Mandya: ಪ್ರಜಾಧ್ವನಿಯಾತ್ರೆ ಸಮಾವೇಶದಲ್ಲಿ ಜನಕ್ಕಿಂತ ಜಾಸ್ತಿ ಖಾಲಿ ಕುರ್ಚಿ ಕಂಡವು!
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಂಥ ನಾಯಕರು ಮಂಡ್ಯದಲ್ಲಿ ಜನರನ್ನು ಸೆಳೆಯಲು ವಿಫಲರಾದರೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಬಹುದು ಅಂತ ಊಹಿಸಬಹುದು.
ಮಂಡ್ಯ: ನಗರದಲ್ಲಿ ಶುಕ್ರವಾರ ನಡೆದ ಪ್ರಜಾಧ್ವನಿ ಯಾತ್ರೆ (Prajadhvani Yatre) ಸಮಾವೇಶ ಭಾರೀ ಸಕ್ಸಸ್ ಅಂತ ಕಾಂಗ್ರೆಸ್ ನಾಯಕರು ಹೇಳಬಹುದು. ಆದರೆ ಗ್ರೌಂಡ್ ರಿಪೋರ್ಟ್ ಅದಕ್ಕೆ ವ್ಯತಿರಿಕ್ತವಾಗಿದೆ ಮಾರಾಯ್ರೇ. ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗಾಗಿ ಸಾವಿರಾರು ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅವುಗಳಲ್ಲಿ ಅರ್ಧಕ್ಕಿಂತ ಜಾಸ್ತಿ ಕುರ್ಚಿಗಳು ಖಾಲಿಯಿದ್ದವು. ವಿಡಿಯೋದಲ್ಲಿ ಅದು ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ ರಂಥ (DK Shivakumar) ನಾಯಕರು ಮಂಡ್ಯದಲ್ಲಿ ಜನರನ್ನು ಸೆಳೆಯಲು ವಿಫಲರಾದರೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಬಹುದು ಅಂತ ಊಹಿಸಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

