ಬಿಎಸ್ ಯಡಿಯೂರಪ್ಪವರ ಬಗ್ಗೆ ಹಗುರವಾಗಿ ಮಾತಾಡಿದರೆ ಅದು ಪಕ್ಷಕ್ಕಾಗುವ ಧಕ್ಕೆ: ಬಿವೈ ವಿಜಯೇಂದ್ರ
ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪನವರು ನಾಡಿನ ಧೀಮಂತ ನಾಯಕರಾಗಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತಾಡಿದರೆ ಅದು ಪಕ್ಷಕ್ಕೆ ಬೀಳುವ ಪೆಟ್ಟು ಎಂದು ವಿಜಯೇಂದ್ರ ಹೇಳಿದರು.
ವಿಜಯಪುರ: ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಲಿಗೆ ಮೇಲೆ ಹಿಡಿತವಿರಲಿ ಅಂತ ಎಚ್ಚರಿಕೆ ನೀಡಿದ ನಂತರ ವಿಜಯಪುರದ ಶಾಸಕ ಮಾಧ್ಯಮಗಳ ವೀರಾವೇಶದಿಂದ ಹೇಳಿಕೆ ನೀಡುವುದು ನಿಂತಿದೆ. ಬಿ ಎಸ್ ಯಡಿಯೂರಪ್ಪ (BS Yediyurappa) ಮತ್ತು ಅವರ ಕುಟುಂಬದ ವಿರುದ್ಧವೇ ಯತ್ನಾಳ್ ಹೆಚ್ಚು ಆರೋಪಗಳನ್ನು ಮಾಡುತ್ತಿದ್ದರು. ಈಗ ಅದೆಲ್ಲ ನಿಂತುಬಿಟ್ಟಿದೆ. ವಿಜಯಪುರದ ಹೊರ್ತಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಇದನ್ನು ಒಂದು ಒಳ್ಳೆಯ ಬೆಳವಣಿಗೆ ಅಂತ ಹೇಳಿದರು. ಯತ್ನಾಳ್ ಅವರು ತನಗಿಂತ ಹಿರಿಯರು, ಹಾಗಾಗಿ ತಾನು ಅವರ ಬಗ್ಗೆ ಏನೂ ಮಾತಾಡುವುದಿಲ್ಲ; ಆದರೆ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪನವರು ನಾಡಿನ ಧೀಮಂತ ನಾಯಕರಾಗಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತಾಡಿದರೆ ಅದು ಪಕ್ಷಕ್ಕೆ ಬೀಳುವ ಪೆಟ್ಟು ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ