರ್ಚನೆ ಮಾಡಿಸುವಾಗ ಅನಿತಾ ಕುಮಾರಸ್ವಾಮಿ ಹೆಸರು ಮರೆತರು.
ಹಾಸನ: ಕಳೆದ ಕೆಲದಿನಗಳಿಂದ ಜೆಡಿ(ಎಸ್) ಮುಖಂಡ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಭಾರೀ ಸುದ್ದಿಯಲ್ಲಿದ್ದಾರೆ. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಅವರು ಹಾಸನದಿಂದ (Hassan) ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಅವರು ಸುದ್ದಿಗೆ ಬಂದರು. ಅವರಿಗೆ ಟಿಕೆಟ್ ನೀಡುವ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಯಾವುದನ್ನೂ ಖಚಿತವಾಗಿ ಹೇಳಿಲ್ಲ. ಏತನ್ಮಧ್ಯೆ, ಬಿಜೆಪಿ ಶಾಸಕ ಸಿಟಿ ರವಿ ಅವರು ಭವಾನಿ ಅವರಿಗೆ ಬಿಜೆಪಿಯಲ್ಲಿ ಸ್ವಾಗತವಿದೆ ಹೇಳಿದ್ದಾರೆ. ಭವಾನಿ ಅವರು ರವಿಯವರು ಆಡಿರುವ ಮಾತಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಶುಕ್ರವಾರದಂದು ಹಾಸನ ನಗರದ ಹೊರವಲಯದಲ್ಲಿರುವ ಬುಸ್ತೇನಹಳ್ಳಿ ಗ್ರಾಮದ ಮಾಸ್ತಿಯಮ್ಮ ದೇವಿ ದೇವಸ್ಥಾನದ ಉದ್ಘಾಟನೆಗೆ ಬಂದಿದ್ದ ಭವಾನಿಯವರು, ಹೆಚ್ ಡಿ ದೇವೇಗೌಡರ ಕುಟುಂಬದ ಸದಸ್ಯರ ಹೆಸರಲ್ಲಿ ಅರ್ಚನೆ ಮಾಡಿಸುವಾಗ ಅನಿತಾ ಕುಮಾರಸ್ವಾಮಿ (Anita Kumaraswamy) ಹೆಸರು ಮರೆತರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos