ಸಂತೆಯಲ್ಲಿ ಕಂತೆ ಕಂತೆ ಖೋಟಾ ನೋಟ್ ಜೊತೆ ಪತ್ತೆಯಾದ ಐನಾತಿಗಳು ಅರೆಸ್ಟ್

ನಕಲಿ ನೋಟ್​​ ಮುದ್ರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೂರ್ಯಸಿಟಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಮೂಲದ ಸುರೇಶ್ ಹಾಗೂ ನರೇಶ್ ಬಂಧಿತ ಆರೋಪಿಗಳು.

  • TV9 Web Team
  • Published On - 21:15 PM, 12 Jan 2021
ಸಂತೆಯಲ್ಲಿ ಕಂತೆ ಕಂತೆ ಖೋಟಾ ನೋಟ್ ಜೊತೆ ಪತ್ತೆಯಾದ ಐನಾತಿಗಳು ಅರೆಸ್ಟ್
ಸಂತೆಯಲ್ಲಿ ಕಂತೆ ಕಂತೆ ಖೋಟಾ ನೋಟ್ ಜೊತೆ ಪತ್ತೆಯಾದ ಐನಾತಿಗಳು ಅರೆಸ್ಟ್

ಬೆಂಗಳೂರು: ನಕಲಿ ನೋಟ್​​ ಮುದ್ರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೂರ್ಯಸಿಟಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಮೂಲದ ಸುರೇಶ್ ಹಾಗೂ ನರೇಶ್ ಬಂಧಿತ ಆರೋಪಿಗಳು.

ಬಂಧಿತರಿಂದ ನೋಟ್​ಪ್ರಿಂಟ್​ ಮಷಿನ್ ಹಾಗೂ 6 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. 100, 200, 500 ಮುಖಬೆಲೆಯ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ.

ಕಲರ್ ಮಷಿನ್ ಮೂಲಕ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ವಂಚಕರು ಸಂತೆ ಸೇರಿದಂತೆ ಅಂಗಡಿಗಳಲ್ಲಿ ಇದನ್ನು ಬಳಸುತ್ತಿದ್ದರು. ಅಂತೆಯೇ, ಈ ಸಲ ಸಂತೆ ಅಂಗಡಿಗಳಿಗೆ ನೋಟು ನೀಡುತ್ತಿದ್ದಾಗ ಆರೋಪಿಗಳು ಅಂದರ್ ಆಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೂರ್ಯನಗರ ಠಾಣೆಯ ಪೊಲೀಸರು ಇಬ್ಬರನ್ನು ಅರೆಸ್ಟ್​ ಮಾಡಿದ್ದಾರೆ.

ಸಿಟಿ ಇನ್​ಸ್ಟಿಟ್ಯೂಟ್​ ಮುಂದೆ.. ಜಿಂಕೆ ಕೊಂಬು ಮಾರಲು ಯತ್ನಿಸುತ್ತಿದ್ದ ಕಿರಾತಕ ಅಂದರ್​