AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IMA caseI ಹೊಸ ಸಾಕ್ಷ್ಯಾಧಾರಗಳ ಹುಡುಕಾಟದಲ್ಲಿ ಸಿಬಿಐ.. ಐಪಿಎಸ್​ ಅಧಿಕಾರಿಗಳ ಆಸ್ತಿ ಜಪ್ತಿ ಯಾವಾಗ?

ಹಿರಿಯ ಪೊಲೀಸ್​ ಅಧಿಕಾರಿ ನಿಂಬಾಳ್ಕರ್​ ಅವರಿಗೆ ಹೊಸ ವರ್ಷ ಇನ್ನು ಹೆಚ್ಚಿನ ಸಮಸ್ಯೆ ತರಬಹುದೇ? ಅಥವಾ ಈ ಹಿಂದಿನಂತೆ IMA ಪ್ರಕರಣದಲ್ಲಿಯೂ ಖುಲಾಸಾಗಿ ಹೊರಗೆ ಬರುತ್ತಾರೋ ಎಂಬ ಕುತೂಹಲಕ್ಕೆ ಇನ್ನೂ ಉತ್ತರ ಸಿಗುತ್ತಿಲ್ಲ.

IMA caseI ಹೊಸ ಸಾಕ್ಷ್ಯಾಧಾರಗಳ ಹುಡುಕಾಟದಲ್ಲಿ ಸಿಬಿಐ.. ಐಪಿಎಸ್​ ಅಧಿಕಾರಿಗಳ ಆಸ್ತಿ ಜಪ್ತಿ ಯಾವಾಗ?
ಹೇಮಂತ್​ ನಿಂಬಾಳ್ಕರ್​
ಡಾ. ಭಾಸ್ಕರ ಹೆಗಡೆ
| Edited By: |

Updated on: Jan 12, 2021 | 5:29 PM

Share

ಸೋಮವಾರ ರಾತ್ರಿ ನಾಗರಿಕ ಹಕ್ಕುಗಳ ನಿರ್ದೇಶನಾಲಯದ ಐ.ಜಿ.ಯಾಗಿ ವರ್ಗವಾಗಿರುವ ಹೇಮಂತ್​ ನಿಂಬಾಳ್ಕರ್​ ಅವರಿಗೆ ಒಂದಾದ ಮೇಲೊಂದರಂತೆ ಕಂಟಕಗಳು ಸುತ್ತಿಕೊಳ್ಳುತ್ತಿವೆ. ಕಳೆದ ತಿಂಗಳು ಹಿರಿಯ ಐಪಿಎಸ್​ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರ ಮೇಲೆ ಕೆಸರೆರಚೆಲು ಹೋದ ನಿಂಬಾಳ್ಕರ್​ ತಾವೇ ಕೆಸರಿನಲ್ಲಿ ಸಿಲುಕಿಕೊಂಡರು. ಈಗ IMA ಕೇಸಿನಲ್ಲಿ ಅವರಿಗೆ ಇನ್ನೊಂದು ಸಂಕಷ್ಟ ಬಂದೊದಗುವುದು ನಿಶ್ಚಿತವಾಗಿದೆ.

ಚೀಟಿ ಹಾಕುವ IMA ಹಣಕಾಸು ಸಂಸ್ಥೆಯು ಜನರಿಗೆ ಮಾಡಿದ ಮೋಸದ ಪ್ರಕರಣದಲ್ಲಿ ಈಗ ನಿಂಬಾಳ್ಕರ್​ಗೆ ಮತ್ತೆ ಸಂಕಟ ಬರುವ ಸಾಧ್ಯತೆ ಇದೆ. IMA ಸಕ್ಷಮ ಪ್ರಾಧಿಕಾರದ ಅಧಿಕಾರಿ ಹರ್ಷ ಗುಪ್ತಾ ಈ ಪ್ರಕರಣದ ಐವರು ಆರೋಪಿ ಅಧಿಕಾರಿಗಳ ಆಸ್ತಿಪಾಸ್ತಿ ಜಪ್ತಿ ಮಾಡಿಕೊಳ್ಳಲು ಮನವಿ ಮಾಡಿದ್ದಾರೆ. ಈ ಕುರಿತು ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ.

ತಮ್ಮ ಪತ್ರದಲ್ಲಿ ಹರ್ಷಗುಪ್ತಾ ಅವರು IMA ಕೇಸ್ ನಲ್ಲಿ ಆರೋಪಿ 24ರಿಂದ ಆರೋಪಿ 28ರವರೆಗಿನ ಅಧಿಕಾರಿಗಳು ಈ ಪ್ರಕರಣದಲ್ಲಿ ಎಷ್ಟು ಭಾಗಿಯಾಗಿದ್ದಾರೆ. ಮತ್ತು ಅವರ ಎಷ್ಟು ಆಸ್ತಿಯನ್ನು ಸರಕಾರ ವಶಪಡಿಸಿಕೊಳ್ಳಬೇಕು ಎಂಬ ವಿವರವನ್ನು ಸಿಬಿಐನಿಂದ ಪಡೆಯಿರಿ. ಆರೋಪಿ ನಂ. 24 – ಆಗಿನ CID DySp E.B. ಶ್ರೀಧರ್, ಆರೋಪಿ ನಂ. 25 – ಹೇಮಂತ್ ಎಂ ನಿಂಬಾಳ್ಕರ್. ಆಗ CID ಆರ್ಥಿಕ ಅಪರಾಧ ಸೆಲ್ ಮುಖ್ಯಸ್ಥರಾಗಿದ್ದವರು  ನಿಂಬಾಳ್ಕರ್​. ಅ. 26-ಅಜಯ್ ಹಿಲೋರಿ, ಎ.27-ಇನ್ಸ್ ಪೆಕ್ಟರ್ ರಮೇಶ್, ಎ 28 – ಗೌರಿಶಂಕರ್ ಅವರ ಆಸ್ತಿ ಜಪ್ತಿ ಮಾಹಿತಿ ಕೋರಿ ಸಿಬಿಐನಿಂದ ವರದಿ ಪಡೆದು ನಮಗೆ ಮಾಹಿತಿ ಕೊಡಿ ಎಂದು ಅವರು ಡಿಸೆಂಬರಿನಲ್ಲಿ ಪತ್ರ ಬರೆದಿದ್ದಾರೆ.

ಈಗ ಏನಾಗಬಹುದು? ಹರ್ಷ ಗುಪ್ತಾ ಅವರ ಪತ್ರದ ಆಧಾರದ ಮೇಲೆ ಕಂದಾಯ ಇಲಾಖೆಯು ಕೇಂದ್ರಿಯ ತನಿಖಾ ದಳಕ್ಕೆ (CBI) ಪತ್ರ ಬರೆದಿದ್ದು ಅವರ ಉತ್ತರಕ್ಕೆ ನೀರೀಕ್ಷಿಸಲಾಗುತ್ತಿದೆ. ಕಂದಾಯ ಇಲಾಖೆ ಮೂಲಗಳ ಪ್ರಕಾರ, ಸಿಬಿಐ ಈ ವಿವರ ಸಲ್ಲಿಸಲು ಇನ್ನೂ ಕೆಲದಿನ ಬೇಕು ಎಂದು ತಿಳಿಸಿದೆ. ತನಗೆ ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಸಾಕ್ಷ್ಯಾಧಾರಗಳು ಸಿಗುತ್ತಿವೆ. ಆದ್ದರಿಂದ ತನಿಖೆಯನ್ನು ಬೇರೆ ಬೇರೆ ಕೋನದಿಂದ ಮುಂದುವರಿಸಿದ್ದೇವೆ.

ಆ ತನಿಖೆ ಮುಗಿದಾಗ, ನಿಂಬಾಳ್ಕರ್​ ಮತ್ತು ಇತರೇ ಪೊಲೀಸ್ ಅಧಿಕಾರಿಗಳ ವಿರುದ್ಧ ಇನ್ನೂ ಹೆಚ್ಚಿನ ಸಾಕ್ಷ್ಯ ಸಿಗುವ ಸಾಧ್ಯತೆ ಇದೆ. ಆ ಮಾಹಿತಿ ದೊರೆತ ನಂತರ ಎಷ್ಟು ಆಸ್ತಿಪಾಸ್ತಿಯನ್ನು ವಶಪಡಿಸಿಕೊಳ್ಳಬೇಕು ಎಂದು ನಿರ್ಧರಿಸಲಾಗುವುದು. ಆದ್ದರಿಂದ ಅಲ್ಲಿಯವರೆಗೆ ಕಂದಾಯ ಇಲಾಖೆ ವರಿದಿಗೆ ಕಾಯಲು ನಿರ್ಧರಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.