Padma Awards 2023: ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿವಾಸಕ್ಕೆ ಸಿಎಂ ಬೊಮ್ಮಾಯಿ ಭೇಟಿ
ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. S.M.ಕೃಷ್ಣ ಸಿಎಂ ಆಗಿದ್ದಾಗ ಹಲವು ಯೋಜನೆಗಳ ಜಾರಿ ಮಾಡಿದ್ದಾರೆ. ಎಸ್.ಎಂ.ಕೃಷ್ಣ ಸಾರ್ವಜನಿಕ ಬದುಕು ನಮಗೆಲ್ಲರಿಗೂ ಮಾದರಿ -ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ(SM Krishna) ಅವರಿಗೆ ಪದ್ಮವಿಭೂಷಣ(Padma Awards 2023) ಗೌರವ ಸಿಕ್ಕ ಹಿನ್ನೆಲೆ ಇಂದು ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಸಿಎಂ ಬೊಮ್ಮಾಯಿಗೆ ಸಚಿವರಾದ ಅಶೋಕ್, ಡಾ.ಸುಧಾಕರ್ ಸಾಥ್ ನೀಡಿದ್ರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. S.M.ಕೃಷ್ಣ ಸಿಎಂ ಆಗಿದ್ದಾಗ ಹಲವು ಯೋಜನೆಗಳ ಜಾರಿ ಮಾಡಿದ್ದಾರೆ. ಎಸ್.ಎಂ.ಕೃಷ್ಣ ಸಾರ್ವಜನಿಕ ಬದುಕು ನಮಗೆಲ್ಲರಿಗೂ ಮಾದರಿ ಎಂದರು.
ಕರ್ನಾಟಕದ ಹೆಮ್ಮೆಯ, ನಾಡು ಕಂಡ ಅಪ್ರತಿಮ, ಸರಳ ಸಜ್ಜನಿಕೆಯ, ಸುರಾಜ್ಯ ಕೊಟ್ಟಿರುವ, ಉತ್ತಮ ಆಡಳಿತ ವ್ಯವಸ್ಥೆಗೆ ಹೆಸರಾಗಿರುವ S.M.ಕೃಷ್ಣಗೆ ಭಾರತ ಸರ್ಕಾರ ರಾಷ್ಟ್ರಪತಿಗಳು, ಪ್ರಧಾನಿಗಳು ಶಿಫಾರಿಸ್ಸಿನ ಮೇರೆಗೆ ಪದ್ಮ ವಿಭೂಷಣ ಕೊಟ್ಟಿರೋದು ನಮಗೆಲ್ಲರಿಗೂ ಸಂತಸ, ಆನಂದ ತಂದಿದೆ. ಅವರ ಆಡಳಿತ ಕಾಲದಲ್ಲಿ ಹತ್ತು ಹಲವು ಸಮಸ್ಯೆ ಎದುರಿಸಿರೋದು ಒಂದು ಕಡೆ ವಿಶೇಷವಾಗಿ ಎಲ್ಲ ವರ್ಗದವರಿಗೂ ವಿಶೇಷ ಯೋಜನೆಗಳನ್ನು ಕೊಟ್ಟಿದ್ದಾರೆ. ರೈತರ ಕುಟುಂಬಕ್ಕಾಗಿ ಆರೋಗ್ಯ ಯೋಜನೆಯನ್ನು ಮೊಟ್ಟ ಮೊದಲ ಬಾರಿಗೆ ಕೊಟ್ಟವರು. ಮಧ್ಯದಲ್ಲಿ ಅದು ನಿಂತು ಹೋಗಿತ್ತು, ಇವಾಗ ನಾನು ಆ ಯೋಜನೆಗೆ 300 ಕೋಟಿ ಕೊಟ್ಟಿದ್ದೇನೆ, ಅದರಲ್ಲಿ ಮತ್ತಷ್ಟು ಬದಲಾವಣೆ ತಂದು ಮುಂದುವರಿಸ್ತೀವಿ. ಹಸಿದ ಹೊಟ್ಟೆಯಲ್ಲಿ ವಿದ್ಯೆ ಕಲಿಯೋದು ಕಷ್ಟ ಎಂದು ಅರಿತು, ಮಧ್ಯಾಹ್ನದ ಬಿಸಿಯೂಟ ತಂದವರು. ಕಾವೇರಿ ಹೋರಾಟ, ಕೃಷ್ಣ ವಿಷಯದಲ್ಲಿ, ಉತ್ತರ ಕರ್ನಾಟಕದ ವಿಷಯದಲ್ಲಿ ಅವರು ತೆಗೆದುಕೊಂಡ ನಿಲುವನ್ನು ನಾವು ನೋಡಿದ್ದೇವೆ. ಐಟಿ ಬಿಟಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರೋದು ಎಸ್ ಎಂ ಕೃಷ್ಣರವರಿಂದ. ಎಲ್ಲ ರಂಗದಲ್ಲೂ ಉತ್ತಮ ಅಡಳಿತ, ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ: Hampi Utsav 2023: ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಇಂದು ಸಿಎಂ ಬೊಮ್ಮಾಯಿ ಚಾಲನೆ
ಬಿಸಿಯೂಟ, ಯಶಸ್ವಿನಿ ಯೋಜನೆ ನನ್ನ ಹೃದಯಕ್ಕೆ ಹತ್ತಿರವಾದ ಯೋಜನೆ
ಹಾಗೂ ಇದೇ ವೇಳೆ ಮಾತನಾಡಿದ ಎಸ್.ಎಂ.ಕೃಷ್ಣ, ನನ್ನ ಯೋಗ್ಯತೆಗೂ ಮೀರಿದ ದೊಡ್ಡ ಗೌರವವನ್ನು ಕೇಂದ್ರ ಸರ್ಕಾರದ ಪ್ರಧಾನಿಗಳು ಹಾಗೂ ಅಮಿತ್ ಶಾ ಅವ್ರು ನನಗಾಗಿ ಮಾಡಿಕೊಟ್ಟಿದ್ದಾರೆ. ಇದು ಬಯಸದೇ ಬಂದ ಭಾಗ್ಯವಾಗಿದೆ. ನಾನು ಇದನ್ನು ಕನಸ್ಸು ಮನಸ್ಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ. ಪದ್ಮವಿಭೂಷಣ ಕೊಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ. ಅದಕ್ಕಾಗಿ ನಾನು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬಿಸಿಯೂಟ ಮತ್ತೆ ಯಶಸ್ವಿನಿ ನನ್ನ ಹೃದಯದ ಹತ್ತಿರ ಇರುವ ಯೋಜನೆ. ರಾಜ್ಯ ಸರ್ಕಾರ ನನ್ನ ಬಗ್ಗೆ ಬಹಳ ಒಳ್ಳೆಯ ರೀತಿಯಲ್ಲಿಯೇ ನಡೆಸಿಕೊಂಡು ಬಂದಿದೆ. ಮೊದಲು ಕೆಂಪೇಗೌಡ ಪ್ರಶಸ್ತಿ, ಆ ನಂತರ ಪದ್ಮ ವಿಭೂಷಣ ಪ್ರಶಸ್ತಿ ಬಂದಿದೆ. ಇವೆಲ್ಲವೂ ಕೂಡ ನನಗೆ ದೊಡ್ಡ ಪ್ರಶಸ್ತಿಗಳು. ಅದಕ್ಕಾಗಿ ನಾನು ಸಿಎಂ ಸೇರಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೆಂಪೇಗೌಡ ಹೇಗೆ ಬೆಂಗಳೂರು ಕಟ್ಟಿದ್ರು, ಅದೆ ರೀತಿ ಬೆಂಗಳೂರು ಅಭಿವೃದ್ಧಿ ಮಾಡಿದ್ದು ಎಸ್.ಎಂ.ಕೃಷ್ಣ
ಕೃಷ್ಣ ಅವರಿಗೆ ಪ್ರಶಸ್ತಿ ಬಂದಿದೆ, ಅವರ ಯೋಗ್ಯತೆಗೆ ತಕ್ಕ ಪ್ರಶಸ್ತಿ ಬಂದಿದೆ. ಅವರ ಪದ ಪ್ರಯೋಗ ಅಷ್ಟು ಹರಿತ, ಶುದ್ಧವಾಗಿತ್ತು. ಬೆಂಗಳೂರು ಐಟಿ ಸಿಟಿ ಆಗಿದ್ರೆ ಕೃಷ್ಣ ಅವರು ಕಾರಣ. ಕೆಂಪೇಗೌಡ ಹೇಗೆ ಬೆಂಗಳೂರು ಕಟ್ಟಿದ್ರು, ಅದೆ ರೀತಿಯಲ್ಲಿ ಬೆಂಗಳೂರು ಅಭಿವೃದ್ಧಿ ಮಾಡಿದ್ದು ಕೃಷ್ಣ ಅವರು. ಬೆಂಗಳೂರು ಅಭಿವೃದ್ಧಿ ಬಗ್ಗೆ ಮೊದಲ ಸಾಲಿನಲ್ಲಿ ಕೃಷ್ಣ ಅವರು ನಿಲ್ತಾರೆ. ರಾಜಕಾರಣಿ ನಡವಳಿಕೆ ಹೇಗೆ ಇರಬೇಕು ಅಂತ ತೊರಿಸಿಕೊಟ್ಟವರು. ಟೀಕೆ ಟಿಪ್ಪಣಿಗೆ ಅವರದೆ ರೀತಿಯ ಉತ್ತರ ಕೊಟ್ವವರು. ನಾನು ಅಭಿಮಾನಿಯಾಗಿ ಶುಭ ಹಾರೈಕೆ ಮಾಡುತ್ತೇನೆ ಎಂದು ಸಚಿವ ಆರ್ ಅಶೋಕ್ ಶುಭ ಹಾರೈಸಿದ್ರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ